ಇದು ಇತ್ತೀಚಿಗೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಬೀಚ್ ಗಳಲ್ಲಿ ಒಂದು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿಯಲ್ಲಿರುವ (Koderi, Byndoor, Udupi) ಈ ಬೀಚ್ ಪ್ರವಾಸಿಗರ (Tourism) ಪಾಲಿಗೆ ಸ್ವರ್ಗ ಎಂದರೆ ತಪ್ಪಾಗಲಾರದು. ಇಲ್ಲಿ ಸಮುದ್ರವನ್ನು ಸೀಳಿಕೊಂಡು ಸಾಗುವ ಸೀ ವಾಕ್ ಮೂಲಕ ಸಂಜೆಯ ವೇಳೆಗೆ ಸಂಚರಿಸುವುದೇ ಒಂದು ವಿಶಿಷ್ಟ ಅನುಭವ. ಹಾಗಾದ್ರೆ ಯಾವುದು ಇದು ಬೀಚು ಅಂತೀರಾ, ಏನಿದರ ಕತೆ? ಈ ಸ್ಟೋರಿ ಓದಿ
ಹೌದು ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಸ್ಥಳಗಳು ಸಾಕಷ್ಟು ಇವೆ. ಅದರಲ್ಲೂ ಬೈಂದೂರು ತಾಲೂಕು ಸಂಪೂರ್ಣವಾಗಿ ಪ್ರವಾಸೋದ್ಯಮಕ್ಕಾಗಿಯೇ ಹೇಳಿಮಾಡಿಸಿದಂತೆ ಇರುವುದನ್ನು ನಾವು ಕಾಣಬಹುದು. ಈಗಾಗಲೇ ಬೈಂದೂರು ತಾಲೂಕಿನ ಮರವಂತೆ ಬೀಚ್ ವಿಶ್ವ ಪ್ರಸಿದ್ಧವಾಗಿದೆ, ಒಂದು ಕಡೆ ನದಿ ಇನ್ನೊಂದು ಕಡೆ ಸಮುದ್ರ ಮಧ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66… ಇದರ ಮೇಲೆ ಸಂಚಾರ ಮಾಡೋದೇ ಒಂದು ಸುಂದರ ಅನುಭವ. ಸದ್ಯಕ್ಕೆ ಇದರ ಸಾಲಿಗೆ ಬೈಂದೂರು ತಾಲೂಕಿನ ಕೊಡೇರಿಯ ಗಂಗೆಬೈಲು ಬೀಚ್ (Gangebailu Beach) ಸೇರಿಕೊಳ್ಳುವ ತವಕದಲ್ಲಿದೆ.
ಕೊಡಿರಿ ಗಂಗೆಬೈಲು ಬೀಚ್ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣ. ಸಮುದ್ರ, ಸೀ ವಾಕ್ ಮತ್ತು ಎಡಮಾವಿನ ಹೊಳೆಯ ನದಿ ಸಂಗಮ ಇಲ್ಲಿನ ವಿಶೇಷತೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬೈಲೂರು ಪಟ್ಟಣದಿಂದ ಸರಿಸುಮಾರು 10 ಕಿ.ಮೀ ದೂರದಲ್ಲಿರುವ ಕೊಡೇರಿ ಗಂಗೆಬೈಲು ಒಂದು ಅದ್ಭುತ ಪ್ರಕೃತಿಯ ರಮಣೀಯ ಸುಂದರ ನೈಸರ್ಗಿಕ ತಾಣ.
ಗಂಗೆ ಬೈಲು ಬೀಚ್ ನಲ್ಲಿ ಸುಮಾರು ಆರು ವರ್ಷಗಳ ಹಿಂದೆ ಸೀ ವಾಕ್ ಯೋಜನೆ ಆರಂಭಗೊಂಡು ಮೊದಲನೇ ಹಂತದ ಕಾಮಗಾರಿ ಮುಗಿದಿದೆ. ಸಮುದ್ರವನ್ನು ಸೀಳಿಕೊಂಡು ಹೋಗಿರುವಂತೆ ಸೀ ವಾಕ್ ನಿರ್ಮಾಣವಾಗಿದ್ದು, ಸಂಜೆಯ ವೇಳೆಯಲ್ಲಿ ಸೂರ್ಯಸ್ತ ನೋಡುತ್ತಾ ಸೀ ವಾಕ್ ನಲ್ಲಿ ಸಂಚರಿಸುವುದೇ ಒಂದು ಅದ್ಭುತ ಅನುಭವ. ಸದ್ಯ ಈ ಸುಂದರ ಬೀಚ್ ಗೆ ಸೂಕ್ತ ಸಂಪರ್ಕ ರಸ್ತೆಯ ಅಗತ್ಯತೆ ಇದೆ.
Also Read: ನವರಾತ್ರಿ ಸಾಲು ಸಾಲು ರಜೆ: ಮಲ್ಪೆ ಬೀಚ್, ಸೈಂಟ್ ಮೇರಿಸ್ ಐಲ್ಯಾಂಡ್ನಲ್ಲಿ ಜನವೋ ಜನ
ಒಟ್ಟಾರೆಯಾಗಿ ಬೈಂದೂರು ತಾಲೂಕಿನ ಕೊಡೇರಿ ಗಂಗೆಬೈಲು ಬೀಚ್ ಒಂದು ಪ್ರಾಕೃತಿಕ ಸುಂದರ ತಾಣ ಎಂದರೆ ತಪ್ಪಾಗಲಾರದು. ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಸೂಕ್ತ ವ್ಯವಸ್ಥೆಯನ್ನ ಕಲ್ಪಿಸಿದಲ್ಲಿ, ಮುಂದೆ ಜಿಲ್ಲೆಯ ಅತ್ಯುತ್ತಮ ಪ್ರವಾಸಿ ತಾಣವಾಗಿ ಇದು ರೂಪುಗೊಳ್ಳುವುದರಲ್ಲಿ ಎರಡು ಮಾತಿಲ್ಲ .
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:09 pm, Fri, 27 October 23