ಉಡುಪಿ ಇಂದ್ರಾಳಿ ರೇಲ್ವೆ ಬ್ರಿಡ್ಜ್ ರಸ್ತೆ ಅವ್ಯವಸ್ಥೆ : ನಿತ್ಯಾಂನಂದ ಒಳಕಾಡುನಿಂದ ವಿನೂತನ ಪ್ರತಿಭಟನೆ

| Updated By: ವಿವೇಕ ಬಿರಾದಾರ

Updated on: Sep 13, 2022 | 5:54 PM

ಉಡುಪಿ-ಮಣಿಪಾಲ ರಸ್ತೆಯಲ್ಲಿರುವ ಇಂದ್ರಾಳಿ ರೇಲ್ವೆ ಬ್ರಿಡ್ಜ್ ರಸ್ತೆಯ ಅವ್ಯವಸ್ಥೆ ವಿಚಾರವಾಗಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ವಿನೂತನ ಪ್ರತಿಭಟನೆ ಮಾಡಿದ್ದಾರೆ.

ಉಡುಪಿ ಇಂದ್ರಾಳಿ ರೇಲ್ವೆ ಬ್ರಿಡ್ಜ್ ರಸ್ತೆ ಅವ್ಯವಸ್ಥೆ : ನಿತ್ಯಾಂನಂದ ಒಳಕಾಡುನಿಂದ ವಿನೂತನ ಪ್ರತಿಭಟನೆ
ಉರುಳು ಸೇವೆ ಮೂಲಕ ಪ್ರತಿಭಟನೆ
Follow us on

ಉಡುಪಿ: ಉಡುಪಿ-ಮಣಿಪಾಲ ರಸ್ತೆಯಲ್ಲಿರುವ ಇಂದ್ರಾಳಿ ರೇಲ್ವೆ ಬ್ರಿಡ್ಜ್ ರಸ್ತೆಯ ಅವ್ಯವಸ್ಥೆ ವಿಚಾರವಾಗಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ವಿನೂತನ ಪ್ರತಿಭಟನೆ ಮಾಡಿದ್ದಾರೆ. ರೈಲ್ವೇ ಬ್ರಿಡ್ಜ್ ರಸ್ತೆ ಕಾಮಗಾರಿ ಕಳೆದ ಐದು ವರ್ಷಗಳಿಂದ ನಿರಂತರ ನಡೆಯುತ್ತಿದೆ. ಹಳೆ ಬ್ರಿಡ್ಜ್​​ನಲ್ಲಿ ಹೊಂಡ ಗುಂಡಿ ಬಿದ್ದಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ.

ಹೀಗಾಗಿ ಮಳೆ, ಟ್ರಾಫಿಕ್ ಜಾಮ್ ಲೆಕ್ಕಿಸದೆ ಇಂದ್ರಾಳಿ ಹಳೆ ಹೆದ್ದಾರಿಯಲ್ಲಿ ನಿತ್ಯಾನಂದ ಒಳಕಾಡು ಉರುಳು ಸೇವೆ ಮಾಡಿ ಪ್ರತಿಭನಟನೆ ಮಾಡಿದ್ದಾರೆ. ನಿತ್ಯಾಂನಂದ ಒಳಕಾಡು ಹನುಮಂತ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಪೂಜೆ ಸಲ್ಲಿಸಿ ಆರತಿ ಎತ್ತಿ ಉರುಳುಸೇವೆ ಮಾಡಿದ್ದಾರೆ. ಸುಮಾರು 150 ಮೀಟರ್ ಹೊಂಡ, ಗುಂಡಿ ರಸ್ತೆಯಲ್ಲಿ ಉರುಳು ಸೇವೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Tue, 13 September 22