ಮುರುಡೇಶ್ವರದಲ್ಲಿ ಸ್ಕೂಬಾ ಡೈವಿಂಗ್​: ಸಮುದ್ರದಾಳದ ಜಲಸಾಹಸಕ್ಕೆ ಪ್ರವಾಸಿಗರು ಫಿದಾ!

|

Updated on: Mar 02, 2020 | 5:23 PM

ಉಡುಪಿ: ಕಡಲ ಮೇಲೆ ದೋಣಿಯಲಿ ಸುಂದರ ಪಯಣ. ನೀರಿನಾಳದಲ್ಲಿ ಬಗೆ ಬಗೆಯ ಮೀನುಗಳಾಗಿ ಈಜಾಟ, ಆಮೆಗಳಾಗಿ ತುಂಟಾಟ. ಸಮುದ್ರ ಜೀವಿಗಳಾಟ ಚೆಲ್ಲಾಟ ಆಡ್ತಿದ್ರೆ ಅದ್ರ ಮಜಾನೇ ಬೇರೆ. ಹೀಗೆ ನೀರಿನಾಳಕ್ಕಿಳಿದು ಜಲಚರಗಳ ತುಂಟಾಟ ನೋಡೋದೇ ಕಣ್ಣಿಗೆ ಸ್ವರ್ಗ. ಅದೊಂದು ಹೊಸ ಅನುಭವ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಈ ಖುಷಿಗೆ ಏನು ಕಡಿಮೆ ಇಲ್ಲ. ಯಾಕಂದ್ರೆ, ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸಮುದ್ರದಾಳದ ಜಲಸಾಹಸಕ್ಕೆ ಸ್ಕೂಬಾ ಡೈವಿಂಗ್ ಅವಕಾಶ ಒದಗಿಸಿಕೊಟ್ಟಿದೆ. 3 ವರ್ಷಗಳ ಹಿಂದೆ ಜಿಲ್ಲಾಡಳಿತವೇ ಖುದ್ದು ಸ್ಕೂಬಾ […]

ಮುರುಡೇಶ್ವರದಲ್ಲಿ ಸ್ಕೂಬಾ ಡೈವಿಂಗ್​: ಸಮುದ್ರದಾಳದ ಜಲಸಾಹಸಕ್ಕೆ ಪ್ರವಾಸಿಗರು ಫಿದಾ!
Follow us on

ಉಡುಪಿ: ಕಡಲ ಮೇಲೆ ದೋಣಿಯಲಿ ಸುಂದರ ಪಯಣ. ನೀರಿನಾಳದಲ್ಲಿ ಬಗೆ ಬಗೆಯ ಮೀನುಗಳಾಗಿ ಈಜಾಟ, ಆಮೆಗಳಾಗಿ ತುಂಟಾಟ. ಸಮುದ್ರ ಜೀವಿಗಳಾಟ ಚೆಲ್ಲಾಟ ಆಡ್ತಿದ್ರೆ ಅದ್ರ ಮಜಾನೇ ಬೇರೆ. ಹೀಗೆ ನೀರಿನಾಳಕ್ಕಿಳಿದು ಜಲಚರಗಳ ತುಂಟಾಟ ನೋಡೋದೇ ಕಣ್ಣಿಗೆ ಸ್ವರ್ಗ. ಅದೊಂದು ಹೊಸ ಅನುಭವ.

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಈ ಖುಷಿಗೆ ಏನು ಕಡಿಮೆ ಇಲ್ಲ. ಯಾಕಂದ್ರೆ, ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸಮುದ್ರದಾಳದ ಜಲಸಾಹಸಕ್ಕೆ ಸ್ಕೂಬಾ ಡೈವಿಂಗ್ ಅವಕಾಶ ಒದಗಿಸಿಕೊಟ್ಟಿದೆ. 3 ವರ್ಷಗಳ ಹಿಂದೆ ಜಿಲ್ಲಾಡಳಿತವೇ ಖುದ್ದು ಸ್ಕೂಬಾ ಡೈವಿಂಗ್‌ ಆರಂಭಿಸಿದ್ದು, ಸಾಕಷ್ಟು ಪ್ರವಾಸಿಗರನ್ನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅದ್ರಂತೆ ಈ ವರ್ಷವೂ ಪ್ರವಾಸಿಗರನ್ನು ಸೆಳೆಯೋ ಉದ್ದೇಶದಿಂದ ಸ್ಕೂಬಾ ಉತ್ಸವ ಆಯೋಜಿಸಲಾಗಿದೆ. ಈ ಖುಷಿ ಅನುಭವಿಸಲು ದೇಶ, ವಿದೇಶದಿಂದ ಪ್ರವಾಸಿಗರ ದಂಡೇ ಹರಿದು ಬರ್ತಿದೆ.

ಹವಳದಂಡೆ ಹೊಂದಿರುವ ಏಕೈಕ ಪ್ರದೇಶ: 
ನೇತ್ರಾಣಿ ದ್ವೀಪ ಪ್ರಾಕೃತಿಕವಾಗಿ ಸಾಕಷ್ಟು ವೈವಿಧ್ಯತೆಗಳನ್ನ ಹೊಂದಿದ್ದು ಹಲವು ಬಗೆಯ ಜಲಚರಗಳಿಗೆ ಸ್ಥಾನ ಒದಗಿಸಿದೆ. ಕರ್ನಾಟಕದಲ್ಲಿಯೇ ಹವಳದಂಡೆಯನ್ನ ಹೊಂದಿರುವ ಏಕೈಕ ಪ್ರದೇಶವಾಗಿದೆ. ಜತೆಗೆ ಅಪರೂಪದ ಕಡಲಜೀವಿಗಳ ಸುಮಾರು 35ಕ್ಕೂ ಅಧಿಕ ಪ್ರಬೇಧಗಳನ್ನ ಇಲ್ಲಿ ಗುರುತಿಸಲಾಗಿದೆ. ಈ ಪ್ರದೇಶ ಸ್ವಚ್ಛವಾದ ನೀರು ಹೊಂದಿರುವುದ್ರಿಂದ ಸ್ಕೂಬಾ ಡೈವಿಂಗ್‌ಗೆ ಹೇಳಿ ಮಾಡಿಸಿದ ಸ್ಥಳ ಇದಾಗಿದ್ದು, ದೇಶ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ.

ಹೀಗಾಗಿ, ಪ್ರವಾಸೋದ್ಯಮವನ್ನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸ್ಕೂಬಾ ಡೈವಿಂಗ್‌ಗೆ ಅವಕಾಶ ಒದಗಿಸಿದ್ದು, ಪ್ರವಾಸಿಗರ ದಿಲ್ ಖುಷ್ ಆಗಿದೆ. ಒಟ್ನಲ್ಲಿ, ದೇಶ ವಿದೇಶದಿಂದ ಪ್ರವಾಸಿಗರನ್ನು ಸ್ಕೂಬಾ ಉತ್ಸವ ಕೈ ಬೀಸಿ ಕರೆಯುತ್ತಿದ್ದು, ಈ ಮಜಾ ಪಡೆಯಲು ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಈ ಮಾಜಾ ಪಡೆಯಬೇಕಾದ್ರೆ ಮಿಸ್ ಮಾಡದೇ ನೀವೂ ಇಲ್ಲಿಗೆ ಭೇಟಿ ಕೊಡಿ.