ಓರ್ವಳ ಮೇಲಿನ ದ್ವೇಷಕ್ಕೆ ನಾಲ್ವರನ್ನ ಹತ್ಯೆಗೈದ ಹಂತಕ: ಕೊಲೆ ಹಿಂದಿನ ಕಾರಣ ಬಿಚ್ಚಿಟ್ಟ ಉಡುಪಿ ಎಸ್​ಪಿ

| Updated By: ವಿವೇಕ ಬಿರಾದಾರ

Updated on: Nov 17, 2023 | 1:14 PM

ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ನಾಲ್ಕು ಸದಸ್ಯರನ್ನು ಅಮಾನುಷವಾಗಿ ಕೊಂದಿದ್ದಾನೆ, ರಾಕ್ಷಸ ಕೃತ್ಯ ಎಸಗಿದ್ದಾನೆ. ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಪೊಲೀಸ್ ಇಲಾಖೆ ಒಳ್ಳೆಯ ಕೆಲಸ ಮಾಡಿದೆ. ಆದಷ್ಟು ಬೇಗ ನ್ಯಾಯ ದೊರಕಿಸಲು ಪ್ರಯತ್ನ ಪಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದ ಅವರು ಭರವಸೆ ನೀಡಿದರು.

ಓರ್ವಳ ಮೇಲಿನ ದ್ವೇಷಕ್ಕೆ ನಾಲ್ವರನ್ನ ಹತ್ಯೆಗೈದ ಹಂತಕ: ಕೊಲೆ ಹಿಂದಿನ ಕಾರಣ ಬಿಚ್ಚಿಟ್ಟ ಉಡುಪಿ ಎಸ್​ಪಿ
ಎಸ್​ಪಿ ಡಾ.ಅರುಣ
Follow us on

ಉಡುಪಿ ನ.17: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ (Police) ವಿಚಾರಣೆ ವೇಳೆ ಕೊಲೆ ಮಾಡಲು ಏನು ಕಾರಣ ಎಂಬ ಅಂಶಗಳನ್ನು ಆರೋಪಿ ಪ್ರವೀಣ ಬಾಯಿ ಬಿಟ್ಟಿದ್ದಾನೆ. ಮೃತ ಅಯ್ನಾಝ್ ವಿಚಾರದಲ್ಲಿ ಆರೋಪಿ ಪ್ರವೀಣ್ ಚೌಗುಲೆ ಬಹಳ ಪಾಸೆಸಿವ್ ಆಗಿದ್ದನು. ಅಯ್ನಾಝ್​ಳನ್ನು ಅತಿಯಾಗಿ ಹಚ್ಚಿಕೊಂಡಿದ್ದನು. ಅಯ್ನಾಝ್ ತನ್ನ ನಿಯಂತ್ರಣದಲ್ಲೇ ಇರಬೇಕು ಎಂಬ ಮನಸ್ಥಿತಿ ಹೊಂದಿದ್ದನು. ಅಸೂಯೆ ಮತ್ತು ದ್ವೇಷದಿಂದ ಅಯ್ನಾಝ್​ಳನ್ನು ಕೊಲೆ ಮಾಡಲು ನಿರ್ಧರಿಸಿದ್ದನು. ಅಯ್ನಾಝ್ ತನ್ನ ಜೊತೆ ಮಾತ್ರ ಮಾತನಾಡಬೇಕು ಎಂಬ ನಿಯಮ ಹಾಕುತ್ತಿದ್ದನು, ನನ್ನ ಜೊತೆ ಮಾತ್ರ ಬೆರೆಯಬೇಕು ಎಂಬ ಮನಸ್ಥಿತಿಯನ್ನು ಹೊಂದಿದ್ದನು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (SP) ಡಾ.ಅರುಣ್ ಟಿವಿ9 ಡಿಜಿಟಲ್​​ಗೆ ಮಾಹಿತಿ ನೀಡಿದ್ದಾರೆ.

ಇನ್ನು ಮೃತರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕುಟುಂಬದ ನಾಲ್ಕು ಸದಸ್ಯರನ್ನು ಅಮಾನುಷವಾಗಿ ಕೊಂದಿದ್ದಾನೆ, ರಾಕ್ಷಸ ಕೃತ್ಯ ಎಸಗಿದ್ದಾನೆ. ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಪೊಲೀಸ್ ಇಲಾಖೆ ಒಳ್ಳೆಯ ಕೆಲಸ ಮಾಡಿದೆ. ಆದಷ್ಟು ಬೇಗ ನ್ಯಾಯ ದೊರಕಿಸಲು ಪ್ರಯತ್ನ ಪಡುತ್ತೇವೆ ಎಂದು ಭರವಸೆ ನೀಡಿದರು.

ಕುಟುಂಬ ಸೂಚಿಸಿದವರಿಂದ ತನಿಖೆ ನಡೆಸುತ್ತೇವೆ: ಲಕ್ಷ್ಮಿ ಹೆಬ್ಬಾಳ್ಕರ್​

ಉಡುಪಿ ಜಿಲ್ಲೆ ಶಾಂತಿ ಪ್ರಿಯ ಜಿಲ್ಲೆ, ಇಂತಹ ಜಿಲ್ಲೆಯಲ್ಲಿ ಹೀಗಾಗಬಾರದು ಇತ್ತು. ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ, ಕಾನೂನು ಸುವ್ಯವಸ್ಥಿತೆ ಕಾಪಾಡುತ್ತೇವೆ. ಆರೋಪಿ ಬೆಳಗಾವಿಯಲ್ಲಿ ಇದ್ದ ಬಗ್ಗೆ ಮಾಹಿತಿ ಇರಲಿಲ್ಲ. ಆರೋಪಿ ಸೈಕೋ ರೀತಿಯಲ್ಲಿ ವರ್ತಿಸಿದ್ದಾನೆ. ಮದುವೆ ಆಗಿದ್ದಾನೆ, ಎರಡು ಮಕ್ಕಳು ಇದ್ದಾರೆ. 20 ನಿಮಿಷದಲ್ಲಿ ಕೃತ್ಯ ಎಸಗಿದ್ದಾನೆ. ಮೆಂಟಲ್ ಸ್ಟೆಟಸ್ ಯಾವ ರೀತಿ ಇರಬಹುದು. ಫಾಸ್ಟ್ ಟ್ರಾಕ್ ನ್ಯಾಯಾಲಯದ ಮೂಲಕ ತನಿಖೆಗೆ ಒತ್ತಾಯಿಸಿದ್ದಾರೆ. ಮನೆಯವರು ಒಬ್ಬರ ಹೆಸರು ಕೊಟ್ಟಿದ್ದಾರೆ ಅವರ ಮೂಲಕ ತನಿಖೆ ಮಾಡುತ್ತೇವೆ. ಬೆಳಗಾವಿಯಲ್ಲಿ ಇದ್ದ ಕಾರಣ ಬರಲು ತಡವಾಯ್ತು. ಅಲ್ಲಿಂದಲೇ ನಾನು ಕುಟುಂಬದ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದೆ ಎಂದರು.

ಇದನ್ನೂ ಓದಿ: ನಾಲ್ವರು ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ: ಹತ್ಯೆ ಸಂಭ್ರಮಿಸಿದ ಹಿಂದೂ ಮಂತ್ರ ಪೇಜ್ ವಿರುದ್ಧ ಉಡುಪಿಯಲ್ಲಿ ಪ್ರಕರಣ ದಾಖಲು

ಅಡ್ವಕೇಟ್ ಶಿವಪ್ರಸಾದ್ ಆಳ್ವ ನೇತೃತ್ವದಲ್ಲಿ ತನಿಖೆಗೆ ಒತ್ತಾಯ: ನೂರ್ ಮೊಹಮ್ಮದ್

ಮೃತರ ಕುಟುಂಬದ ಯಜಮಾನ ನೂರ್ ಮೊಹಮ್ಮದ್ ಮಾತನಾಡಿ ಉಸ್ತುವಾರಿ ಸಚಿವರು ಮನವಿ ಸ್ವೀಕಾರ ಮಾಡಿದ್ದಾರೆ. ಬೇಗ ನ್ಯಾಯ ಕೊಡಿಸುವ ವಿಶ್ವಾಸ ಕೊಟ್ಟಿದ್ದಾರೆ. ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಒತ್ತಾಯಿಸಿದ್ದೇವೆ. ಅಡ್ವಕೇಟ್ ಶಿವಪ್ರಸಾದ್ ಆಳ್ವ ಅವರನ್ನು ನೇಮಕ ಮಾಡಲು ಒತ್ತಾಯಿಸಿದ್ದೇವೆ. ಎಲ್ಲ ರೀತಿಯಲ್ಲಿ ಸಹಕಾರ ಕೊಡುವ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ