ಭಟ್ಕಳದಲ್ಲಿ ಮುಂದುವರೆದ ಹಿಂದೂ-ಮುಸ್ಲಿಂ ಗುದ್ದಾಟ; ದೂರು, ಪ್ರತಿದೂರು ದಾಖಲು

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 01, 2024 | 4:54 PM

ಭಟ್ಕಳದಲ್ಲಿ ಹಿಂದೂ-ಮುಸ್ಲಿಂ ಗುದ್ದಾಟ ಮುಂದುವರೆದಿದೆ. ಅದರಂತೆ ನಗರದ ಜಾಲಿ ಪಟ್ಟಣದಲ್ಲಿನ ದೇವಿ ನಗರದ ಬೊರ್ಡ್ ನವಿಕರಣ ವಿಚಾರವಾಗಿ ಹಿಂದೂ ಮತ್ತು ಮುಸ್ಲಿಂರ ನಡುವೆ ಗಲಾಟೆ ಆಗಿತ್ತು. ಇದೀಗ ಎಸ್​ಡಿಪಿಐ ಕಾರ್ಯಕರ್ತರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಹಿಂದೂ ಕಾರ್ಯಕರ್ತರು ಕೂಡ ಪ್ರತಿದೂರು ನೀಡಿದ್ದಾರೆ.

ಭಟ್ಕಳದಲ್ಲಿ ಮುಂದುವರೆದ ಹಿಂದೂ-ಮುಸ್ಲಿಂ ಗುದ್ದಾಟ; ದೂರು, ಪ್ರತಿದೂರು ದಾಖಲು
ಭಟ್ಕಳ ಹಿಂದೂ-ಮುಸ್ಲಿಂ ಗಲಾಟೆ
Follow us on

ಉತ್ತರ ಕನ್ನಡ, ಫೆ.01: ಭಟ್ಕಳದಲ್ಲಿ ಹಿಂದೂ-ಮುಸ್ಲಿಂ ಗುದ್ದಾಟ ಮುಂದುವರೆದಿದ್ದು, ಎಸ್​ಡಿಪಿಐ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರು ಗೂಂಡಾ ಎಂದು ಭಟ್ಕಳ್ ಶಹರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಇತ್ತ ಇದಕ್ಕೆ ಬಿಜೆಪಿ ಮುಖಂಡರು ಪ್ರತಿದೂರು ನೀಡಿದ್ದು, ತಾಲೂಕು ಮಂಡಲ ಬಿಜೆಪಿ ಅಧ್ಯಕ್ಷ ಸುಬ್ರಾಯ ದೇವಾಡಿಗ ಎಂಬುವವರು ಗೂಂಡಾ ಪದ ಬಳಿಸಿದಕ್ಕೆ ಮಾನನಷ್ಟ ಕೇಸ್ ದಾಖಲಿಸಿದ್ದಾರೆ.

ಏನಿದು ಘಟನೆ

ನಗರದ ಜಾಲಿ ಪಟ್ಟಣದಲ್ಲಿನ ದೇವಿ ನಗರದ ಬೊರ್ಡ್ ನವಿಕರಣ ವಿಚಾರವಾಗಿ ಹಿಂದೂ ಮತ್ತು ಮುಸ್ಲಿಂರ ನಡುವೆ ಗಲಾಟೆ ಆಗಿತ್ತು. ಹಿಂದೂ ಕಾರ್ಯಕರ್ತರು ಬೊರ್ಡ್ ಹಾಕಲು ಬಂದಿದ್ದಕ್ಕೆ, ಕೇಸರಿ ಬಾವುಟ ಹಾಕುತ್ತಿದ್ದಾರೆ. ನಮ್ಮ ಮಸೀದಿ ಮುಂದೆಯೂ ಭಗವಾನ್​ ಧ್ವಜ ಹಾಕಲಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಎಸ್ ಡಿ ಪಿ ಐ ಕಾರ್ಯರ್ತರಾದ ರಝಾಕ್ ಬ್ಯಾರಿ ಮತ್ತು ಸೋಫಾ ಶಮಿ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಇದನ್ನೂ ಓದಿ:ಭಟ್ಕಳ ಧ್ವಜ ವಿವಾದ: 20 ನಿಮಿಷದಲ್ಲಿ ಧ್ವಜ ಕಟ್ಟೆ ನಿರ್ಮಾಣ ಮಾಡಿದ ಹಿಂದೂ ಕಾರ್ಯಕರ್ತರು

ಅಷ್ಟೇ ಅಲ್ಲ, ಸುಳ್ಳು ಸುದ್ದಿ ಹರಿಬಿಟ್ಟಿದಲ್ಲದೆ. ಹಿಂದೂ ಕಾರ್ಯಕರ್ತರು ಗೂಂಡಾಗಳೆಂದು ದೂರು ದಾಖಲಿಸಿದ್ದರು. ಈ ಹಿನ್ನಲೆ
ಎಸ್​ಡಿಪಿಐ ಕಾರ್ಯಕರ್ತರ ವಿರುದ್ದ ಹಿಂದೂ ಕಾರ್ಯಕರ್ತರು ‘ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸಲು ಕುಮ್ಮಕ್ಕು ನೀಡುತ್ತಿರುವ ಎಸ್​ಡಿಪಿಐ ನ್ನು ಸಂಪೂರ್ಣ ಬ್ಯಾನ್ ಮಾಡುವಂತೆ ಭಟ್ಕಳ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.

ಭಟ್ಕಳ ಧ್ವಜ ವಿವಾದ: 20 ನಿಮಿಷದಲ್ಲಿಯೇ ಧ್ವಜ ಕಟ್ಟೆ ನಿರ್ಮಾಣ

ಭಟ್ಕಳದ ತೆಂಗಿನಗುಂಡಿ ಬೀಚ್‌ನಲ್ಲಿ ಜ.30 ರಂದು ವೀರ ಸಾರ್ವಕರ್ ವೃತ್ತದ ನಾಮಫಲಕ ಮತ್ತು ಭಗವಾನ್​ ಧ್ವಜ ಕಟ್ಟೆ ತೆರವುಗೊಳಿಸಲಾಗಿತ್ತು. ಬಿಜೆಪಿ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ನೇತೃತ್ವದಲ್ಲಿ ತೆಂಗಿನಗುಂಡಿ ಗ್ರಾಮ ಪಂಚಾಯ್ತಿ ಮುಂದೆ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಮಾಜಿ ಅಧ್ಯಕ್ಷ ಗೋವಿಂದ್ ನಾಯ್ಕ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುಬ್ರಾಯ ದೇವಾಡಿಗ ಹಾಗೂ ಪಂಚಾಯತ್ ಸದಸ್ಯರು ಪ್ರತಿಭಟನೆ ನಡೆಸಿದ್ದರು.

ಪೊಲೀಸರ ವಿರೋಧದ ನಡುವೆಯೂ ತೆಂಗಿನಗುಂಡಿಯಲ್ಲಿ ಧ್ವಜ ಕಟ್ಟೆ ಇದ್ದ ಸ್ಥಳದಲ್ಲೇ  ಕೇವಲ 20 ನಿಮಿಷದಲ್ಲಿ ಧ್ವಜ ಕಟ್ಟೆಯನ್ನು ಹಿಂದೂ ಕಾರ್ಯಕರ್ತರು ನಿರ್ಮಾಣ ಮಾಡಿದ್ದರು. ಧ್ವಜ ಕಟ್ಟೆ ನಿರ್ಮಾಣಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು, ನಾವು ಕಟ್ಟೆಯನ್ನು ಕಟ್ಟಿ ಧ್ವಜವನ್ನ ಹಾರಿಸುತ್ತೇವೆ ಎಂದು ಪಟ್ಟು ಹಿಡಿದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:49 pm, Thu, 1 February 24