Uttara Kannada: ದುಬಾರಿ ಮರದ ದಿಮ್ಮಿಗಳ ಅಕ್ರಮ ಸಾಗಾಟ ಪ್ರಕರಣ: ಐವರು ಡಿಆರ್​ಎಫ್​​​​​ಒಗಳ ಅಮಾನತು

|

Updated on: Jun 14, 2023 | 4:10 PM

ಅಕ್ರಮವಾಗಿ ಬೆಳೆಬಾಳುವ ಮರದ ದಿಮ್ಮಿಗಳ ಸಾಗಾಟ ಮಾಡಿದ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲಾ ಅರಣ್ಯ ಇಲಾಖೆ ಐವರು ಡಿಆರ್​ಎಫ್​ಒಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

Uttara Kannada: ದುಬಾರಿ ಮರದ ದಿಮ್ಮಿಗಳ ಅಕ್ರಮ ಸಾಗಾಟ ಪ್ರಕರಣ: ಐವರು ಡಿಆರ್​ಎಫ್​​​​​ಒಗಳ ಅಮಾನತು
ಉತ್ತರ ಕನ್ನಡದಲ್ಲಿ ದುಬಾರಿ ಮರದ ದಿಮ್ಮಿಗಳ ಅಕ್ರಮ ಸಾಗಾಟದ ವೇಳೆ ಬಂಧಿತರಾದ ಆರೋಪಿಗಳು
Follow us on

ಕಾರವಾರ: ಅಕ್ರಮವಾಗಿ ಬೆಳೆಬಾಳುವ ಮರದ ದಿಮ್ಮಿಗಳ ಸಾಗಾಟ ಮಾಡಿದ ಪ್ರಕರಣ ಸಂಬಂಧ ಉತ್ತರ ಕನ್ನಡ (Uttara Kannada) ಜಿಲ್ಲಾ ಅರಣ್ಯ ಮುಖ್ಯಾಧಿಕಾರಿ ವಸಂತ್ ರೆಡ್ಡಿ ಅವರು ಐವರು ಡಿಆರ್​ಎಫ್​ಒಗಳನ್ನು (DRFO) ಅಮಾನತು ಮಾಡಿ ಆದೇಶಿಸಿದ್ದಾರೆ. ಸುರೇಶ್ ವಡ್ಡರ್, ಮಾರುತಿ ಸೋರಗಾವಿ, ಮಹೇಶ್ ಬೋರ್ಕರ್, ಹನುಮಂತ ಬಂಡಿವಡ್ಡರ್, ಗುರುಚಂದ್ರ ಎಂ. ಬ್ಯಾಳಿ ಅಮಾನತುಗೊಂಡ ಅಧಿಕಾರಿಗಳು.

ಅರಣ್ಯ ಇಲಾಖೆಗೆ ಸಂಬಂಧಿಸಿದ 30 ಲಕ್ಷಕ್ಕೂ ಅಧಿಕ ಮೌಲ್ಯದ 52 ಮರದ ದಿಮ್ಮಿಗಳನ್ನು ಎರಡು ಲಾರಿಗಳ ಮೂಲಕ ಅಕ್ರಮವಾಗಿ ಶಿರಸಿಗೆ ಸಾಗಾಟ ಮಾಡಲಾಗುತ್ತಿತ್ತು. ಮಾಹಿತಿ ತಿಳಿದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಅಧಿಕಾರಿಗಳು ಇದರ ಹಿಂದಿರುವ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದರು.

ಇದನ್ನೂ ಓದಿ: ಶರ್ಟ್​ ಧರಿಸದೆ ಆನ್​ಲೈನ್​ ಮೀಟಿಂಗ್​ಗೆ ಹಾಜರಾದ ಶಿಕ್ಷಣ ಇಲಾಖೆ ಅಧಿಕಾರಿ ಅಮಾನತು

ಆರೋಪಿಗಳು ಹೊರಗಾಕಿದ ಮಾಹಿತಿ ಆಧರಿಸಿ ಡಿಆರ್​ಎಫ್​ಒಗಳನ್ನು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಮರದ ದಿಮ್ಮಿಗಳ ಸಾಗಾಟದಲ್ಲಿ ಅಧಿಕಾರಿಗಳು ಶಾಮೀಲು ಆರೋಪ ಸಾಬೀತಾದ ಹಿನ್ನೆಲೆ ಐವರು ಡಿಆರ್​ಎಫ್​​​​​ಒಗಳ ಅಮಾನತು ಮಾಡಲಾಗಿದೆ. ಅಲ್ಲದೆ, ವಲಯ ಅರಣ್ಯಾಧಿಕಾರಿ ಜಿಟಿ ರೇವಕರ್ ವಿರುದ್ಧ ಕ್ರಮಕ್ಕೆ ರಾಜ್ಯ ಅರಣ್ಯ ಮುಖ್ಯಸ್ಥರಿಗೆ ಶಿಫಾರಸ್ಸು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Wed, 14 June 23