ಕೈಗಾ (ಉತ್ತರ ಕನ್ನಡ): ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಬುಧವಾರ ಹುಲಿಯೊಂದು (Tiger) ಪ್ರತ್ಯಕ್ಷವಾಗಿದೆ. ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಲಿಮಿಟೆಡ್ನ (NCPL) ಉದ್ಯೋಗಿಯೊಬ್ಬರು ಕೈಗಾ (Kaiga) ಕಡೆಗೆ ಬರುತ್ತಿದ್ದಾಗ ಯಲ್ಲಾಪುರದ ರಸ್ತೆಯಲ್ಲಿ ಈ ಹುಲಿ ಕಾಣಿಸಿಕೊಂಡಿದೆ. ಕೆಲವರು ವಾಹನದ ಅತ್ಯಂತ ಸಮೀಪಕ್ಕೆ ಬಂದ ಹುಲಿಯ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ.
“ನಾವು ಹುಲಿಯನ್ನು ನೋಡಿದ್ದೇವೆ ಎಂದು ನಮಗೆ ನಂಬಲಾಗಲಿಲ್ಲ” ಎಂದು ಎನ್ಸಿಪಿಎಲ್ ಉದ್ಯೋಗತಿ ಸುದ್ದಿ ಸಂಸ್ಥೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ. ಕೈಗಾ ಪ್ರದೇಶವು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಒಂದು ಭಾಗವಾಗಿದೆ ಮತ್ತು ಇತ್ತೀಚಿನ ಹುಲಿ ಗಣತಿಯ ಪ್ರಕಾರ ಹೆಚ್ಚು ಹುಲಿಗಳು ಪತ್ತೆಯಾಗಿವೆ. ಸ್ಥಳೀಯರ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಈ ಸಮಯದಲ್ಲಿ ಪ್ರತಿ ವರ್ಷವೂ ಈ ಹುಲಿ ಕಾಣಿಸಿಕೊಳ್ಳುತ್ತಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಕಂದಾಯ ಭೂಮಿ ಹಗರಣಕ್ಕೆ ಟ್ವಿಸ್ಟ್; ಅರಣ್ಯ ಪ್ರದೇಶ ಜೊತೆಗೆ ಹುಲಿ ಸಂರಕ್ಷಿತ ಪ್ರದೇಶ ಕೂಡ ಗುಳುಂ
A #Tiger has been sighted near #Kaiga on #YellapurRoad. The #BigCat footagewas captured by an employee of #NTPC. @XpressBengaluru @santwana99 @Cloudnirad @ramupatil_TNIE @aranya_kfd pic.twitter.com/rEh6JN4KsM
— Subhash Chandra NS (@ns_subhash) August 30, 2023
ಕಳೆದ ವರ್ಷ ಮತ್ತೊಬ್ಬ ಎನ್‌ಪಿಸಿಎಲ್ ಸಿಬ್ಬಂದಿ ಲೋಕೇಶ್ ಹೆಗಡೆ ಎಂಬವರು ಈ ಹುಲಿಯ ವಿಡಿಯೋ ಮಾಡಿದ್ದರು. ಅದರ ನಂತರ, ನಾನು ಹುಲಿಯ ಕನಿಷ್ಠ ಒಂದು ಚಿತ್ರವನ್ನು ತೆಗೆಯಬಹುದೆಂದು ನಾನು ಇಡೀ ಸ್ಥಳವನ್ನು ಹುಡುಕಿದೆ. ಆದರೆ ನನಗೆ ಸಾಧ್ಯವಾಗಲಿಲ್ಲ ಎಂದು ನಿಸರ್ಗಶಾಸ್ತ್ರಜ್ಞ ಗೋಪಾಲ ಕೃಷ್ಣ ಹೆಗಡೆ ಹೇಳಿದರು. ಉತ್ತರ ಕನ್ನಡ ಅರಣ್ಯ ಇಲಾಖೆ ವತಿಯಿಂದ ಕಾರವಾರಕ್ಕೆ ತೆರಳುವ ಮಾರ್ಗ ಮಧ್ಯೆ ಗೋಪಶಿಟ್ಟಾ ಬಳಿಯ ಹೆದ್ದಾರಿಯ ಮರದ ಡಿಪೋದಲ್ಲಿ ಹಲವು ಬಾರಿ ಹುಲಿ ಕಾಣಿಸಿಕೊಂಡಿದೆ.
ಹುಲಿ ಇರುವಿಕೆಯ ಬಗ್ಗೆ ಮಾಥನಾಡಿದ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ, ಈ ಪ್ರದೇಶವು ಕದ್ರಾ ವನ್ಯಜೀವಿ ಶ್ರೇಣಿಯಾಗಿದ್ದು, ಇದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಒಂದು ಭಾಗವಾಗಿದೆ. ಮೀಸಲು ಪ್ರದೇಶದಲ್ಲಿ ಅಂದಾಜು 30 ಹುಲಿಗಳಿವೆ. ಇದು ಉತ್ತಮ ಹುಲಿ ಆವಾಸಸ್ಥಾನವಾಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 am, Thu, 31 August 23