ಕೊರೊನಾ ಲಸಿಕೆ ತಾಲೀಮು ಪ್ರಕ್ರಿಯೆಯಲ್ಲಿ ಭಾಗವಹಿಸಿದವರಿಗೆ ಕೊಟ್ಟ ಲಸಿಕೆ ಯಾವುದು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Jan 08, 2021 | 5:55 PM

ಕೊರೊನಾ ಲಸಿಕೆ ತಾಲೀಮಿನಲ್ಲಿ ‘ಲಸಿಕೆ’ ನೀಡುತ್ತಿರುವುದು ಸತ್ಯ. ಆದರೆ, ಅದು ಕೊರೊನಾ ಲಸಿಕೆಯಲ್ಲ. ತಾಲೀಮು ಪ್ರಕ್ರಿಯೆಯನ್ನು ಸರ್ಕಾರ ಅತಿ ಗಂಭೀರವಾಗಿ ಪರಿಗಣಿಸಿದ್ದು ಲಸಿಕೆ ವಿತರಣೆ ಹೇಗೆ ಆಗುತ್ತದೋ ಅದರಂತೆಯೇ ತಾಲೀಮು ನಡೆಸಲಾಗುತ್ತಿದೆ. ಆದಕಾರಣ ಇಲ್ಲಿ ಲಸಿಕೆಯನ್ನೂ ನೀಡಲಾಗುತ್ತಿದೆ.

ಕೊರೊನಾ ಲಸಿಕೆ ತಾಲೀಮು ಪ್ರಕ್ರಿಯೆಯಲ್ಲಿ ಭಾಗವಹಿಸಿದವರಿಗೆ ಕೊಟ್ಟ ಲಸಿಕೆ ಯಾವುದು ಗೊತ್ತಾ?
ಕೊರೊನಾ ಲಸಿಕೆ ತಾಲೀಮು ಪ್ರಕ್ರಿಯೆಯಲ್ಲಿ ಕೊಟ್ಟ ಲಸಿಕೆ ಯಾವುದು?
Follow us on

ಬೆಂಗಳೂರು: ಕರ್ನಾಟಕದಲ್ಲಿ ಇಂದು 2ನೇ ಹಂತದ ಕೊರೊನಾ ಲಸಿಕೆ ತಾಲೀಮು ನಡೆದಿದೆ. ಲಸಿಕೆ ವಿತರಣೆ ಶುರುವಾದ ಮೇಲೆ ಪಾಲಿಸಬೇಕಾದ ಅಷ್ಟೂ ಪ್ರಕ್ರಿಯೆಗಳನ್ನು ತಾಲೀಮಿನಲ್ಲಿ ನಡೆಸುವುದರಿಂದ ಲಸಿಕೆ ನೀಡುವಾಗ ಗೊಂದಲ ಉದ್ಭವವಾಗದಂತೆ ನಿಗಾ ವಹಿಸಲಾಗುತ್ತಿದೆ. ಆದರೆ, ತಾಲೀಮು ಪ್ರಕ್ರಿಯೆಯಲ್ಲಿ ಯಾವ ಲಸಿಕೆ ನೀಡಲಾಗುತ್ತಿದೆ? ಕೊರೊನಾ ಲಸಿಕೆ ಇನ್ನೂ ಬಂದೇ ಇಲ್ಲ ಎಂದಾದಲ್ಲಿ ತಾಲೀಮಿನ ಉದ್ದೇಶ ಏನು ಎಂಬ ಪ್ರಶ್ನೆ ಇನ್ನೂ ಹಲವರಲ್ಲಿ ಉಳಿದಿದೆ.

ನಂಬಲರ್ಹ ಮೂಲಗಳ ಪ್ರಕಾರ ಕೊರೊನಾ ಲಸಿಕೆ ತಾಲೀಮಿನಲ್ಲಿ ‘ಲಸಿಕೆ’ ನೀಡುತ್ತಿರುವುದು ಸತ್ಯ. ಆದರೆ, ಅದು ಕೊರೊನಾ ಲಸಿಕೆಯಲ್ಲ. ತಾಲೀಮು ಪ್ರಕ್ರಿಯೆಯನ್ನು ಸರ್ಕಾರ ಅತಿ ಗಂಭೀರವಾಗಿ ಪರಿಗಣಿಸಿದ್ದು ಲಸಿಕೆ ವಿತರಣೆ ಹೇಗೆ ಆಗುತ್ತದೋ ಅದರಂತೆಯೇ ತಾಲೀಮು ನಡೆಸಲಾಗುತ್ತಿದೆ. ಆದಕಾರಣ ಇಲ್ಲಿ ಲಸಿಕೆಯನ್ನೂ ನೀಡಲಾಗುತ್ತಿದೆ.

ಕೊರೊನಾ ಲಸಿಕೆ ಅಲ್ಲ.. ಮತ್ಯಾವ ಲಸಿಕೆ?
ತಾಲೀಮು ಪ್ರಕ್ರಿಯೆಯಲ್ಲಿ ಆರೋಗ್ಯ ಕಾರ್ಯಕರ್ತರು ಭಾಗವಹಿಸುತ್ತಿದ್ದು, ಅಲ್ಲಿರುವ ಎಲ್ಲರಿಗೂ ವೈದ್ಯಕೀಯ ವಿಚಾರಗಳ ಬಗ್ಗೆ ಮಾಹಿತಿ ಇರುತ್ತದೆ. ಆದ್ದರಿಂದ ಕೆಲ ಆಯ್ದ ಲಸಿಕೆಗಳನ್ನು ಮೊದಲೇ ನಿರ್ಧರಿಸಿದ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಈ ಲಸಿಕೆಗಳು ಯಾವುದೇ ರೀತಿಯ ಅಡ್ಡಪರಿಣಾಮವನ್ನು ಉಂಟುಮಾಡುವುದಿಲ್ಲ ಎಂಬುದನ್ನು ಮೊದಲೇ ಖಚಿತಪಡಿಸಿಕೊಂಡು ನೀಡಲಾಗುತ್ತಿದೆ.

ಹೀಗೆ ಚುಚ್ಚುಮದ್ದನ್ನೂ ತಾಲೀಮಿನಲ್ಲಿ ನೀಡುವುದರಿಂದ ಕೊರೊನಾ ಲಸಿಕೆ ವಿತರಣೆಯ ದಿನ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರಿಗೆ ಪರಿಸ್ಥಿತಿ ನಿಭಾಯಿಸುವುದು ಸುಲಭವಾಗಲಿದೆ ಎನ್ನುವುದು ತಾಲೀಮಿನಲ್ಲಿ ಭಾಗವಹಿಸಿದ ವೈದ್ಯರ ಅಭಿಪ್ರಾಯ.

ಕೊರೊನಾ ಲಸಿಕೆ ಸಾಗಣೆಗೆ ₹ 480 ಕೋಟಿ ಅನುದಾನ ಬಿಡುಗಡೆ ಮಾಡಿದ ಕೇಂದ್ರ ಹಣಕಾಸು ಸಚಿವಾಲಯ