ಸೋಂಕಿತನಿಗೆ ಚಿಕಿತ್ಸೆ ನೀಡಿ, ಮಾಹಿತಿ ನೀಡದಿದ್ದಕ್ಕೆ ವೇಣು ಹೆಲ್ತ್ ಕೇರ್ ಸೆಂಟರ್ ಲೈಸೆನ್ಸ್ ರದ್ದು

|

Updated on: Apr 23, 2020 | 8:23 AM

ಬೆಂಗಳೂರು: ಕೊರೊನಾ ಸೋಂಕಿರುವ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದು, ಸರ್ಕಾರಕ್ಕೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ನಗರದ ವೇಣು ಹೆಲ್ತ್ ಕೇರ್ ಸೆಂಟರ್ ಪರವಾನಗಿ ರದ್ದು ಮಾಡಲಾಗಿದೆ. ಬೆಂಗಳೂರಿನ ಹೊಂಗಸಂದ್ರದಲ್ಲಿರುವ ವೇಣು ಹೆಲ್ತ್ ಕೇರ್​ಗೆ ಏಪ್ರಿಲ್ 18ರಂದು ಉಸಿರಾಟ ಸಮಸ್ಯೆಯಿಂದ 419ನೇ ಸೋಂಕಿತ ವ್ಯಕ್ತಿ ಹೋಗಿದ್ದನು. 419ನೇ ಸೋಂಕಿತನಿಗೆ ಹೆಲ್ತ್‌ ಕೇರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆತನಿಗೆ ಕೊರೊನಾ ಲಕ್ಷಣಗಳು ಇದ್ದರೂ ಕ್ಲಿನಿಕ್ ಸಿಬ್ಬಂದಿ ಹಾಗೂ ವೈದ್ಯ ಯಾರು ಕೂಡ ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿಲ್ಲ. ಸರ್ಕಾರಕ್ಕೆ ಮಾಹಿತಿ […]

ಸೋಂಕಿತನಿಗೆ ಚಿಕಿತ್ಸೆ ನೀಡಿ, ಮಾಹಿತಿ ನೀಡದಿದ್ದಕ್ಕೆ ವೇಣು ಹೆಲ್ತ್ ಕೇರ್ ಸೆಂಟರ್ ಲೈಸೆನ್ಸ್ ರದ್ದು
Follow us on

ಬೆಂಗಳೂರು: ಕೊರೊನಾ ಸೋಂಕಿರುವ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದು, ಸರ್ಕಾರಕ್ಕೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ನಗರದ ವೇಣು ಹೆಲ್ತ್ ಕೇರ್ ಸೆಂಟರ್ ಪರವಾನಗಿ ರದ್ದು ಮಾಡಲಾಗಿದೆ. ಬೆಂಗಳೂರಿನ ಹೊಂಗಸಂದ್ರದಲ್ಲಿರುವ ವೇಣು ಹೆಲ್ತ್ ಕೇರ್​ಗೆ ಏಪ್ರಿಲ್ 18ರಂದು ಉಸಿರಾಟ ಸಮಸ್ಯೆಯಿಂದ 419ನೇ ಸೋಂಕಿತ ವ್ಯಕ್ತಿ ಹೋಗಿದ್ದನು.

419ನೇ ಸೋಂಕಿತನಿಗೆ ಹೆಲ್ತ್‌ ಕೇರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆತನಿಗೆ ಕೊರೊನಾ ಲಕ್ಷಣಗಳು ಇದ್ದರೂ ಕ್ಲಿನಿಕ್ ಸಿಬ್ಬಂದಿ ಹಾಗೂ ವೈದ್ಯ ಯಾರು ಕೂಡ ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿಲ್ಲ.

ಸರ್ಕಾರಕ್ಕೆ ಮಾಹಿತಿ ನೀಡದೆ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್ ಶಿವಮೂರ್ತಿ ವೇಣು ಹೆಲ್ತ್ ಕೇರ್ ಲೈಸೆನ್ಸ್ ರದ್ದು ಮಾಡಿ ಆದೇಶಿಸಿದ್ದಾರೆ. ಸದ್ಯ ಮೂವರು ನರ್ಸ್‌ಗಳಿಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ವ್ಯಕ್ತಿ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 21 ಜನ, ದ್ವಿತೀಯ ಸಂಪರ್ಕ ಹೊಂದಿದ್ದ 23 ಜನ ಕ್ವಾರಂಟೈನ್‌ಗೆ ಶಿಫ್ಟ್ ಮಾಡಲಾಗಿದೆ.

Published On - 8:21 am, Thu, 23 April 20