‘ಹಿಜಾಬ್ ನಮ್ಮ ಘನತೆ’ ಎಂಬ ಗೋಡೆ ಬರಹ ಕೇಸ್: ಇಬ್ಬರು ಯುವಕರ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Hijab Ban Row: ಹಿಜಾಬ್ ನಮ್ಮ ಘನತೆ' ಎಂಬ ಗೋಡೆ ಮೇಲೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಜನಗರ ಜಿಲ್ಲೆಯ ಇಬ್ಬರು ಯುವಕರ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ

‘ಹಿಜಾಬ್ ನಮ್ಮ ಘನತೆ ಎಂಬ ಗೋಡೆ ಬರಹ ಕೇಸ್: ಇಬ್ಬರು ಯುವಕರ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Edited By:

Updated on: Aug 28, 2023 | 7:50 PM

ಬೆಂಗಳೂರು, (ಆಗಸ್ಟ್ 28):ಹಿಜಾಬ್ ನಮ್ಮ ಘನತೆ’ (Hijab is our dignity)ಎಂಬ ಗೋಡೆ ಮೇಲೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ (Karnataka High Court ) ರದ್ದುಗೊಳಿಸಿ ಆದೇಶ ಹೊರಡಿಸಿದೆ. ವಿಜಯನಗರ(Vijayanagara) ಜಿಲ್ಲೆ ಹೊಸಪೇಟೆ ಸರ್ಕಾರಿ ಶಾಲೆಯ ಗೋಡೆ‌ ಮೇಲೆ ಹಿಜಾಬ್ ನಮ್ಮ ಘನತೆ’ ಎಂಬ ಬರಹ ಬರೆಯಲಾಗಿತ್ತು. ಈ ಸಂಬಂಧ ಮುಜಮ್ಮಿಲ್, ಮೊಹಮ್ಮದ್ ಜಮಾಲ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣ ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾyಮೂರ್ತಿ ಎಂ ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ, ಅರ್ಜಿದಾರರ ವಾದ ಪುರಸ್ಕರಿಸಿ ಕೇಸ್ ರದ್ದುಪಡಿಸಿ ಆದೇಶಿಸಿದೆ.

ಶಾಲಾ ಗೋಡೆ ಮೇಲೆ ಬರೆದಿದ್ದರಿಂದ ಮುಖ್ಯೋಪಾಧ್ಯಾಯರು ನೀಡಿದ ದೂರಿನ ಪ್ರಕಾರ, ಮಾರ್ಚ್ 16, 2022 ರಂದು ಇಬ್ಬರ ವಿರುದ್ಧ ತೆರೆದ ಪ್ರದೇಶಗಳ ವಿರೂಪ ತಡೆ ಕಾಯ್ದೆಯಡಿ ಕೇಸ್ ದಾಖಲಿಸಲಾಗಿತ್ತು. ಆದ್ರೆ, ಈ ಕಾಯ್ದೆ ಹೊಸಪೇಟೆ ಪಟ್ಟಣಕ್ಕೆ ಅನ್ವಯವಾಗುವುದಿಲ್ಲ. ಕಾಯ್ದೆ ಹೊಸಪೇಟೆಗೆ ಅನ್ವಯಿಸಲು ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ ಎಂದು ಆರೋಪಿಗಳ ಪರ ವಕೀಲರು ಕೋರ್ಟ್​ ಮುಂದೆ ವಾದ ಮಂಡಿಸಿದ್ದಾರೆ. ಇದನ್ನು ಆಲಿಸಿದ ಕೋರ್ಟ್, ಅರ್ಜಿದಾರರ ವಾದ ಪುರಸ್ಕರಿಸಿ ಕೇಸ್ ರದ್ದುಗೊಳಿಸಿ ಆದೇಶ ನೀಡಿದೆ.

ಇದನ್ನೂ ಓದಿ: ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬ: 3 ಕೊಲೆ ಮಾಡಿದ್ದ ಕಲಬುರಗಿಯ ಪಾತಕಿ ನೇಣು ಕುಣಿಕೆಯಿಂದ ಬಚಾವ್

 ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:33 pm, Mon, 28 August 23