ವಿಡಿಯೋ ಇದೆ: ದಿನವೂ ರೊಟ್ಟಿ ಕೊಡುತ್ತಿದ್ದ ಅಜ್ಜನ ಶವದ ಬಳಿ ಬಂದು, ಮುತ್ತು ಕೊಟ್ಟು ಅಂತಿಮ ನಮನ ಸಲ್ಲಿಸಿದ ಮಂಗ!

|

Updated on: Apr 07, 2023 | 11:18 AM

Homosapien Tribute to man: ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ತನಗೆ ದಿನವೂ ರೊಟ್ಟಿ ಕೊಡುತ್ತಿದ್ದ ಪೋಮುಸಾ ಹಬೀಬ್ ಅವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಾಗ, ಅವರ ಅಂತಿಮ ದರ್ಶನ ಪಡೆದು ಅಮೂಲ್ಯ ಮುತ್ತು ನೀಡಿ ಗೌರವ ಸಲ್ಲಿಸಿದ ಆಂಜನೇಯ.

ವಿಡಿಯೋ ಇದೆ: ದಿನವೂ ರೊಟ್ಟಿ ಕೊಡುತ್ತಿದ್ದ ಅಜ್ಜನ ಶವದ ಬಳಿ ಬಂದು, ಮುತ್ತು ಕೊಟ್ಟು ಅಂತಿಮ ನಮನ ಸಲ್ಲಿಸಿದ ಮಂಗ!
ರೊಟ್ಟಿ ಕೊಡುತ್ತಿದ್ದ ಅಜ್ಜನ ಶವದ ಬಳಿ ಬಂದು, ಮುತ್ತು ಕೊಟ್ಟ ಮಂಗ!
Follow us on

ನೂತನ ಜಿಲ್ಲೆ ವಿಜಯನಗರನದಲ್ಲೊಂದು (Vijayanagar) ಅಪರೂಪದ ಪ್ರಸಂಗವೊಂದು ನಡೆದಿದೆ. ಮಂಗನಿಂದ ಮಾನವ ಎಂಬುದು ಎಲ್ಲರಿಗೂ ತಿಳಿದಿರುವುದೇ ಆದರೂ ಮಾವನ-ಮಂಗ ನಡುವಣ ಅಂತಃಕರಣಕ್ಕೊಂದು ಉದಾಹರಣೆಯಾಗುವಂತಹ ಘಟನೆಯೊಂದು ನಡೆದಿದೆ. ಈ ಸ್ಟೋರಿ ನೋಡಿದರೆ ನಿಜಕ್ಕೂ ಒಮ್ಮೆ ಮನ-ಹೃದಯ ದ್ರವಿಸುತ್ತದೆ. ಪ್ರಾಣಿಗೂ ಮನಸ್ಸಿದೆ ಮಾನವೀಯತೆ ಅನ್ನೋದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮಂಗನಲ್ಲೂ ಮಾನವೀಯ ಗುಣ, ಅಂತಃಕರಣ ಇದೆ ಎಂಬುದು ಸಾಬೀತಾಗುತ್ತದೆ. ಮನುಷ್ಯ ಸತ್ತ ಮೇಲೆ ಸಂಬಂಧಿಕರು, ಸ್ನೇಹಿತರು ಒಬ್ಬೊಬ್ಬರಾಗಿ ಆಗಮಿಸಿ, ಅಂತಿಮ ಗೌರವ ಸಲ್ಲಿಸುವುದು ವಾಡಿಕೆ, ಆಗಾಗ ನೋಡುತ್ತಿರುತ್ತೇವೆ. ಪ್ರಾಣಿ ಅದರಲ್ಲೂ ಮನುಷ್ಯನ ಮೂಲ ರೂಪಿ ಮಂಗ (Homosapien) ಬಂದು ತನ್ನ ಧಣಿಗೆ ಒಂದು ಮುತ್ತು ನೀಡಿ, ಅಂತಿಮ ನಮನ (Tribute) ಸಲ್ಲಿಸಿರುವುದು ವಿಶೇಷವಾಗಿದೆ. ತನಗೆ ದಿನಾ ಆಹಾರ ನೀಡುತ್ತಿದ್ದ ವ್ಯಕ್ತಿ, ಇಹಲೋಕ ತ್ಯಜಿಸಿದ್ದಾನೆ ಎಂಬುದನ್ನು ಅದು ಹೇಗೋ ತಿಳಿದ ಆ ಮಂಗ (Monkey), ತನ್ನ ಧಣಿಯ ಶವದ ಬಳಿಗೆ ಬಂದು ಸ್ವಲ್ಪ ಹೊತ್ತು ಸುತ್ತಮುತ್ತಲಿದ್ದವರ ದುಃಖದಲ್ಲಿ ತಾನೂ ಭಾಗಿಯಾಗಿರುವೆ ಎಂದು ಮೂಕರೋದನೆಯೊಂದಿಗೆ ಹೇಳುತ್ತಾ, ಕೊನೆಗೆ ಶವದ ತಲೆಯ ಬಳಿ ಬಂದು ಮುಖಕ್ಕೆ ಮುತ್ತು ಕೊಟ್ಟು (Kiss), ಅಂತಿಮ ಗೌರವ ಸಲ್ಲಿಸಿದ, ಹನುಮಂತ ಬಂದಷ್ಟೇ ವೇಗವಾಗಿ ಅಲ್ಲಿಂದ ತೆರಳಿದ್ದಾನೆ. ಜೊತೆಗೆ ಅಮೂಲ್ಯ ಸಂದೇಶವನ್ನು ಬಿತ್ತರಿಸಿ ಹೋಗಿದ್ದಾನೆ. ಇದೆಲ್ಲಾ ನಡೆದಿರುವುದು ಹಗರಿಬೊಮ್ಮನಹಳ್ಳಿ (Hagaribommanahalli) ಪಟ್ಟಣದಲ್ಲಿ.

ಪರಶುರಾಮಸಾ ಪೋಮುಸಾ ಹಬೀಬ್ ಸಾವಜಿ ಹಗರಿಬೊಮ್ಮನಹಳ್ಳಿ ಪಟ್ಟಣದ ಹೊಟೇಲ್ ಉದ್ಯಮಿ. ಇವರು ಏಪ್ರಿಲ್ 3 ರಂದು ಸೋಮವಾರ ಇಹಲೋಕದ ವ್ಯಾಪಾರ ತ್ಯಜಿಸಿದ್ದರು. ಆ ಹಿರಿಯ ಜೀವ ತಮ್ಮ ಜೀವಮಾನದುದ್ದಕ್ಕೂ ಪ್ರಾಣಿ ಪಕ್ಷಿಗಳಿಗೆ ತಮ್ಮ ಕೈಲಾದ ನೆರವು ನೀಡುತ್ತಿದ್ದರು. ಅದರಲ್ಲೂ ಆ ಒಂದು ಕೋತಿಗೆ ದಿನನಿತ್ಯವೂ ಹಣ್ಣು, ರೊಟ್ಟಿ ನೀಡುತ್ತಿದ್ದರು ಎಂದು ಪೋಮುಸಾ ಹಬೀಬ್ ಅವರ ಪುತ್ರ ಗಣಪತಿ ಹಬೀಬ್ ಹೇಳಿದ್ದಾರೆ.

Also read:  Siddeshwara Swamiji: ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿಗೆ ರಂಗೋಲಿ ಮೂಲಕ ಭಾವಪೂರ್ಣ

ವಯೋ ಸಹಜ ಕಾಯಿಲೆಯಿಂದ ಮೃತಪಟ್ಟ ಪೋಮುಸಾ ಹಬೀಬ್ ಅವರ ಅಂತಿಮ ದರ್ಶನ ಪಡೆದು ಅಮೂಲ್ಯ ಮುತ್ತು ನೀಡಿ ಗೌರವ ಸಲ್ಲಿಸಿದ ಆಂಜನೇಯ (ಕೋತಿ) ದಿನಾ ನಮ್ಮ ಮನೆ ಬಳಿ ಬರುತ್ತಿದ್ದ. ಕಿಟಕಿಯಲ್ಲಿ ಕುಳಿತು ನಮ್ಮ ಅಜ್ಜ ಪೋಮುಸಾ ಹಬೀಬ್ ಅವರತ್ತ ದಿಟ್ಟಿಸಿ ನೋಡುತ್ತಿದ್ದ. ಅದಕ್ಕೆ ಸ್ಪಂದಿಸುತ್ತಿದ್ದ ಅಜ್ಜ, ತಕ್ಷಣ ನಮ್ಮ ಕಡೆಗೆ ತಿರುಗಿ ಕೋತಿಗೆ ಏನಾದರೂ ಕೊಡುವಂತೆ ಫರ್ಮಾನು ಹೊರಡಿಸುತ್ತಿದ್ದರು. ಅದರಂತೆ ನಾವು ಏನಾದರೂ ತಿಂಡಿತಿನಿಸು, ರೊಟ್ಟಿ ನೀಡುತ್ತಿದ್ದೆವು ಎಂದು ಪೋಮುಸಾ ಹಬೀಬ್ ಅವರ ಮೊಮ್ಮಗಳು ಟಿವಿ9 ಗೆ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:06 am, Fri, 7 April 23