ವಿಜಯಪುರ: ಅಯ್ಯಪ್ಪ ಸ್ವಾಮಿ ಹುಟ್ಟಿನ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ವಿರುದ್ಧ ಕ್ರಮಕ್ಕೆ ಮಾಲಾಧಾರಿಗಳ ಪ್ರತಿಭಟನೆ

| Updated By: Rakesh Nayak Manchi

Updated on: Nov 28, 2023 | 7:46 PM

ಶಬರಿಮಲೆ ಅಯ್ಯಪ್ಪ ಸ್ವಾಮಿ ಬಗ್ಗೆ ವ್ಯಕ್ತಿಯೊಬ್ಬ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾನೆ. ಈತನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಇಂದು ಅಯ್ಯಪ್ಪ ಮಾಲಾಧಾರಿಗಳು ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಇಂತಹದ್ದೇ ಪ್ರಕರಣದಲ್ಲಿ ಈ ಹಿಂದೆ ಈತ ಅರೆಸ್ಟ್ ಆಗಿದ್ದ.

ವಿಜಯಪುರ: ಅಯ್ಯಪ್ಪ ಸ್ವಾಮಿ ಹುಟ್ಟಿನ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ವಿರುದ್ಧ ಕ್ರಮಕ್ಕೆ ಮಾಲಾಧಾರಿಗಳ ಪ್ರತಿಭಟನೆ
ಜಗದೀಶ್ ಕಲಬುರ್ಗಿ (ಎಡಚಿತ್ರ) ಮತ್ತು ಶಬರಿಮಲೆ ದೇವಸ್ಥಾನ (ಬಲಚಿತ್ರ)
Follow us on

ವಿಜಯಪುರ, ನ.28: ಸಾಮಾಜಿಕ ಜಾಲತಾಣದಲ್ಲಿ ಶಬರಿಮಲೆ (Shabarimala) ಅಯ್ಯಪ್ಪ ಸ್ವಾಮಿ ಬಗ್ಗೆ ವ್ಯಕ್ತಿಯೊಬ್ಬ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಪ್ರಕರಣ ನಡೆದಿದೆ. ಈ ಹಿಂದೆ ಇಂತಹದ್ದೇ ಪ್ರಕರಣದಲ್ಲಿ ಜೈಲು ಸೇರಿದ್ದ ಈತ ಮತ್ತೆ ಅದೇ ಚಾಳಿ ಮುಂದುವರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಯ್ಯಪ್ಪ ಮಾಲಾಧಾರಿಗಳು ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆಗೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಸಿಂದಗಿಯ ಜಗದೀಶ್ ಕಲಬುರ್ಗಿ ಎಂಬಾತ ತನ್ನ ಫೇಸ್​ಬುಕ್ ಖಾತೆಯಲ್ಲಿ ಅಯ್ಯಪ್ಪ ಸ್ವಾಮಿ ಹುಟ್ಟಿನ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾನೆ. ಸದ್ಯ, ಅಯ್ಯಪ್ಪ ಸ್ವಾಮಿ ಬಗ್ಗೆ ಅಪಮಾನ ಮಾಡಿದ ಆರೋಪಿ ಜಗದೀಶ ಕಲಬುರ್ಗಿ ವಿರುದ್ಧ ಆಕ್ರೋಶಗೊಂಡಿರುವ ಮಾಲಾಧಾರಿಗಳು ಸಿಂದಗಿ ಪೊಲೀಸ್ ಠಾಣೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ಅಲ್ಲದೆ, ಅಯ್ಯಪ್ಪ ಸ್ವಾಮೀ ಹುಟ್ಟಿನ ಬಗ್ಗೆ ಅವಮಾನಕಾರಿಯಾಗಿ ಪೋಸ್ಟ್ ಮಾಡಿರುವ ಜಗದೀಶ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀ ಧರ್ಮಶಾಸ್ತ್ರ ಸೇವಾ ಸಮೀತಿಯಿಂದ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅನ್ಯಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಯುವಕ ಸೆರೆ; ಬಂಧನ ಖಂಡಿಸಿ ಭಜರಂಗದಳದಿಂದ ಧರಣಿ

ದೇವರ ಬಗ್ಗೆ ಜಗದೀಶ್ ಕಲಬುರಗಿ ಈ ರೀತಿ ಪೋಸ್ಟ್ ಮಾಡಿರುವುದು ಇದೇ ಮೊದಲೇನಲ್ಲ. ದೇವರನ್ನು ಅವಹೇಳನ ಮಾಡುವ ಚಾಳಿ ಜೈಲಿಗೆ ಹೋಗಿ ಬಂದನಂತರವೂ ಮುಂದುವರಿಸಿದ್ದಾನೆ. ಹೌದು, ಈ ಹಿಂದೆ ಗುಡ್ಡಾಪೂರ ದಾನಮ್ಮದೇವಿಯ ಕುರಿತು ಅವಹೇಳನಕಾರಿ ಪೋಸ್ಟ್ ಹಂಚಿ ಬಂಧನಕ್ಕೊಳಗಾಗಿದ್ದ.

ಅಲ್ಲದೆ, ಬ್ರಾಹ್ಮಣ ಸಮುದಾಯದ ಬಗ್ಗೆಯೂ ಕೀಳಾಗಿ ಪೋಸ್ಟ್ ಮಾಡಿದ ಜಗದೀಶ್, ಭಾರತ ಸ್ವತಂತ್ರ ಆಗುವಾಗ ಶಿಕ್ಷಣ ಪಡೆದವರು ಬ್ರಾಹ್ಮಣರು ಮಾತ್ರ. ರಾಜಕೀಯದಲ್ಲೂ ಅವರೇ ಹೆಚ್ಚಾಗಿದ್ದರು. ಡಾ.ಬಿ ಆರ್ ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಬೆಳೆಸಲಿಲ್ಲ. ಬಿಜೆಪಿಯ ಬ್ರಾಹ್ಮಣರ ಕುತಂತ್ರದಿಂದಲೇ ಯಡಿಯೂರಪ್ಪನವರು ಜೈಲಿಗೆ ಹೋಗಿದ್ದು. ಬ್ರಾಹ್ಮಣರ ಕುತಂತ್ರದಿಂದಲೇ ಜಗದೀಶ ಶೆಟ್ಟರ್ ಬಿಜೆಪಿಯಿಂದ ಹೊರಗೆ ಹೋಗಿದ್ದು ಎಂದು ಪೋಸ್ಟ್ ಮಾಡಿದ್ದಾನೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:45 pm, Tue, 28 November 23