ವಿಜಯಪುರ, ಫೆ.03: ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಹೇಳಿದರು. ವಿಜಯಪುರ(Vijayapura) ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಂಸ್ಥಾನ ಹಿರೇಮಠದಲ್ಲಿ ಮಾತನಾಡಿದ ಅವರು ‘ಯಾವುದೇ ಧರ್ಮ ಕೂಡ ಶಾಂತಿ ಸಹೋದರತೆಯನ್ನು ಸಾರುತ್ತದೆ. ಧರ್ಮ ಯಾವುದಾದರೂ ದೇವರು ಒಬ್ಬನೇ, ಎಲ್ಲದರಲ್ಲೂ ದೇವರನ್ನು ನೋಡುತ್ತೇವೆ ಎಂದರು.
ಧರ್ಮ ಎಂದರೆ ಬದುಕು, ಎಲ್ಲರನ್ನು ಪ್ರೀತಿಸೋ ಮಾರ್ಗ, ಧರ್ಮ ಎಂದರೆ ಸಮಾನತೆ ಎಂದು ಡಿವಿಜಿ ಸಾಲುಗಳ ಮೂಲಕ ವಿವರಿಸಿದರು. ಧರ್ಮದಲ್ಲಿ ರಾಜಕಾರಣ ಇರಬೇಕು, ರಾಜಕಾರಣದಲ್ಲಿ ಧರ್ಮ ಇರಬಾರದು. ಆದರೆ, ಇತ್ತೀಚೆಗೆ ಅದು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಜನರ ಸಹಕಾರದಿಂದ ಮಠಗಳು ಬೆಳೆಯುತ್ತವೆ. ಜೊತೆಗೆ ಪೀಠಾಧಿಪತಿಗಳು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಇದನ್ನೂ ಓದಿ:ಫೆ.6ರಂದು ರಾಜ್ಯ ಕಾಂಗ್ರೆಸ್ನಿಂದ ದೆಹಲಿ ಚಲೋ: ಪ್ರತಿಭಟನೆ ಘೋಷಿಸಿದ ಡಿಸಿಎಂ ಡಿಕೆ ಶಿವಕುಮಾರ್
ಇದೇ ವೇಳೆ ವಿಜಯಪುರ ಜಿಲ್ಲೆ ಹೆಚ್ಚು ಕಾಂಗ್ರೆಸ್ ಶಾಸಕರನ್ನು ನೀಡಿದೆ. ಚುನಾವಣೆ ವೇಳೆ ನಾವು ಘೋಷಿಸಿದ್ದ 5 ಗ್ಯಾರಂಟಿಗಳನ್ನು ಸರ್ಕಾರ ಜಾರಿಮಾಡಿದೆ. ಇದರಿಂದ ರಾಜ್ಯದ ಜನರಿಗೆ ಅನುಕೂಲವಾಗಿದೆ ಎಂದರು. ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆಗಳ ಬಗ್ಗೆ ನಮ್ಮ ಸರ್ಕಾರ ಗಮನ ಹರಿಸಲಿದೆ. ಆ ಮೂಲಕ ರೈತರನ್ನು ಬದುಕಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಎಲ್ಲರನ್ನೂ ಸಮಾನತೆಯಿಂದ ನೋಡುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Sat, 3 February 24