ಫೆ.6ರಂದು ರಾಜ್ಯ ಕಾಂಗ್ರೆಸ್ನಿಂದ ದೆಹಲಿ ಚಲೋ: ಪ್ರತಿಭಟನೆ ಘೋಷಿಸಿದ ಡಿಸಿಎಂ ಡಿಕೆ ಶಿವಕುಮಾರ್
ವಿಧಾನಸೌಧದ ಸಮ್ಮೇಳ ಸಭಾಂಗಣದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರದ ತಾರತಮ್ಯ ನೀತಿ ವಿರೋಧಿಸಿ ಪ್ರತಿಭಟನೆ ಘೋಷಣೆ ಮಾಡಿದ್ದಾರೆ. ಫೆ.6ರಂದು ದೆಹಲಿ ಚಲೋ ನಡೆಸುತ್ತೇವೆ. ಫೆಬ್ರವರಿ 7ರಂದು ಎಲ್ಲರೂ ಸೇರಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು, ಫೆಬ್ರುವರಿ 2: ಕೇಂದ್ರದ ತಾರತಮ್ಯ ನೀತಿ ವಿರೋಧಿಸಿ ಫೆ.6ರಂದು ದೆಹಲಿ ಚಲೋ ನಡೆಸುತ್ತೇವೆ. ಫೆಬ್ರವರಿ 7ರಂದು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಘೋಷಣೆ ಮಾಡಿದ್ದಾರೆ. ವಿಧಾನಸೌಧದ ಸಮ್ಮೇಳ ಸಭಾಂಗಣದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಎಲ್ಲರೂ ಸೇರಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅವರು ಎಲ್ಲಿ ಜಾಗ ಕೊಡುತ್ತಾರೆ ನೋಡುತ್ತೇವೆ. ನಮ್ಮ ಹಕ್ಕನ್ನ ಕೇಳಲು ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ವಿರುದ್ಧ ರಾಜ್ಯ ಕಾಂಗ್ರೆಸ್ನಿಂದ ದೆಹಲಿ ಚಲೋ ಮಾಡುತ್ತೇವೆ. ತೆರಿಗೆ ತಾರತಮ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಕ್ಕಿಲ್ಲ
ಕರ್ನಾಟಕ ರಾಜ್ಯ ದೇಶದಲ್ಲೆ ಪ್ರಗತಿಪರ ರಾಜ್ಯ. ಮಹಾರಾಷ್ಟ್ರ ಬಿಟ್ಟರೆ ಅತೀ ಹೆಚ್ಚು ತೆರಿಗೆ ಕಟ್ಟುತ್ತೇವೆ. ನಿನ್ನೆಯ ಬಜೆಟ್ ಮಾತ್ರ ಐದು ವರ್ಷದ ಬಜೆಟ್ ಗಮನಿಸಬೇಕು. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಕ್ಕಿಲ್ಲ. 2018-19 ರಲ್ಲಿ ಅನುದಾನಕ್ಕಿಂತ 40% ರಿಂದ 45% ಕಡಿಮೆ ಆಗಿದೆ. ಪ್ರತಿ ವರ್ಷ 7ಸಾವಿರ, ಎಂಟು ಸಾವಿರ ರೂ. ಕಡಿಮೆ ಆಗುತ್ತಿದೆ. ಬಜೆಟ್ ಡಬಲ್ ಆದರೂ ತೆರಿಗೆ ಪಾಲು ಹೆಚ್ಚು ಬಂದಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ನಾನು ಕೇಸರಿ ಶಾಲು ಹಾಕುವುದಿಲ್ಲ, ಕುಮಾರಸ್ವಾಮಿ ಹಾಕಿದ್ದನ್ನು ಪರೋಕ್ಷವಾಗಿ ಖಂಡಿಸಿದ ದೇವೇಗೌಡ
ಇದಲ್ಲದೇ ಯೋಜನೆಗಳ ವಿಚಾರದಲ್ಲೂ ಅನುದಾನ ಸಿಕಿಲ್ಲ. ಕಳೆದ ವರ್ಷದ ಬಜೆಟ್ನಲ್ಲಿ ಅನೌನ್ಸ್ ಆಗಿದ್ದು ಕೊಟ್ಟಿಲ್ಲ. ನಾನು ಕೇಂದ್ರದ ಸಚಿವರಿಗೆ ಪತ್ರ ಬರೆದಿದ್ದೇವೆ. ನಮಗೆ ಸರಿಯಾದ ನ್ಯಾಯ ಒದಗಿಸುತ್ತಿಲ್ಲ ಎಂದು ತಿಳಿಸಿದ್ದೇವೆ. ಆದರೆ ಯಾವುದೇ ಉತ್ತರ ಕೇಂದ್ರದಿಂದ ಬಂದಿಲ್ಲ. ನಿನೆ ಬಜೆಟ್ನಲ್ಲಿ ಏನಾದರೂ ಸಿಗಬಹುದು ಅನ್ನುವ ನಿರೀಕ್ಷೆ ಇತ್ತು ಅದೂ ಆಗಿಲ್ಲ ಎಂದು ಹೇಳಿದ್ದಾರೆ.
ನಮ್ಮ ನಗರ ಸಹ ಹೆಲ್ತ್ ಟೂರಿಸಂ ಆಗುತ್ತಿದೆ
ನಾನು ದೆಹಲಿ, ಮುಂಬೈ ನಗರಗಳನ್ನು ಗಮನಿಸಿದ್ದೇನೆ. ನಮ್ಮ ನಗರ ಸಹ ಹೆಲ್ತ್ ಟೂರಿಸಂ ಆಗುತ್ತಿದೆ. ನಾನು ಒಂದಷ್ಟು ದಿನ ವೈದ್ಯಕೀಯ ಶಿಕ್ಷಣ ಸಚಿವ ಆಗಿದ್ದೆ. ಗ್ರಾಮೀಣ ಪ್ರದೇಶದ ಜನರನ್ನು ಬೆಂಗಳೂರಿಗೆ ತರುವುದಕ್ಕೆ ತುಂಬಾ ತೊಂದರೆ ಆಗುತ್ತಿದೆ. ಐಸಿಯು ಹಾಗೂ 108 ಏನಿದೆ ಅಲ್ಲಿ, ಸಿಬ್ಬಂದಿ ಕಾಳಜಿ ಮಾಡಬೇಕು ಎಂದರು.
ಇದನ್ನೂ ಓದಿ: ಡಿಕೆ ಸುರೇಶ್ ವಿವಾದ: ವ್ಯಕ್ತಿಗತವಾಗಿ ಹೇಳಿರಬಹುದು, ಇದು ಕಾಂಗ್ರೆಸ್ ನಿರ್ಣಯವಲ್ಲ ಎಂದ ದೇವೇಗೌಡ
108 ಸಿಬ್ಬಂದಿ ಖಾಸಗಿ ಆಸ್ಪತ್ರೆಗಳ ಜೊತೆ ಶಾಮೀಲು ಆಗ್ತಾ ಇದ್ದಾರೆ ಅಂತ ಕೇಳಿದ್ದೇನೆ. ಆಗ ರೋಗಿಗಳ ಕಡೆಯವರು ಆಸ್ತಿ, ಮನೆ ಮಾರಿಕೊಳ್ಳುವ ಸ್ಥಿತಿ ನಿರ್ಮಾಣ ಆಗಲಿದೆ. ಇಂದಿನ ಈ ಟೆಲಿ ಐಸಿಯು, ನಿಜಕ್ಕೂ ನಮ್ಮ ಸರ್ಕಾರಕ್ಕೆ ಇದೊಂದು ದೊಡ್ಡ ಕಿರೀಟ. ನಾಡಿನ ಜನತೆಯ ಆರೋಗ್ಯ ಕಾಪಾಡುವುದಕ್ಕೆ ಒಂದು ಆಶೀರ್ವಾದ ನಮಗೆ ಸಿಕ್ಕಿದೆ. ನಮ್ಮ ರಾಜ್ಯದಲ್ಲಿ ಮೆಡಿಕಲ್ ಕಾಲೇಜ್ಗಳು ಬೇರೆ ಎಲ್ಲೂ ಇಲ್ಲ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಬಿಜೆಪಿಯ ವಕ್ತಾರ
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ಬಿಜೆಪಿಯ ವಕ್ತಾರ ಆಗಿದ್ದಾರೆ. ದೇವೇಗೌಡರ ಸಿದ್ಧಾಂತವನ್ನು ಹತ್ತಿರದಿಂದ ನೋಡಿದ್ದೇನೆ. ಪಾಪ ವಯಸ್ಸಾದ ಕಾಲದಲ್ಲಿ ಅವರಿಗೆ ನೋವು ಕೊಟ್ಟಿದ್ದಾರೆ. ನಮಗೂ ಮಕ್ಕಳಿದ್ದಾರೆ, ವಯಸ್ಸಾದ ಕಾಲದಲ್ಲಿ ಏನಾಗುತ್ತೋ ಏನೋ ಭಯವಾಗುತ್ತಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:34 pm, Fri, 2 February 24