Saffron Farming: ಬಯಲುಸೀಮೆ ಮಾಲೂರಿನಲ್ಲಿ ಈಗ ಕೇಸರಿ ಚಿನ್ನದ ಕಂಪು! ಏನಿದರ ವೈಶಿಷ್ಟ್ಯ? ವಿವರ ಇಲ್ಲಿದೆ

Saffron Cultivation:: ಮಾರುಕಟ್ಟೆಯಲ್ಲಿ ಕಾಶ್ಮೀರ ಕೇಸರಿ ಹಾಗೂ ಇರಾನ್​ ಕೇಸರಿ ಮಾತ್ರ ಸಿಗುತ್ತದೆ ಒಂದು ಕೆಜಿ ಕೇಸರಿಗೆ ಐದರಿಂದ-ಹತ್ತು ಲಕ್ಷದವರೆಗೆ ಬೆಲೆ ಇದೆ. ಕೇಸರಿ ಸದ್ಯ ಪ್ರತಿ ವರ್ಷ 100 ಟನ್​ ಬೇಡಿಕೆ ಇದ್ದು, ಸದ್ಯ 3.8 ಟನ್​ ಮಾತ್ರ ಕೇಸರಿ ಉತ್ಪಾದನೆಯಾಗುತ್ತಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕೇಸರಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಕೇಸರಿ ಬೆಳೆ ಅತ್ಯಂತ ಲಾಭದಾಯ ಅನ್ನೋದು ಕೋಲಾರದ ಸಾವಯವ ಕೃಷಿಕ ಹಾಗೂ ಕೃಷಿ ವಿಜ್ಞಾನಿ ಲೋಕೇಶ್ ಅವರ ಮಾತು.

Saffron Farming: ಬಯಲುಸೀಮೆ ಮಾಲೂರಿನಲ್ಲಿ ಈಗ ಕೇಸರಿ ಚಿನ್ನದ ಕಂಪು! ಏನಿದರ ವೈಶಿಷ್ಟ್ಯ? ವಿವರ ಇಲ್ಲಿದೆ
ಬಯಲು ಸೀಮೆ ಮಾಲೂರಿನಲ್ಲಿ ಈಗ ಕೇಸರಿ ಚಿನ್ನ ಫಳಫಳಿಸುತ್ತಿದೆ! ಏನಿದರ ವೈಶಿಷ್ಟ್ಯ?
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on:Feb 02, 2024 | 4:57 PM

ಅದರ ಬೆಲೆ ಕೇಳಿದ್ರೆ ಎಲ್ಲರೂ ಬೆಚ್ಚಿ ಬೀಳ್ತಾರೆ, ಯಾಕಂದ್ರೆ ಅದನ್ನು ಎಲ್ಲಾ ಕಡೆ ಬೆಳೆಯೋಕೆ ಆಗಲ್ಲ, ಎಲ್ಲೆಂದರೆ ಅಲ್ಲಿ ಸಿಗೋದಿಲ್ಲ ಅದಕ್ಕೆ ಮಿತಿಮೀರಿದ ಬೇಡಿಕೆ ಇರೋದರಿಂದ ಕಲಬೆರಕೆ ಇಲ್ಲದ್ದು ಮಾರುಕಟ್ಟೆಯಲ್ಲಿ ಸಿಗೋದು ಕಷ್ಟ ಹಾಗಾಗಿ ಅದನ್ನು ಬೆಳೆಯುವವರು ಕೋಟ್ಯಾಧಿಪತಿಗಳಾಗುತ್ತಾರೆ, ಅದಕ್ಕಾಗಿಯೇ ಅದನ್ನ ಕೆಂಪು ಚಿನ್ನ (saffron gold) ಎಂದೇ ಕರೆಯುತ್ತಾರೆ. ಅಷ್ಟಕ್ಕೂ ಯಾವುದಾ ಬೆಳೆ ಅಂತೀರಾ ಇಲ್ಲಿದೆ ಡೀಟೇಲ್ಸ್​. ಹವಾನಿಯಂತ್ರಿತ ಕೊಠಡಿಯಲ್ಲಿ ಬೆಳೆಯುತ್ತಿರುವ ಕೇಸರಿ ಗಡ್ಡೆಗಳು, ಮತ್ತೊಂದೆಡೆ ಹವಾನಿಂತ್ರಿತ ಕೊಠಡಿಯಲ್ಲೇ ಬೆಳೆದು ಹೂ ಬಿಟ್ಟಿರುವ ಕೇಸರಿ, ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ (Malur, Kolar).

ಕೇಸರಿ ಅಂದಾಕ್ಷಣ ಅದು ಕಾಶ್ಮೀರದಲ್ಲಿ ಮಾತ್ರ ಬೆಳೆಯುತ್ತಾರೆ ಅನ್ನೋ ಮಾತಿದೆ. ಯಾಕಂದ್ರೆ ಕೇಸರಿ ಬೆಳೆಯಲು ಸೂಕ್ತ ವಾತಾವರಣ ಇರೋದು ಕಾಶ್ಮೀರ ಹಾಗೂ ಇರಾನ್​ ನಲ್ಲಿ ಮಾತ್ರ ಹಾಗಾಗಿ ಮಾರುಕಟ್ಟೆಯಲ್ಲಿ ಕಾಶ್ಮೀರ ಮತ್ತು ಇರಾನ್​ ಕೇಸರಿ ಮಾತ್ರವೇ ಲಭ್ಯವಾಗುತ್ತಿದೆ. ಆದರೆ ಅಸಾಧ್ಯ ಎನ್ನುವಂತೆ ಕೋಲಾರದ ಸಾವಯವ ಕೃಷಿಕ ಹಾಗೂ ಕೃಷಿ ವಿಜ್ಞಾನಿ ಲೋಕೇಶ್​ ಅವರು ಬಯಲು ಸೀಮೆ ಕೋಲಾರದಲ್ಲಿ ಕೇಸರಿ ಬೆಳೆ ಬೆಳೆಯುವ ಮೂಲಕ ಯಶಸ್ವಿಯಾಗಿದ್ದಾರೆ.

ಲೋಕೇಶ್ ಅವರು ತಮ್ಮ ಮನೆಯ ಒಂದು ಕೊಠಡಿಯಲ್ಲಿ ಕೇಸರಿ ಬೆಳೆಯಲು ಬೇಕಾಗುವ ವಾತಾವರಣವನ್ನು ನಿರ್ಮಾಣ ಮಾಡಿಕೊಂಡು ಅಲ್ಲಿ ಕೇಸರಿ ಬೆಳೆದು ಯಶಸ್ವಿಯಾಗಿದ್ದಾರೆ. ತಮ್ಮ ಮನೆಯ ಒಂದು ಕೊಠಡಿಯಲ್ಲಿ ಕಾಶ್ಮೀರದ ರೀತಿಯಲ್ಲಿರುವ ಹವಾನಿಯಂತ್ರಿತ ಕೊಠಡಿ ಸೃಷ್ಟಿಮಾಡಿಕೊಂಡು ನಂತರ ಕಾಶ್ಮೀರದಿಂದ ಕೇಸರಿ ಗಡ್ಡೆಗಳನ್ನು ತರಿಸಿಕೊಂಡು ಕೇಸರಿ ಬೆಳೆ ಬೆಳೆಯಲು ನಿರ್ಧರಿಸಿ ಪ್ರಾಯೋಗಿಕವಾಗಿ ಇದನ್ನು ಬೆಳೆದಿದ್ದಾರೆ. ಸುಮಾರು ಹತ್ತು ಸಾವಿರ ರೂಪಾಯಿಗೆ ಕೇಸರಿ ಗಡ್ಡೆಗಳನ್ನು ತರಿಸಿಕೊಂಡು ಅದನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ಇಂಡೋರ್​ ಫಾರ್ಮಿಂಗ್ ಮಾಡಿದ್ರು.

ಇದನ್ನೂ ಓದಿ: Saffron – ಕೇಸರಿ ಯಾಕೆ ತುಂಬಾ ದುಬಾರಿ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಅದರ ಕೃಷಿ ಪ್ರಕ್ರಿಯೆ ಬಗ್ಗೆ ತಿಳಿಯಿರಿ

ಈ ವೇಳೆ ಅವರಿಗೆ ಮೊದಲ ಬಿತ್ತನೆಯಲ್ಲೇ ಸುಮಾರು 20 ಗ್ರಾಂ ಕೇಸರಿ ಸಿಕ್ಕಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಕೇಸರಿಗೆ 1000-1500 ರೂ ಬೆಲೆ ಇದೆ. ಹಾಗಾಗಿ ಲೋಕೇಶ್ ಅವರಿಗೆ ಹತ್ತು ಸಾವಿರಕ್ಕೆ ಹತ್ತು ಸಾವಿರ ಲಾಭ ಸಿಕ್ಕಿದೆ.ಅಲ್ಲದೆ ಕೇಸರಿ ಗಡ್ಡೆಗಳು ಒಮ್ಮ ಬಿತ್ತನೆಮಾಡಿದ್ರೆ ಅದು ಜೀವನ ಪರ್ಯಂತ ಹೂ ಬಿಡುತ್ತದೆ ಅಲ್ಲದೆ ಗಡ್ಡೆಗಳು ಸಹ ಹೆಚ್ಚಾಗುತ್ತದೆ ಹಾಗಾಗಿ ಅವರಿಗೆ ಪ್ರತಿವರ್ಷ ನಿರೀಕ್ಷೆಗೂ ಮೀರಿದ ಲಾಭ ಸಿಗುತ್ತದೆ ಅನ್ನೋದು ಲೋಕೇಶ್ ಅವರ ಮಾತು.

ಇನ್ನು ಮಾರುಕಟ್ಟೆಯಲ್ಲಿ ಕಾಶ್ಮೀರ ಕೇಸರಿ ಹಾಗೂ ಇರಾನ್​ ಕೇಸರಿ ಮಾತ್ರ ಸಿಗುತ್ತದೆ ಒಂದು ಕೆಜಿ ಕೇಸರಿಗೆ ಐದರಿಂದ-ಹತ್ತು ಲಕ್ಷದವರೆಗೆ ಬೆಲೆ ಇದೆ. ಕೇಸರಿ ಸದ್ಯ ಪ್ರತಿ ವರ್ಷ 100 ಟನ್​ ಬೇಡಿಕೆ ಇದ್ದು, ಸದ್ಯ 3.8 ಟನ್​ ಮಾತ್ರ ಕೇಸರಿ ಉತ್ಪಾದನೆಯಾಗುತ್ತಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕೇಸರಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಕೇಸರಿ ಬೆಳೆ ಅತ್ಯಂತ ಲಾಭದಾಯ ಅನ್ನೋದು ಲೋಕೇಶ್ ಅವರ ಮಾತು. ಇದರ ಜೊತೆಗೆ ಲೋಕೇಶ್ ತಮ್ಮ ಪ್ರಯೋಗಾಲಯದಲ್ಲಿ ಅತ್ಯಂತ ದುಬಾರಿ ಬೆಲೆಯ ಬ್ರೆಜಿಲ್​ ಆಲೂಗಡ್ಡೆ ಕೂಡಾ ಬೆಳೆದಿದ್ದಾರೆ.

ಬ್ರೆಜಿಲ್​ ಬ್ಲೂ ಆಲೂಗಡ್ಡೆ ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 800 ಕೋಟಿ ರೂಪಾಯಿ ಬೆಲೆ ಇದೆ. ಅದನ್ನು ಸದ್ಯ ಬಿತ್ತನೆ ಬೀಜ ಮಾಡುವ ಹಂತದಲ್ಲಿದ್ದು ಬ್ರೆಜಿಲ್​ ಆಲೂಗಡ್ಡೆ ಬೆಳೆಯುವಲ್ಲಿಯೂ ಲೋಕೇಶ್ ಯಶಸ್ವಿಯಾಗಿದ್ದಾರೆ. ಅದರ ಜೊತೆಗೆ ಕಾರ್ಡಿಸೆಪ್ಸ್ ಅನ್ನೋ ಮಶ್ರೂಮ್​ ಅಂದರೆ ಹಣಬೆಯನ್ನು ಲೋಕೇಶ್ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಕಾರ್ಡಿಸೆಪ್ಸ್​ ಮಶ್ರೂಮ್​ ಒಂದು ಕೆಜಿಗೆ 3.5 ಲಕ್ಷ ರೂಪಾಯಿ ಇದೆ ಇದನ್ನು ನ್ಯಾಚುರಲ್ ವಯಾಗ್ರ ಎಂದು ಕರೆಯುತ್ತಾರೆ.ಈ ಮಶ್ರೂಮ್​ನ್ನು ಹೆಚ್ಚಾಗಿ ಬಾಡಿ ಬಿಲ್ಡರ್​ ಗಳು ಹಾಗೂ ಔಷಧಗಳ ತಯಾರಿಕೆಗೆ ಹೆಚ್ಚಾಗಿ​ ಬಳಸುತ್ತಾರೆ ಹಾಗಾಗಿ ಇದೂ ಕೂಡಾ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇದ್ದು ಇದನ್ನು ಲೋಕೇಶ್ ಅವರು ತಮ್ಮ ಪ್ರಯೋಗಾಲಯದಲ್ಲಿ ಬೆಳೆಯುವ ಮೂಲಕ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಬೆಳೆದ ಬೆಳೆ ಬೆಣ್ಣೆನಗರಿಯಲ್ಲಿ ಸಹ ಬೆಳೆಯಬಹುದು! ಯಾವುದದು? ಏನದು ರೈತ ಕಸರತ್ತು?

ಒಟ್ಟಾರೆ ಕೃಷಿಯಲ್ಲಿ ಸದಾ ಒಂದಿಲ್ಲೊಂದು ಪ್ರಯೋಗ ಮಾಡುವ ಮೂಲಕ ಹೆಸರು ಮಾಡಿದ್ದ ಕೋಲಾರ ಕೃಷಿಕರು ಸದ್ಯ ಅತ್ಯಂತ ಬೆಲೆ ಬಾಳುವ ಹಾಗೂ ಅಸಾಧ್ಯ ಎನ್ನುವ ಕೇಸರಿ, ಮಶ್ರೂಮ್​ ರೀತಿಯ ಬೆಳೆಗಳನ್ನು ಬೆಳೆಯುವ ಮೂಲಕ ಹೊಸದೊಂದು ಪ್ರಯತ್ನಕ್ಕೆ ಮಾಡಿದ್ದಾರೆ. ಸದ್ಯ ಇದು ನಿಜಕ್ಕೂ ದೊಡ್ಡ ಮಟ್ಟದದಲ್ಲಿ ಬೆಳೆಯಲು ಅನುಕೂಲವಾದರೆ ಹೊಸ ಕ್ರಾಂತಿಕಾರಿ ಕೃಷಿಗೆ ನಾಂದಿಯಾಗೋದರಲ್ಲಿ ಅನುಮಾನವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:54 pm, Fri, 2 February 24