AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಹಸ್ತ ಭೀತಿ..ಜೆಡಿಎಸ್​​ ಫುಲ್​ ಅಲರ್ಟ್​: ರಾಜ್ಯಾಧ್ಯಕ್ಷರ ಆಯ್ಕೆಗೆ ಮುಹೂರ್ತ ಫಿಕ್ಸ್

ಲೋಕಸಭೆ ಚುನಾವಣೆಗೆ ದೋಸ್ತಿ ದೋಸ್ತಿ ಎಂದು ಹೋರಾಡಿದ್ರು. ಅದರಂತೆಯೇ ಲೋಕಸಭೆ ಚುನಾವಣೆಯಲ್ಲೂ ಭರ್ಜರಿ ಗೆಲುವನ್ನೇ ಸಾಧಿಸಿದ್ರು. ಇದೀಗ ಮೈತ್ರಿಯೇ ಜೆಡಿಎಸ್​ಗೆ ಕುತ್ತು ತಂತಾ ಅನ್ನೋ ಅನುಮಾನ ಜೆಡಿಎಸ್​ ನಾಯಕರಲ್ಲೇ ಶುರುವಾಗಿದೆ. ಇದೇ ವಿಚಾರವಾಗಿಯೇ ಜೆಡಿಎಸ್​ ನಾಯಕರಲ್ಲೇ ಭಿನ್ನರಾಗ ಭುಗಿಲೆದ್ದಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಸೋಲಿನ ಬಳಿಕ ದಳ ಮನೆಯಲ್ಲಿ ತಳಮಳ ಶುರುವಾಗಿದೆ. ಒಂದ್ಕಡೆ ಹೆಚ್​ಡಿಕೆ ವಿರುದ್ಧ ಕೆಲವರು ಅಸಮಾಧಾನ ಹೊರಹಾಕ್ತಿದ್ರೆ, ಜೆಡಿಎಸ್​ ಭಿನ್ನರಾಗವೇ ಆಪರೇಷನ್​ ಹಸ್ತಕ್ಕೆ ಅನುಕೂಲ ಆಯ್ತಾ ಅನ್ನೋ ಚರ್ಚೆ ಹುಟ್ಟುಹಾಕಿದೆ. ಆಪರೇಷನ್ ಹಸ್ತದ ಬಗ್ಗೆ ಮುನ್ಸೂಚನೆ ಸಿಕ್ಕಿರೋ ದಳಪತಿಗಳು ಇದೀಗ ಎಚ್ಚೆತ್ತುಕೊಂಡಿದ್ದು, ಸಭೆಯೂ ನಡೆಸಿದ್ದಾರೆ.

ಆಪರೇಷನ್ ಹಸ್ತ ಭೀತಿ..ಜೆಡಿಎಸ್​​ ಫುಲ್​ ಅಲರ್ಟ್​: ರಾಜ್ಯಾಧ್ಯಕ್ಷರ ಆಯ್ಕೆಗೆ ಮುಹೂರ್ತ ಫಿಕ್ಸ್
ದೇವೇಗೌಡ, ಕುಮಾರಸ್ವಾಮಿ
ರಮೇಶ್ ಬಿ. ಜವಳಗೇರಾ
|

Updated on: Jan 12, 2025 | 5:56 PM

Share

ಬೆಂಗಳೂರು, (ಜನವರಿ 12): ಬಿಜೆಪಿಯಲ್ಲಿನ ಬಣ ಬಡಿದಾಟದಂತೆಯೇ, ದಳ ಮನೆಯಲ್ಲೂ ಅಸಮಾಧಾನ ಇದೆ. ಬಿಜೆಪಿ ಜೊತೆ ಮೈತ್ರಿಯನ್ನೇ ಶಾಸಕ ಜಿಟಿ.ದೇವೇಗೌಡ ಬಹಿರಂಗವಾಗಿಯೇ ವಿರೋಧ ಮಾಡಿದ್ರು, ಇದಿಷ್ಟೇ ಅಲ್ಲ, ಇದೀಗ ಜೆಡಿಎಸ್​ ರಾಜ್ಯಾಧ್ಯಕ್ಷ ಪಟ್ಟಕ್ಕೆ ನಿಖಿಲ್​ ಕುಮಾರಸ್ವಾಮಿಯನ್ನ ಕೂರಿಸಲು ದೇವೇಗೌಡರು ಪ್ರಯತ್ನದಲ್ಲಿದ್ದಾರೆ. ಇದು ಜೆಡಿಎಸ್ ಹಿರಿಯ ನಾಯಕರ ಕಣ್ಣು ಕೆಂಪಗಾಗಿಸಿದೆ. ಹಿರಿಯರ ಕಡೆಗಣನೆ ಎಂದು ಆಕ್ರೋಶಕ್ಕೂ ಕಾರಣವಾಗಿದೆ. ದಳ ಮನೆಯಲ್ಲಿನ ಭಿನ್ನರಾಗವೇ ಆಪರೇಷನ್​ ಹಸ್ತಕ್ಕೆ ಚಾನ್ಸ್ ಕೊಟ್ಟಂತಾಗುತ್ತೆ ಅನ್ನೋ ಭಯದಲ್ಲಿರೋ ಕುಮಾರಸ್ವಾಮಿ ಮುನ್ನೆಚ್ಚರಿಕೆಯಾಗಿ ಸಭೆ ಮಾಡೋ ಮೂಲಕ ವಿಶ್ವಾಸಕ್ಕೆ ತೆಗೆದಕೊಳ್ಳೋ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್​ ನಾಯಕರ ಆಟಕ್ಕೆ ಬ್ರೇಕ್ ಹಾಕುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ.

ಬೆಂಗಳೂರಿನ ಶೇಷಾದ್ರಿಪುರಂನ ಜೆಡಿಎಸ್​ ಕಚೇರಿಯಲ್ಲಿ ಸಭೆ ನಡೆಸಲಾಯ್ತು, ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೀತು. ಸಭೆಯಲ್ಲಿ ಜೆಡಿಎಸ್​ನ ಹಾಲಿ, ಮಾಜಿ ಶಾಸಕರು, ಪರಿಷತ್​ ಸದಸ್ಯರು ಭಾಗಿಯಾದ್ರು, ಪಕ್ಷದಲ್ಲಿನ ಬೆಳವಣಿಗೆ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಪಡೆದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋ ಪ್ರಯತ್ನ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆ: ಕರ್ನಾಟಕದಲ್ಲಿ ಗರಿಗೆದರಿದ ರಾಜಕೀಯ

ಏಪ್ರಿಲ್​​ನೊಳಗೆ JDS ರಾಜ್ಯಾಧ್ಯಕ್ಷರ ಆಯ್ಕೆ

ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಏಪ್ರಿಲ್​​ನೊಳಗೆ JDS ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತೇವೆ. ಚುನಾವಣೆ ಮೂಲಕ JDS ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತೇವೆ. ನಾನು ನಾಲ್ಕು ದಿನಗಳ ಕಾಲ ನವದೆಹಲಿಯಲ್ಲಿ ಇರುತ್ತೇನೆ. ಹೀಗಾಗಿ ನಮ್ಮ ಪಕ್ಷದ ಎಲ್ಲ ಪ್ರಮುಖರಿಗೆ ಕಟ್ಟು ನಿಟ್ಟಾಗಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನಾನು ನಾಲ್ಕು ದಿನಗಳ ಕಾಲ ನವದೆಹಲಿಯಲ್ಲಿ ಇರುತ್ತೇನೆ. ಒಂದು ಅಥವಾ ಎರಡು ದಿನ ದೇಶದ ಕೈಗಾರಿಕೆಗಳಿಗೆ ಭೇಟಿ ನೀಡುತ್ತೇನೆ. ಇತರೆ ಕೆಲಸಗಳ ಬಗ್ಗೆ ಗಮನ ಕೊಡುತ್ತೇನೆ. ಪಕ್ಷ ಸಂಘಟನೆಗೆ, ಮಂಡ್ಯ ಕ್ಷೇತ್ರಕ್ಕೂ ಗಮನ ಕೊಡುತ್ತೇನೆ. ನನ್ನ ಪಕ್ಷದ ಶಾಸಕರ ಸೆಳೆಯುವ ಕೆಲಸ ಎಲ್ಲೂ ಆಗುತ್ತಿಲ್ಲ. ಯಾವ ಜೆಡಿಎಸ್​ ಶಾಸಕರೂ ಸಹ ಪಕ್ಷ ಬಿಡುವುದಿಲ್ಲ ಎಂದು ತಿಳಿಸಿದರು.

ಒಟ್ಟಿನಲ್ಲಿ ಜೆಡಿಎಸ್ ಹೊಸ ರಾಜ್ಯಾಧ್ಯಕ್ಷ ಆಯ್ಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನಿಖಿಲ್​ಗೆ ಪಟ್ಟ ಕಟ್ಟುವುದು ಗ್ಯಾರಂಟಿಯಾಗಿದೆ.

ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ