Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಬಳಿಕ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋ ‘ಬಾಯ್ಸ್ Vs ಗರ್ಲ್ಸ್​’

‘ಬಿಗ್ ಬಾಸ್ ಕನ್ನಡ ಸೀಸನ್ 11’ ಇನ್ನೆರಡು ವಾರಗಳಲ್ಲಿ ಮುಗಿಯಲಿದೆ. ಅದಾದ ಬಳಿಕ ಬಿಗ್ ಬಾಸ್ ಸಮಯಕ್ಕೆ ಹೊಸ ರಿಲಿಯಾಲಿಟಿ ಶೋ ಪ್ರಸಾರ ಆಗಲಿದೆ. ಅದರ ಬಗ್ಗೆ ‘ಕಲರ್ಸ್ ಕನ್ನಡ’ ವಾಹಿನಿ ಮಾಹಿತಿ ಹಂಚಿಕೊಂಡಿದೆ. ಒಂದು ಹೊಸ ಥೀಮ್ ಇರುವ ‘ಬಾಯ್ಸ್ Vs ಗರ್ಲ್ಸ್​’ ರಿಯಾಲಿಟಿ ಶೋನ ಪ್ರಸಾರಕ್ಕೆ ಸಕಲ ಸಿದ್ಧತೆ ನಡೆದಿದೆ.

ಬಿಗ್ ಬಾಸ್ ಬಳಿಕ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋ ‘ಬಾಯ್ಸ್ Vs ಗರ್ಲ್ಸ್​’
Anupama Gowda, Boys Vs Girls Logo
Follow us
ಮದನ್​ ಕುಮಾರ್​
|

Updated on: Jan 12, 2025 | 5:55 PM

ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಆರಂಭವಾಗಿ 3 ತಿಂಗಳಿಗೂ ಹೆಚ್ಚು ಕಾಲ ಕಳೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಶೋ ಮುಕ್ತಾಯ ಆಗಲಿದೆ. ‘ಬಿಗ್ ಬಾಸ್’ ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆ ವೀಕ್ಷಕರ ಮನದಲ್ಲಿ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ‘ಬಾಯ್ಸ್ Vs ಗರ್ಲ್ಸ್​’ ಹೆಸರಿನ ಹೊಸ ರಿಯಾಲಿಟಿ ಶೋ ಪ್ರಸಾರ ಆಗಲಿದೆ. ‘ಬಿಗ್ ಬಾಸ್’ ಕಾರ್ಯಕ್ರಮದ ಶನಿವಾರದ (ಜನವರಿ 11) ಸಂಚಿಕೆಯಲ್ಲಿ ಈ ಶೋನ ಲೋಗೋ ಅನಾವರಣ ಮಾಡಲಾಗಿದೆ.

ಜನವರಿ 11ರಂದು ಬಿಗ್ ಬಾಸ್ ಮನೆಗೆ ನಟಿ, ನಿರೂಪಕಿ ಅನುಪಮಾ ಗೌಡ ಅವರು ಅತಿಥಿಯಾಗಿ ಆಗಮಿಸಿದ್ದರು. ಅವರು ಹೊಸ ರಿಯಾಲಿಟಿ ಶೋ ನಿರೂಪಣೆ ಮಾಡಲಿದ್ದಾರೆ. ಹಾಗಾಗಿ ದೊಡ್ಮನೆಗೆ ಕಾಲಿಟ್ಟು ‘ಬಾಯ್ಸ್ Vs ಗರ್ಲ್ಸ್​’ ಲೋಗೋ ಅನಾವರಣ ಮಾಡಿದರು. ಬಿಗ್ ಬಾಸ್ ಸ್ಪರ್ಧಿಗಳ ಎದುರಿನಲ್ಲಿ ಲೋಗೋ ಲಾಂಚ್ ಆಗಿದ್ದು ವಿಶೇಷವಾಗಿತ್ತು.

‘ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಓರ್ವ ಆ್ಯಂಕರ್​ ಒಂದು ಶೋಗೆ ಬಂದು ತನಗೆ ಬೇಕಾಗಿರುವ ಸ್ಪರ್ಧಿಗಳ ಜೊತೆ ಮಾತನಾಡಿ, ಅವರಿಂದ ಪ್ರೋಮೋ ಶೂಟ್ ಮಾಡಲು ನಾನು ಇಲ್ಲಿದೆ ಬಂದಿರೋದು’ ಎಂದು ಹೇಳಿದಾಗ ಬಿಗ್ ಸ್ಪರ್ಧಿಗಳೆಲ್ಲರೂ ಖುಷಿಪಟ್ಟರು. ‘ಗಂಡು ಅಥವಾ ಹೆಣ್ಣು ಇವರಲ್ಲಿ ಯಾರು ಸ್ಟ್ರಾಂಗ್ ಎಂಬ ಚರ್ಚೆ ನಡೆಯುತ್ತಲೇ ಇರುತ್ತದೆ. ಅದೇ ಥೀಮ್ ಇಟ್ಟುಕೊಂಡು ಶೋ ಬರಲಿದೆ’ ಎಂದು ಅನುಪಮಾ ಗೌಡ ಅವರು ಹೇಳಿದರು.

ಬಿಗ್ ಬಾಸ್ ಫಿನಾಲೆಗೆ ಹನುಮಂತ ಎಂಟ್ರಿ; ಘಟಾನುಘಟಿಗಳೆಲ್ಲ ಗಪ್​ಚುಪ್​

ಬಿಗ್ ಬಾಸ್ ಮನೆಯ ಕೆಲವು ಸ್ಪರ್ಧಿಗಳಿಗೆ ಒಂದಷ್ಟು ಡೈಲಾಗ್​ಗಳನ್ನು ನೀಡಲಾಯಿತು. ‘ಹೆಣ್ಮಕ್ಕಳು ಮತ್ತು ಗಂಡ್ಮಕ್ಕಳಿಗೆ ಟಾಸ್ಕ್​ಗಳನ್ನು ನೀಡಿ, ಒಂದಷ್ಟು ಮನರಂಜನೆ ಕೊಡುವ ರಿಯಾಲಿಟಿ ಶೋ ಇದು. ತುಂಬ ಕಲರ್​ಫುಲ್ ಆಗಿ ಬರಬೇಕು. ಯಾಕೆಂದರೆ ಇದು ಕಲರ್ಸ್​ ಕನ್ನಡ’ ಎಂದಿದ್ದಾರೆ ಅನುಪಮಾ ಗೌಡ. ಈ ಹೊಸ ಶೋ ಹೇಗಿರಲಿದೆ? ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂದು ತಿಳಿಯಲು ವೀಕ್ಷಕರು ಕಾದಿದ್ದಾರೆ.

ಇನ್ನು, ಬಿಗ್ ಬಾಸ್​ ಬಗ್ಗೆ ಹೇಳುವುದಾದರೆ, ಹನುಮಂತ ಅವರು ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾರೆ. ರಜತ್, ತ್ರಿವಿಕ್ರಮ್, ಉಗ್ರಂ ಮಂಜು, ಭವ್ಯಾ ಗೌಡ, ಮೋಕ್ಷಿತಾ ಪೈ, ಭವ್ಯಾ ಗೌಡ, ಗೌತಮಿ ಅವರು ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ