Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ತೋರಿಸಿ ರಜತ್ ಕಳ್ಳಾಟ ಹೊರಗೆಳೆದ ಸುದೀಪ್

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ರಜತ್ ತುಸು ಡಾಮಿನೆಂಟ್, ಸುದೀಪ್ ಎದುರು ತಾವು ಗೆಲ್ಲಲು ಬಂದಿದ್ದರುವುದು, ನನಗೆ ಯಾರೂ ಗೆಳೆಯರಲ್ಲ ಎಲ್ಲರೂ ಪ್ರತಿಸ್ಪರ್ಧಿಗಳು. ಯಾರ ಬಗ್ಗೆಯೂ ನನಗೆ ಮಮಕಾರ ಇಲ್ಲ, ನನಗೆ ಈ ಆಟ ಗೆಲ್ಲುವುದು ಬಿಟ್ಟು ಬೇರೆ ಯೋಚನೆ ಇಲ್ಲ ಎಂದೆಲ್ಲ ಹೇಳುತ್ತಾರೆ. ಆದರೆ ಉಸ್ತುವಾರಿ ವಹಿಸಿಕೊಂಡಾಗ ಫೇವರಿಸಮ್ ಮಾಡುತ್ತಾರೆ. ರಜತ್​ರ ಈ ಕಳ್ಳಾಟವನ್ನು ಸುದೀಪ್ ಹೊರಗೆಳೆದಿದ್ದಾರೆ.

ವಿಡಿಯೋ ತೋರಿಸಿ ರಜತ್ ಕಳ್ಳಾಟ ಹೊರಗೆಳೆದ ಸುದೀಪ್
Bigg Boss Kannada
Follow us
ಮಂಜುನಾಥ ಸಿ.
|

Updated on: Jan 12, 2025 | 8:10 AM

ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಇನ್ನು ಒಂದು ವಾರವಷ್ಟೆ ಬಾಕಿ ಇದೆ. ಕಳೆದ ವಾರ ಯಾರು ಹೇಗೆ ಆಡಿದರು ಎಂದು ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ವಿಶ್ಲೇಷಣೆ ಮಾಡಿದರು. ಕಳೆದ ವಾರದಲ್ಲಿ ಟಾಸ್ಕ್​ಗಳು ಒಂದಕ್ಕಿಂತಲೂ ಒಂದು ಕಠಿಣವಾಗಿದ್ದವು. ಸ್ಪರ್ಧಿಗಳು ಪರಸ್ಪರ ಸ್ಪರ್ಧೆಗೆ ಬಿದ್ದವರಂತೆ ಟಾಸ್ಕ್​ಗಳನ್ನು ಆಡಿದರು. ಕ್ಯಾಪ್ಟನ್ ಆಗಿದ್ದ ರಜತ್, ಉಸ್ತುವಾರಿ ನಿರ್ವಹಿಸಿದರು. ಆದರೆ ಅವರ ಉಸ್ತುವಾರಿ ಪಕ್ಷಾತೀತವಾಗಿರಲಿಲ್ಲ. ಬದಲಿಗೆ ಯಾರೋ ಕೆಲವರ ಪರವಾಗಿ ಅವರು ನಿಲುವು ತಳೆದಂತಿತ್ತು. ಈ ವಿಷಯವನ್ನು ವಿಡಿಯೋ ಸಾಕ್ಷಿ ಸಮೇತ ಹೊರಹಾಕಿದರು, ಮಾತ್ರವಲ್ಲದೆ ರಜತ್ ಅವರ ಆಟವನ್ನು ಟೀಕೆ ಸಹ ಮಾಡಿದರು.

ರಜತ್​ರ ಉಸ್ತುವಾರಿಯ ಬಗ್ಗೆ ಮೊದಲಿಗೆ ಅಭಿಪ್ರಾಯ ಕೇಳಲಾಯ್ತು. ಆಗ ಗೌತಮಿ, ಉಗ್ರಂ ಮಂಜು, ಚೈತ್ರಾ, ಧನರಾಜ್ ಇನ್ನು ಕೆಲವರು ರಜತ್ ಅವರು ಪಕ್ಷಾತೀತವಾಗಿ ಉಸ್ತುವಾರಿ ಮಾಡಿಲ್ಲವೆಂದು. ಉದ್ದೇಶಪೂರ್ವಕವಾಗಿ ಕೆಲವರಿಗೆ ಫೇವರಿಸಮ್ ಮಾಡಿದರು. ಅವರ ತಂಡವನ್ನು ಗೆಲ್ಲಿಸಲು ಯತ್ನಿಸಿದರು ಎಂದು ಆರೋಪ ಮಾಡಿದರು. ಆದರೆ ರಜತ್ ಆ ಆರೋಪವನ್ನು ಒಪ್ಪಿಕೊಳ್ಳಲಿಲ್ಲ. ಆಗ ಸುದೀಪ್ ಕೆಲ ವಿಡಿಯೋಗಳನ್ನು ಪ್ಲೇ ಮಾಡಿದರು.

ಇದನ್ನೂ ಓದಿ:ಹನುಮಂತನ ಆ ಗುಣ ನನ್ನಲ್ಲೂ ಇದೆ: ಸುದೀಪ್ ಹೇಳಿದ ಆ ಗುಣ ಯಾವುದು?

ಮೂರು ವಿಡಿಯೋಗಳನ್ನು ಸುದೀಪ್ ಪ್ಲೇ ಮಾಡಿದರು. ಮೂರರಲ್ಲೂ ರಜತ್ ಕಳ್ಳಾಟ ಆಡಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಮಾತ್ರವಲ್ಲದೆ ಭವ್ಯಾಗಾಗಿಯೇ ಅವರು ಈ ಮೋಸದಾಟ ಆಡಿದ್ದರು. ಇದನ್ನು ಟೀಕಿಸಿದ ಸುದೀಪ್, ಈ ವಿಡಿಯೋ ನೋಡಿದರೆ ಮಾತ್ರವಲ್ಲದೆ ಈ ವಾರವೆಲ್ಲ ನೀವು ಆಡಿರುವ ರೀತಿ ನೋಡಿದರೆ ಒಂದು ಪ್ಯಾಟರ್ನ್ ಕಾಣುತ್ತಿದೆ. ಪ್ರತಿ ಬಾರಿ ನೀವು ಬಯಾಸ್ ಆದಾಗಲೂ ಅದರ ಲಾಭ ಸಿಕ್ಕಿರುವುದು ಭವ್ಯಾಗೆ. ಹಾಗಿದ್ದಮೇಲೆ ಇದನ್ನು ಫೇವರಿಸಮ್ ಎನ್ನದೆ ಇನ್ನೇನೆಂದು ಕರೆಯಬೇಕು’ ಎಂದು ಪ್ರಶ್ನೆ ಮಾಡಿದರು.

ಆರಂಭದಲ್ಲಿ ವಿತಂಡ ವಾದ ಪ್ರಯತ್ನ ಮಾಡಿದ ರಜತ್, ‘ನೋಡಲಿಲ್ಲ, ರೂಲ್ಸ್ ಗೊತ್ತಿರಲಿಲ್ಲ’ ಎಂಬ ವಾದಿಸಲು ಯತ್ನಿಸಿದರು. ಆದರೆ ಸುದೀಪ್, ಚೈತ್ರಾ ಇದೇ ಉತ್ತರ ನೀಡಿದಾಗ ನೀವು ಹೇಗೆ ನಡೆದುಕೊಂಡಿರಿ ಎಂಬುದನ್ನು ನೆನಪು ಮಾಡಿಕೊಳ್ಳಿ ಎಂದರು. ಬ್ರೇಕ್ ಸಮಯದಲ್ಲಿ ಮನೆಯವರ ಮೇಲೆ ಸಹ ರಜತ್ ಸಿಟ್ಟಿನಿಂದ ಮಾತನಾಡಿದರು. ಅದಾದ ಬಳಿಕ ಸುದೀಪ್ ಮುಂದೆ ತಪ್ಪು ಒಪ್ಪಿಕೊಂಡ ರಜತ್, ಇನ್ನು ಮುಂದೆ ತಿದ್ದುಕೊಳ್ಳುವುದಾಗಿ ಹೇಳಿದರು. ಕ್ಷಮೆ ಸಹ ಕೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ