ಮಾಡಬಾರದ ತಪ್ಪು ಮಾಡಿ ಜೈಲು ಸೇರಿದ ಭವ್ಯಾ: ಮನೆಯಿಂದ ಹೊರ ಕಳಿಸುವಂತೆ ಸುದೀಪ್ ಆಗ್ರಹ

Bigg Boss Kannada: ಬಿಗ್​ಬಾಸ್ ಕನ್ನಡದ ಸ್ಪರ್ಧಿ ಭವ್ಯಾ ಗೌಡ ಕೆಲ ವಾರದ ಹಿಂದೆ ಮೋಸದ ಆಟವಾಡಿ ಗೆದ್ದು ಕ್ಯಾಪ್ಟನ್ ಆಗಿದ್ದರು. ಇದನ್ನು ಸುದೀಪ್ ತೀವ್ರವಾಗಿ ವಿರೋಧಿಸಿ ಟೀಕಿಸಿದ್ದರು. ಆಗ ಕಣ್ಣೀರು ಹಾಕಿ ಕ್ಷಮೆ ಕೋರಿದ್ದ ಭವ್ಯಾ, ಈಗ ಮತ್ತೆ ಮೋಸದಾಟ ಮುಂದುವರೆಸಿದ್ದಾರೆ. ನಿಯಮ ಮೀರಿದ್ದಕ್ಕೆ ಭವ್ಯಾ ಅನ್ನು ಜೈಲಿಗೆ ಹಾಕಲಾಗಿದೆ. ಸುದೀಪ್ ಅಂತೂ ಮನೆಯಿಂದಲೇ ಹೊರ ಹಾಕಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಾಡಬಾರದ ತಪ್ಪು ಮಾಡಿ ಜೈಲು ಸೇರಿದ ಭವ್ಯಾ: ಮನೆಯಿಂದ ಹೊರ ಕಳಿಸುವಂತೆ ಸುದೀಪ್ ಆಗ್ರಹ
Kichcha Sudeep Bhavya Gowda
Follow us
ಮಂಜುನಾಥ ಸಿ.
|

Updated on: Jan 11, 2025 | 11:30 PM

ಬಿಗ್​ಬಾಸ್​ ಕನ್ನಡ ಸೀಸನ್ 11 ರ ಈ ಶನಿವಾರದ ಎಪಿಸೋಡ್​ನಲ್ಲಿ ಅಪರೂಪದ ಘಟನೆ ನಡೆದಿದೆ. ವಾರಕ್ಕೆ ಒಬ್ಬರು ಕಳಪೆ ಪಟ್ಟ ಹೊತ್ತುಕೊಂಡು ಮನೆಗೆ ಹೋಗುವುದು ಸಾಮಾನ್ಯ. ಆದರೆ ಈ ವಾರ ಇಬ್ಬರು ಜೈಲು ಸೇರಿದ್ದಾರೆ. ಮಂಜಣ್ಣ ಕಳಪೆ ಪಟ್ಟ ಹೊತ್ತು ಜೈಲು ಸೇರಿದರೆ ಭವ್ಯಾ ಅನ್ನು, ಸುದೀಪ್ ಮನವಿ ಮೇರೆಗೆ ಬಿಗ್​ಬಾಸ್ ಜೈಲು ಶಿಕ್ಷೆ ವಿಧಿಸಿದ್ದಾರೆ. ಭವ್ಯಾ ಮಾಡಬಾರದ ತಪ್ಪೊಂದು ಮಾಡಿದ್ದಕ್ಕಾಗಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಭವ್ಯಾ ಗೌಡ ನೋಡಲು ಸುನೀತವಾಗಿ ಕಾಣುತ್ತಾರಾದರೂ ಪದೇ ಪದೇ ಉದ್ದೇಶಪೂರ್ವಕವಾಗಿ ತಪ್ಪು ಮಾಡುತ್ತಲೇ ಬರುತ್ತಿದ್ದಾರೆ. ಗೆಲ್ಲುವ ಭರದಲ್ಲಿ ಮೋಸ ಮಾಡುತ್ತಾ ಬರುತ್ತಿದ್ದಾರೆ. ಕೆಲ ವಾರದ ಹಿಂದಷ್ಟೆ ಮೋಸ ಮಾಡಿ ಕ್ಯಾಪ್ಟನ್ ಆಗಿದ್ದ ಭವ್ಯಾ, ಸುದೀಪ್ ಅವರಿಂದ ಬಹಳ ಉಗಿಸಿಕೊಂಡಿದ್ದರು. ಈ ವಾರವೂ ಸಹ ರಜತ್ ಜೊತೆ ಸೇರಿಕೊಂಡು ಮೋಸ ಮಾಡಿದ್ದಾರೆ. ಜೊತೆಗೆ ಸುದೀಪ್ ಎದುರು ಸುಳ್ಳು ಸಹ ಹೇಳಿ ಬೈಸಿಕೊಂಡರು. ಸುದೀಪ್ ಮಾತಿನ ಚಾಟಿ ಬೀಸಿದಾಗ ಕಣ್ಣೀರು ಹಾಕುತ್ತಾ, ನಾನು ಸುಧಾರಿಸಿಕೊಳ್ಳುತ್ತೇನೆ ಎಂದರು.

ಶನಿವಾರದ ಎಪಿಸೋಡ್​ನಲ್ಲಿ ಭವ್ಯಾ ಅವರು ಸೇಫ್ ಆದರು. ಆದರೆ ಆ ನಂತರ ಸುದೀಪ್ ಅವರು ವಿಡಿಯೋ ಒಂದನ್ನು ತೋರಿಸಿದರು. ವಿಡಿಯೋನಲ್ಲಿ ಭವ್ಯಾ, ಹನುಮಂತನಿಗೆ ಹೊಡೆದಿದ್ದರು. ಆದರೆ ಅದನ್ನು ಯಾರೂ ನೋಡಲಿಲ್ಲ. ಆ ಏಟು ಜೋರಾಗಿಯೇ ಬಿದ್ದಿತ್ತು. ಈ ಬಗ್ಗೆ ಮಾತನಾಡಿದ ಸುದೀಪ್, ಇದು ಅಕ್ಷಮ್ಯ. ಇಷ್ಟು ಸಾಕು ನಿಮ್ಮನ್ನು ಮನೆಗೆ ಕಳಿಸಲು. ಆ ವ್ಯಕ್ತಿ (ಹನುಮಂತು) ತಿರುಗಿ ಬೀಳುವುದಿಲ್ಲ, ಇದನ್ನೆಲ್ಲ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ನೀವು ಹೀಗೆ ಮಾಡಿದ್ದಾ? ಎಂದು ಏರಿದ ಧ್ವನಿಯಲ್ಲಿ ಪ್ರಶ್ನೆ ಮಾಡಿದರು. ಇಷ್ಟೆ ಸಾಕು ನಿಮ್ಮನ್ನು ಮನೆಗೆ ಕಳಿಸಲು, ನನ್ನ ಪ್ರಕಾರ ನಿಮ್ಮನ್ನು ಈ ವೇಳೆಗಾಗಲೆ ಮನೆಗೆ ಕಳಿಸಬೇಕಿತ್ತು’ ಎಂದರು ಸುದೀಪ್.

ಇದನ್ನೂ ಓದಿ:ಯಾರು ಏನೇ ಅರಚಾಡಲಿ, ನಾನು ಅಖಾಡಕ್ಕೆ ಇಳಿಯುವುದು ಆಗಲೇ: ಸುದೀಪ್

ಆ ಬಳಿಕ, ಆ ಘಟನೆ ಟಾಸ್ಕ್​ ನಡುವೆ ನಡೆದಿದೆ ಹಾಗೂ ಹನುಮಂತು ಸಹ ಆ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬ ಕಾರಣಕ್ಕೆ ನೀವು ಉಳಿದುಕೊಂಡಿದ್ದೀರಿ. ಆದರೆ ಇದಕ್ಕೆ ಶಿಕ್ಷೆ ಆಗಲೇ ಬೇಕು ಎಂದು ಹೇಳಿ ಅವರಿಗಾಗಿ ಬಿಳಿ ಬಟ್ಟೆಗಳನ್ನು ಕಳಿಸಿದರು. ಬಿಗ್​ಬಾಸ್ ಆದೇಶದ ಬಳಿಕ ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದರು. ಅಲ್ಲದೆ, ಇದೇ ವಿಷಯ ಇಟ್ಟುಕೊಂಡು ಬೇರೆಯವರಿಗೂ ಎಚ್ಚರಿಕೆ ನೀಡಿದ ಸುದೀಪ್. ಯಾವುದೇ ಸಂದರ್ಭದಲ್ಲಿಯೂ ಸಹ ಯಾರು ಯಾರ ಮೇಲೂ ಕೈ ಮಾಡುವಂತಿಲ್ಲ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ