AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಲ್ತಾ ಹೈ ಧೋರಣೆ ಬೇಡ, ದೇಶದ ಅಭಿವೃದ್ಧಿ ಮುಖ್ಯವಾಗಲಿ: ಭಾರತೀಯ ಯುವಜನರಿಗೆ ಪ್ರಧಾನಿ ಮೋದಿ ಕರೆ

PM Narendra Modi at Viksit Bharat Young Leaders Dialogue: 2047ರೊಳಗೆ ಭಾರತವು ವಿಕಸಿತ ದೇಶವಾಗಿ ರೂಪುಗೊಳ್ಳುವ ದೊಡ್ಡ ಗುರಿಯನ್ನು ಕೇಂದ್ರ ಸರ್ಕಾರ ಇರಿಸಿದೆ. ನವದೆಹಲಿಯ ಭಾರತ್ ಮಂಡಪಂನಲ್ಲಿ ಜನವರಿ 12ರಂದು ಆಯೋಜನೆಗೊಂಡ ವಿಕಸಿತ ಭಾರತ ಯುವ ನಾಯಕರ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಯುವಜನರ ಮಹತ್ವದ ಬಗ್ಗೆ ಮಾತನಾಡಿದರು. ಚಲ್ತಾ ಹೈ ಧೋರಣೆಯ ವ್ಯಕ್ತಿಗಳು ಸತ್ತ ಹೆಣಕ್ಕಿಂತ ಭಿನ್ನವಲ್ಲ ಎಂದ ಅವರು ಪ್ರತಿಯೊಂದು ಜೀವನದಲ್ಲೂ ಗುರಿ ಇರಬೇಕು ಎಂದು ಕರೆ ನೀಡಿದರು.

ಚಲ್ತಾ ಹೈ ಧೋರಣೆ ಬೇಡ, ದೇಶದ ಅಭಿವೃದ್ಧಿ ಮುಖ್ಯವಾಗಲಿ: ಭಾರತೀಯ ಯುವಜನರಿಗೆ ಪ್ರಧಾನಿ ಮೋದಿ ಕರೆ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 12, 2025 | 4:56 PM

Share

ನವದೆಹಲಿ, ಜನವರಿ 12: ಮುಂದಿನ 25 ವರ್ಷದಲ್ಲಿ ಭಾರತವು ವಿಕಸಿತ ದೇಶವಾಗಿ ರೂಪುಗೊಳ್ಳಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ. ಯುವಜನರು ವಿಕಸಿತ ಭಾರತ ನಿರ್ಮಾಣದಲ್ಲಿ ಮುಖ್ಯಪಾತ್ರ ವಹಿಸಬಲ್ಲುರು ಎನ್ನುವ ವಿಶ್ವಾಸ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಭಾನುವಾರ ರಾಷ್ಟ್ರರಾಜಧಾನಿಯ ಭಾರತ್ ಮಂಟಪಂನಲ್ಲಿ ವಿಕಸಿತ ಭಾರತ ಯುವ ನಾಯಕರ ಸಂವಾದ ಕಾರ್ಯಕ್ರಮದಲ್ಲಿ (Viksit Bharat Young Leaders Dialogue) ಪ್ರಧಾನಿಗಳು ಮಾತನಾಡುತ್ತಾ, ದೇಶದ ಯುವಜನರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಸ್ವಾಮಿ ವಿವೇಕಾನಂದರ ಜಯಂತಿ ಕೂಡ ಆಗಿದ್ದು ಅವರ ಗೌರವಾರ್ಥವಾಗಿ ರಾಷ್ಟ್ರೀಯ ಯುವ ದಿನವನ್ನು ಇವತ್ತು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿಕಸಿತ ಭಾರತ ಯುವ ನಾಯಕರ ಸಂವಾದ ಕಾರ್ಯಕ್ರಮ ನಡೆಸಲಾಗಿದೆ.

ಯುವ ಪೀಳಿಗೆಯ ಬಗ್ಗೆ ತನಗೆ ವಿಶ್ವಾಸ ಇದೆ. ಸ್ವಾಮಿ ವಿವೇಕಾನಂದರು ಇವತ್ತು ನಮ್ಮೊಂದಿಗಿದ್ದಿದ್ದರೆ ದೇಶಕ್ಕೆ ಹೊಸ ಭರವಸೆ ಮತ್ತು ಕನಸುಗಳನ್ನು ಕಟ್ಟಿಕೊಡುತ್ತಿರುವ ಇವತ್ತಿನ ಯುವಕರ ಗಂಭೀರ ಪ್ರಯತ್ನಗಳಿಂದ ಖುಷಿಪಡುತ್ತಿದ್ದರು ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತೀಯ ರೈಲ್ವೆ ಗರಿಮೆ… ವಿಶ್ವದ ಅತಿ ಶಕ್ತಿಶಾಲಿ ಹೈಡ್ರೋಜನ್ ಎಂಜಿನ್ ಅಭಿವೃದ್ದಿ; ಅಗ್ಗದ ಪ್ರಯಾಣಕ್ಕೆ ಅಮೃತ್ ಭಾರತ್ 2.0

ಈ ಭಾರತ್ ಮಂಡಪಂನಲ್ಲಿ ಜಾಗತಿಕ ಬೆಳವಣಿಗೆಯ ಬಗ್ಗೆ ಚರ್ಚಿಸಲು ಜಾಗತಿಕ ನಾಯಕರು ಸೇರುತ್ತಾರೆ. ಇವತ್ತು ನಮ್ಮ ಯುವಕರು ಇಲ್ಲಿ ನಿಂತು ಮುಂದಿನ 25 ವರ್ಷಗಳಿಗೆ ಅಭಿವೃದ್ಧಿಯ ಹಾದಿಯನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದೂ ನರೇಂದ್ರ ಮೋದಿ ತಿಳಿಸಿದ್ದಾರೆ.

ಚಲ್ತಾ ಹೈ ಧೋರಣೆ ಬೇಡ….

ಯುವಶಕ್ತಿಯು 2047ರೊಳಗೆ ಭಾರತವು ಮುಂದುವರಿದ ದೇಶವಾಗಿ ನಿರ್ಮಾಣ ಮಾಡಬಲ್ಲುದು ಎನ್ನುವ ನಂಬಿಕೆ ಇದೆ. ಡಾಟಾ ಇಟ್ಟುಕೊಂಡು ಮಾತನಾಡುವವರಿಗೆ ಈ ಗುರಿ ಅಸಾಧ್ಯದ್ದು ಎನಿಸಬಹುದು. ಆದರೆ, ಗುರಿ ಬಹಳ ದೊಡ್ಡದಿದ್ದರೂ ಅದನ್ನು ಸಾಧಿಸುವುದು ಅಸಾಧ್ಯವೇನಲ್ಲ ಎಂದು ಹೇಳಿದ ನರೇಂದ್ರ ಮೋದಿ, ಈ ಹಾದಿಯಲ್ಲಿ ಚಲ್ತಾ ಹೈ ಧೋರಣೆ ಇರಬಾರದು ಎಂದೂ ಎಚ್ಚರಿಸಿದ್ದಾರೆ.

ಇದನ್ನೂ ಓದಿ: Trump swearing in Ceremony: ಡೊನಾಲ್ಡ್​ ಟ್ರಂಪ್​ ಪ್ರಮಾಣ ವಚನ ಸಮಾರಂಭದಲ್ಲಿ ಎಸ್​ ಜೈಶಂಕರ್ ಭಾಗಿ

‘ಯಾವುದೇ ದೇಶವಾದರೂ ಅಭಿವೃದ್ಧಿ ಹೊಂದಬೇಕಾದರೆ ದೊಡ್ಡ ಗುರಿಗಳ ಬೆಂಬತ್ತಿ ಸಾಧಿಸಬೇಕು. ಕೆಲ ಜನರು ‘ಚಲ್ತಾ ಹೈ’ (ಆದ್ರಾಯ್ತು ಬಿಡಿ), ‘ಚಲ್ನೇ ದೋ’ (ಹೋದ್ರೋಯ್ತು ಬಿಡಿ) ಎನ್ನುವ ಧೋರಣೆ ಹೊಂದಿರುತ್ತಾರೆ. ಇಂಥವರಿಂದ ಯಾವ ಬದಲಾವಣೆಯೂ ಆಗುವುದಿಲ್ಲ. ಅವರು ಸತ್ತ ಹೆಣಕ್ಕೆ ಸಮಾನ. ಗುರಿ ಇದ್ದರೆ ಜೀವನ ಸುಗಮ. ಇವತ್ತು ಭಾರತ ದೇಶವೂ ಗುರಿಗಳಿಂದ ಮುನ್ನಡೆಯುತ್ತಿದೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ