ಕಾಶ್ಮೀರದಲ್ಲಿ ಬೆಳೆದ ಬೆಳೆ ಬೆಣ್ಣೆನಗರಿಯಲ್ಲಿ ಸಹ ಬೆಳೆಯಬಹುದು! ಯಾವುದದು? ಏನದು ರೈತ ಕಸರತ್ತು?

ಅಲ್ಲಿನ ಕೇಸರಿ ಬೆಳೆಗಾರರಿಂದ ತರಬೇತಿ ಪಡೆದ ನಿಂತರ ವಿಡಿಯೋ ಕಾಲ್ ಮೂಲಕ ಸಲಹೆ ಪಡೆದು ಕೇಸರಿ ಬೆಳೆ ಬೆಳೆಯುತ್ತಿದ್ದಾರೆ. ಮನೆಯಲ್ಲಿ ಒಂದು ರೂಮ್ ನಲ್ಲಿ ಸಾವಯವ ಗೊಬ್ಬರ ಬಳಿಸಿ, ಎಸಿ ಹಾಕಿಸಿ ಬಿಸಿ ಗಾಳಿ ಒಳಗೆ ಹೋಗದಂತೆ ವ್ಯವಸ್ಥೆ ಮಾಡಿ ಕೇಸರಿ ಬೆಳೆಯುತ್ತಿದ್ದಾನೆ! ಹೀಗಾಗಿ ಕೇಸರಿ ಬೆಳೆ ಹೂವು ಬಿಟ್ಟಿದೆ! ಕೇಸರಿ ಎಸಳು ಸಹ ಬಂದಿದೆ.

ಕಾಶ್ಮೀರದಲ್ಲಿ ಬೆಳೆದ ಬೆಳೆ ಬೆಣ್ಣೆನಗರಿಯಲ್ಲಿ ಸಹ ಬೆಳೆಯಬಹುದು! ಯಾವುದದು? ಏನದು ರೈತ ಕಸರತ್ತು?
ಕಾಶ್ಮೀರದಲ್ಲಿ ಬೆಳೆದ ಬೆಳೆ ಬೆಣ್ಣೆನಗರಿಯಲ್ಲಿ ಸಹ ಬೆಳೆಯಬಹುದು! ಯಾವುದದು?
Follow us
| Updated By: ಸಾಧು ಶ್ರೀನಾಥ್​

Updated on: Nov 21, 2023 | 2:37 PM

ಎಲ್ಲಿಯ ಕಾಶ್ಮೀರ? ಎಲ್ಲಿಯ ದಾವಣಗೆರೆ? ಕಾಶ್ಮೀರದಲ್ಲಿ (Kashmir) ಬೆಳೆದ ಬೆಳೆ ದಾವಣಗೆರೆಯಲ್ಲಿ (Davanagere) ಸಹ ಬೆಳೆಯಬಹುದು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಮೇಲಾಗಿ ಅಲ್ಲಿನ ವಾತಾವರಣವೇ ಬೇರೆ, ಇಲ್ಲಿನ ವಾತಾವರಣವೇ ಬೇರೆ. ಅಲ್ಲಿ ಜಮೀನಿನಲ್ಲಿ ಕಡಲೆ, ಸಜ್ಜಿ, ಮೆಕ್ಕೆಜೋಳ ಸೇರಿದಂತೆ ಹತ್ತಾರು ಬೆಳೆಗಳನ್ನ ಬೆಳೆದಂತೆ ಕಾಶ್ಮೀರದಲ್ಲಿ ಕೇಸರಿ (Kashmir saffron) ಸಹ ಓಪನ್ ಜಮೀನಿನಲ್ಲಿ ಬೆಳೆಯಿತ್ತಾರೆ. ಇದೇ ಕೇಸರಿಯನ್ನ ದಾವಣಗೆರೆ ಹುಡುಗನೊಬ್ಬ ಮನೆಯಲ್ಲಿ ಬೆಳೆಯುತ್ತಿದ್ದಾನೆ! ಕಾಶ್ಮೀರದಲ್ಲಿನ ಅದೇ ಹವಾಗುಣವನ್ನ ಮನೆಯಲ್ಲಿ ಸೃಷ್ಟಿಸಿದ್ದಾರೆ. ಇಲ್ಲಿದೆ ಬೆಣ್ಣೆ ನಗರಿಯಲ್ಲಿ ಕಾಶ್ಮೀರ ಕೇಸರಿ ಬೆಳೆಯುವ ಸ್ಟೋರಿ.

ನಿಮಗೆ ಕಾಶ್ಮೀರ ಅಂದ್ರೆ ಥಟ್ ಅಂತಾ ನನಪಿಗೆ ಬರುವುದು ಆಪಲ್ ಮತ್ತು ಕೇಸರಿ. ದೇಶ ವಿದೇಶಗಳಲ್ಲಿ ಕಾಶ್ಮೀರಿ ಕೇಸರಿ ಅಂದ್ರೆ ಪ್ರಸಿದ್ಧಿ ಗಳಿಸಿದೆ. ವಿಶೇಷ ಅಂದ್ರೆ ಒಂದು ಗ್ರಾಂ ಕೇಸರಿಗೆ 350 ರಿಂದ 500 ರೂಪಾಯಿ ಅಂದರೂ ಅಚ್ಚರಿ ಪಡಬೇಕಾಗಿಲ್ಲ. ಇದು ಭಾರತದಲ್ಲಿನ ದರವಾಗಿದ್ರೆ, ವಿದೇಶದಲ್ಲಿನ ಇನ್ನೂ ದುಬಾರಿ ದರ ಕೇಳಿದರೆ ಬೆಚ್ಚಿ ಬಿಳುತ್ತೀರಿ. ಹೀಗಾಗಿ ಕಾಶ್ಮೀರದಲ್ಲಿ ಕೇಸರಿ ಬೆಳೆಯುವ ಒಂದು ನಿರ್ದಿಷ್ಟ ಪ್ರದೇಶವೇ ಇದೆ.

ಮೇಲಾಗಿ ಹೆಚ್ಚು ತಂಪು ವಾತಾವಣ ಪ್ರದೇಶದಲ್ಲಿ ಅಲ್ಲಿ ಕೇಸರಿ ಬೆಳೆಯುತ್ತಾರೆ. ಅದೇನೆ ಆಗಲಿ ನಮ್ಮಲ್ಲಿಯೂ ಯಾಕೆ ನಾವು ಕೇಸರಿ ಬೆಳೆಯಬಾರದು ಎಂದು ದಾವಣಗೆರೆ ಬಳಿಯ ದೊಡ್ಡ ಬಾತಿ ಗ್ರಾಮದ ಯುವಕ ಜಾಕೋಬ್ ಸತ್ಯರಾಜ್ ಅವರ ತಲೆಗೆ ಬಂದಿದ್ದೆ ತಡ, ಅದೇ ಕಾರಣಕ್ಕೆ ಚೆನ್ನಾಗಿ ಉರ್ದು ಮಾತನಾಡಲು ಬರುವ ಸ್ನೇಹಿತರನ್ನ ಕರೆದುಕೊಂಡು ಕಾಶ್ಮೀರಕ್ಕೂ ಹೋಗಿ ಕೆಲ ದಿನ ಇದ್ದುಬಂದಿದ್ದಾನೆ.

ಅಲ್ಲಿನ ಕೇಸರಿ ಬೆಳೆಗಾರರಿಂದ ತರಬೇತಿ ಪಡೆದ ನಿಂತರ ವಿಡಿಯೋ ಕಾಲ್ ಮೂಲಕ ಸಲಹೆ ಪಡೆದು ಕೇಸರಿ ಬೆಳೆ ಬೆಳೆಯುತ್ತಿದ್ದಾರೆ. ಮನೆಯಲ್ಲಿ ಒಂದು ರೂಮ್ ನಲ್ಲಿ ಸಾವಯವ ಗೊಬ್ಬರ ಬಳಿಸಿ, ಎಸಿ ಹಾಕಿಸಿ ಬಿಸಿ ಗಾಳಿ ಒಳಗೆ ಹೋಗದಂತೆ ವ್ಯವಸ್ಥೆ ಮಾಡಿ ಕೇಸರಿ ಬೆಳೆಯುತ್ತಿದ್ದಾನೆ! ಹೀಗಾಗಿ ಕೇಸರಿ ಬೆಳೆ ಹೂವು ಬಿಟ್ಟಿದೆ! ಕೇಸರಿ ಎಸಳು ಸಹ ಬಂದಿದೆ. ಅಂದಹಾಗೆ ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಓರ್ವ ರೈತ ಮಹಿಳೆ ಸಹ ಇಂತಹ ಕೇಸರಿ ಬೆಳೆ ಬೆಳೆಯುತ್ತಿದ್ದಾರೆ. ಅವರು ಸಹ ಜಾಕೋಬ್ ಗೆ ಮಾರ್ಗದರ್ಶಕರಾಗಿದ್ದಾರೆ. ಕೇಸರಿ ಬೆಳೆ ಈಗ ಕೈಗೆ ಬರುತ್ತಿದೆ.

ಜಾಕೋಬ್ ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವು ಘಟಕದಲ್ಲಿ ಗುತ್ತಿಗೆ ಆಧಾರ ಮೇಲೆ ಉದ್ಯೋಗದಲ್ಲಿದ್ದಾನೆ. ಈ ಹಿಂದೆ ಕೆಲ ಪ್ರದೇಶಕ್ಕೆ ಹೋಗಿ ಅಣಬೆ ಬೇಸಾಯ ಸಹ ಮಾಡಿದ್ದ. ಅದು ಲಾಭ ಕೊಟ್ಟಿತ್ತು. ಇದಾದ ಬಳಿಕ ಸದ್ಯಕ್ಕೆ ನಾಲ್ಕು ಲಕ್ಷ ರೂಪಾಯಿ ವೆಚ್ಚ ಮಾಡಿ ಕಾಶ್ಮೀರ ಕೇಸರಿ ಬೆಳೆಗೆ ಕೈಹಾಕಿದ್ದಾನೆ. ಕಾಶ್ಮೀರ ರೈತರ ಕಡೆ ಪ್ರತಿ ಕೆಜಿಗೆ 600 ರೂಪಾಯಿ ಕೊಟ್ಟು ಕೇಸರಿ ಬೀಜ ತಂದಿದ್ದಾನೆ. ಇಲ್ಲಿ ಕೇಸರಿ ಬೆಳೆಯಲು ಬೇಕಾಗಿದ್ದು ತಂಪಾದ ಹವಾಮಾನ. ಅದು ಕಾಶ್ಮೀರದಲ್ಲಿ ಇರುವ ವಾತಾವರಣದಂತೆ ಸೃಷ್ಟಿಯಾಗಬೇಕು. ಅಲ್ಲಿಯಂತೆ ಕೇಸರಿ ಬೆಳೆಯನ್ನು ವಿಶಾಲ ಜಮೀನಿನಲ್ಲಿ ಬೆಳೆಯಲು ಆಗಲ್ಲ. ರೂಮ್ ನಲ್ಲಿ ಎಸಿ ಹಾಗೂ ಮನೆಯಲ್ಲಿ ಫ್ರೀಜ್ ಗಳನ್ನ ಬಳಸಿಕೊಂಡು ಇಡಿ ರೂಮ್ ನಲ್ಲಿ ತಂಪು ವಾತಾವಣ ಸೃಷ್ಟಿ ಆಗುವಂತೆ ಮಾಡಿ ಕೇಸರಿ ಬೆಳೆಯಲಾಗುತ್ತಿದೆ.

Also Read: 

ದೂರದ ಕಾಶ್ಮೀರದಲ್ಲಿ ಮಾತ್ರ ಬೆಳೆಯ ಬೇಕಿದ್ದ ಕೇಸರಿ ಬೆಳೆ ಈಗ ದಾವಣಗೆರೆಯಲ್ಲಿ ಬೆಳೆಯುತ್ತಾರೆ. ಇದು ಹೇಳಿ ಕೇಳಿ ಅರೇ ಮಲೆನಾಡು ಪ್ರದೇಶ. ಇಲ್ಲಿನ ಬಿಸಿಲಿನ ತಾಪಮಾನ ಸಹ ಹೆಚ್ಚು. ಇಂತಹ ವಾತಾವರಣದಲ್ಲಿ ಕಾಶ್ಮೀರ ಕೇಸರಿ ಬೆಳೆಯುತ್ತಿರುವುದು ಮಾತ್ರ ವಿಶೇಷ. ಸದ್ಯಕ್ಕೆ ಕೇಸರಿ ಬೆಳೆ ಬರುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಒಣಗಿಸುತ್ತಾರೆ. ಮೇಲಾಗಿ ಅದರ ಹೂವು ಸಹ ಸೌಂದರ್ಯ ವರ್ಧಕಗಳಿಗೆ ಬಳಸುತ್ತಾರೆ. ಇನ್ನೂ ಮಾರಾಟ ಮಾಡಿಲ್ಲ. ತಾನು ಬೆಳೆದ ಕೇಸರಿಯನ್ನ ಸದ್ಯ ಕಾಶ್ಮೀರಿ ರೈತರಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾನೆ. ನಿಜಕ್ಕೂ ಯುವಕನ ಸಾಧನೆ ಮೆಚ್ಚಲೇ ಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ