ರವಿಯವರನ್ನು ಸ್ಟೇಶನ್ನಿಂದ ಬೇರೆಲ್ಲೋ ಕರೆದೊಯ್ದಾಗ ವಿಪರೀತ ಗಾಬರಿಯಾಗಿತ್ತು: ಪಲ್ಲವಿ ರವಿ
ಬೆಳಗಾವಿಯು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರವಾಗಿರುವುದರಿಂದ ಬಲಪ್ರಯೋಗ ಮಾಡುತ್ತಾರೆ ಅಂತ ಗೊತ್ತಿತ್ತು, ಅದರೆ ಕೊಲೆಗಡುಕ ಅಂತ ರವಿಯವರಿಗೆ ಯಾಕೆ ಹೇಳುತ್ತಿದ್ದಾರೋ? ಅವರಿಗೆ ಆರೋಪ ಮಾಡಲು ವಿಷಯ ಸಿಗುತ್ತಿಲ್ಲ, ಅವರು ಕಾರನ್ನು ಡ್ರೈವ್ ಮಾಡಲ್ಲ, ಅಪಘಾತಗಳು ಪ್ರತಿನಿತ್ಯ ಸಂಭವಿಸುತ್ತವೆ, ಇಲ್ಲಸಲ್ಲದ ಆರೋಪ ಮಾಡಿ ಅವರನ್ನು ಪ್ರಚೋದಿಸುವ ಪ್ರಯತ್ನ ನಡೆದಿದೆ ಎಂದು ಪಲ್ಲವಿ ಹೇಳಿದರು.
ಚಿಕ್ಕಮಗಳೂರು: ಮೊನ್ನೆ ರಾತ್ರಿ ಸಿಟಿ ರವಿ ಅವರ ಬಂಧನವಾದಾಗಿನಿಂದ ವಿಪರೀತ ಅತಂಕದಕಲ್ಲಿದ್ದ ಅವರ ಪತ್ನಿ ಪಲ್ಲವಿ ಈಗ ಗೆಲುವಾಗಿದ್ದಾರೆ ಮತ್ತು ನಮ್ಮ ವರದಿಗಾರನೊಂದಿಗೆ ಖುಷಿಯಿಂದ ಮಾತಾಡಿದ್ದಾರೆ. ರವಿಯವರನ್ನು ಬಂಧಿಸಿದ್ದು ಮತ್ತು ಎಫ್ಐಆರ್ ಆಗಿದ್ದು ಭಯವೇನೂ ಹುಟ್ಟಿಸಿರಲಿಲ್ಲ, ಅವರೊಬ್ಬ ಹೋರಾಟಗಾರ ಮತ್ತು ರಾಷ್ಟ್ರೀಯ ಪಕ್ಷವೊಂದರ ನಿಷ್ಠಾವಂತ ಕಾರ್ಯಕರ್ತ, ಹಾಗಾಗಿ ಅವರ ವಿರುದ್ದ ಪ್ರಕರಣಗಳು ದಾಖಲಾಗುತ್ತಿರುತ್ತವೆ. ಅದರೆ ಬಂಧನದ ನಂತರ ಅವರನ್ನು ರಾತ್ರಿ ಸಮಯದಲ್ಲಿ ಎಲ್ಲೆಲ್ಲಿಗೋ ಕರೆದೊಯ್ದಿದ್ದು, ನಿರ್ಜನ ಪ್ರದೇಶಗಳಲ್ಲಿ ಕಾರನ್ನು ನಿಲ್ಲಿಸಿ ಪೊಲೀಸರು ಯಾರೊಂದಿಗೋ ಮಾತಾಡುತಿದ್ದುದನ್ನು ನೋಡಿದಾಗ ಭಯ ಮತ್ತು ಅತಂಕ ಉಂಟಾಗಿತ್ತು, ಅವರೊಂದಿಗೆ ಗನ್ ಮ್ಯಾನ್ ಕೂಡ ಇರಲಿಲ್ಲ ಮತ್ತು ತಲೆಗೆ ಪೆಟ್ಟಾಗಿ ರಕ್ತ ಸುರಿಯುತ್ತಿದ್ದರಿಂದ ಗಾಬರಿ ಹೆಚ್ಚಾಗಿತ್ತು ಎಂದು ಪಲ್ಲವಿ ರವಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಟಿ ರವಿ ಬಂಧನದ ಬಗ್ಗೆ ಪ್ರಶ್ನೆ ಕೇಳಿದಾಗ ಗೃಹ ಸಚಿವ ಪರಮೇಶ್ವರ್ ಪ್ರಕರಣ ಕೋರ್ಟ್ ಮುಂದಿದೆ ಎಂದರು!