‘ನೀವು ಈ ಆಟಕ್ಕೆ ಫಿಟ್ ಅಲ್ಲ’; ಚೈತ್ರಾಗೆ ನೇರವಾಗಿ ಹೇಳಿದ ಸುದೀಪ್

‘ನೀವು ಈ ಆಟಕ್ಕೆ ಫಿಟ್ ಅಲ್ಲ’; ಚೈತ್ರಾಗೆ ನೇರವಾಗಿ ಹೇಳಿದ ಸುದೀಪ್

ರಾಜೇಶ್ ದುಗ್ಗುಮನೆ
|

Updated on:Dec 21, 2024 | 6:40 PM

ಚೈತ್ರಾ ಕುಂದಾಪುರ ಅವರು ದೊಡ್ಮನೆಯ ಆಟವನ್ನು ಉತ್ತಮವಾಗಿ ಆಡುತ್ತಿದ್ದಾರೆ. ಈ ಕಾರಣದಿಂದಲೇ 12ನೇ ವಾರಕ್ಕೆ ಅವರು ಕಾಲಿಟ್ಟಿದ್ದಾರೆ. ಈಗ ಸುದೀಪ್ ಅವರು ಚೈತ್ರಾ ಅವರನ್ನು ನೇರವಾಗಿ ಬೈದಿದ್ದಾರೆ. ಆ ಸಂದರ್ಭದ ವಿಡಿಯೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಆವಿಡಿಯೋ ಇಲ್ಲಿದೆ ನೋಡಿ.

‘ಬಿಗ್ ಬಾಸ್’ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಈ ಬಾರಿ ಅವರು ಟಾಸ್ಕ್​ನ ಉಸ್ತುವಾರಿ ಸರಿಯಾಗಿ ಮಾಡಿರಲಿಲ್ಲ ಎಂಬುದೇ ಇದಕ್ಕೆ ಕಾರಣ. ಈಗ ಸುದೀಪ್ ಅವರು ಚೈತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಉಳಿದ ಸ್ಪರ್ಧಿಗಳು ನಮ್ಮ ಕುಗ್ಗಿಸುತ್ತಿದ್ದಾರೆ’ ಎಂದು ಚೈತ್ರಾ ಹೇಳಿದ್ದಾರೆ. ಇದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ನೀವು ಅವರ ಹೆಸರು ತೆಗೆದುಕೊಂಡಾಗ ಅವರು ಕುಗ್ಗಲ್ವಾ? ಬಾಣ ಕೊಡೋಕೆ ನೀವು ರೆಡಿ ಇದ್ದೀರಿ, ಆದರೆ, ತಗಳೋಕೆ ರೆಡಿ ಇಲ್ಲ ಎಂದರೆ ನೀವು ಆಟಕ್ಕೆ ಫಿಟ್ ಇಲ್ಲ’  ಎಂದು ಸುದೀಪ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 21, 2024 06:39 PM