ರವಿಯವರು ಕೇವಲ ನನ್ನ ತಾಯಿ ಮಾತ್ರವಲ್ಲ ನಾಡಿನ ಪ್ರತಿಯೊಬ್ಬ ಮಹಿಳೆಯನ್ನು ಅವಮಾನಿಸಿದ್ದಾರೆ: ಮೃಣಾಲ್
ನನ್ನ ತಾಯಿಗೆ ನಾನೊಬ್ಬನೇ ಮಗ, ರವಿಯವರು ಆಡಿದ ಮಾತು ನನಗೆ ಸಹಿಸಲಾಗಲಿಲ್ಲ, ಅದರೆ ಸಾರ್ವಜನಿಕ ಬದುಕಿನಲ್ಲಿರುವುದರಿಂದ ಕಾನೂನು ಕೈಗೆತ್ತಿಕೊಳ್ಳಬಾರದೆಂದು ಸುಮ್ಮನಾದೆ, ರವಿಯವರು ಬಿಜೆಪಿ ನಾಯಕರ ಹೆಚ್ಚುಮಕ್ಕಳ ಬಗ್ಗೆ ಇಂಥ ಪದಬಳಕೆ ಮಾಡುತ್ತಾರೆಯೇ? ಅವರು ಬಳಸಿದ ಪದದಿಂದ ಕ್ಷೇತ್ರದ ಎಲ್ಲ ಜನರ ಮನಸ್ಸಿಗೆ ಬಹಳ ನೋವಾಗಿದೆ ಎಂದು ಮೃಣಾಲ್ ಹೇಳಿದರು.
ಬೆಳಗಾವಿ: ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗ ಮೃಣಾಲ್ ಹೆಬ್ಬಾಳ್ಕರ್ ಸದನದಲ್ಲಿ ಸಿಟಿ ರವಿ ಬಳಸಿದರೆನ್ನಲಾಗಿರುವ ಅಶ್ಲೀಲ ಪದದ ಬಗ್ಗೆ ನೋವು ಮತ್ತು ಬೇಸರ ವ್ಯಕ್ತಡಿಸಿದರು. ರವಿ ಅವರು ಹಿರಿಯ ಬಿಜೆಪಿ ನಾಯಕ, 3-4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಮತ್ತು ಸಚಿವನಾಗಿಯೂ ಕೆಲಸ ಮಾಡಿದ್ದಾರೆ. ಅವರು ಆ ಶಬ್ದ ಬಳಸುವ ಮೂಲಕ ಕೇವಲ ತನ್ನ ತಾಯಿಗೆ ಮಾತ್ರವಲ್ಲ, ಈ ನಾಡಿನ ಪ್ರತಿಯೊಬ್ಬ ಮಹಿಳೆಗೆ ಅವಮಾನ ಮಾಡಿದ್ದಾರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ತಮ್ಮ ತಾಯಿಯನ್ನು ಮನೆಮಗಳಾಗಿ ನೋಡುತ್ತಾರೆ ಎಂದು ಮೃಣಾಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಸ್ಥಳಕ್ಕೆ ಬಂದ ಲಕ್ಷ್ಮಿ ಹೆಬ್ಬಾಳ್ಕರ್ ಪೊಲೀಸರ ಮೇಲೆ ರೇಗಿದ್ದು ಯಾಕೆ?
Latest Videos