‘ಯಾರನ್ನೂ ದೂರಲ್ಲ, ಇಲ್ಲಿ ನನ್ನ ಚಾರಿತ್ರ್ಯ ಹರಣ ಆಗುತ್ತಿದೆ’; ಅಲ್ಲು ಅರ್ಜುನ್ ಬೇಸರ

ಅಲ್ಲು ಅರ್ಜುನ್ ಅವರು ಹೈದರಾಬಾದ್‌ನಲ್ಲಿ ‘ಪುಷ್ಪ 2’ ಸಿನಿಮಾ ನೋಡುವಾಗ ನಡೆದ ಕಾಲ್ತುಳಿತದಲ್ಲಿ ಒಬ್ಬರ ಸಾವಿನ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ತಮ್ಮ ಬಂಧನದ ಹಿಂದೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಪ್ರಭಾವ ಇದೆ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಈ ಘಟನೆಯಲ್ಲಿ ತಮ್ಮ ಪಾತ್ರವನ್ನು ಸ್ಪಷ್ಟಪಡಿಸಿ, ಇದು ಅಪಘಾತ ಎಂದು ಹೇಳಿದ್ದಾರೆ.

‘ಯಾರನ್ನೂ ದೂರಲ್ಲ, ಇಲ್ಲಿ ನನ್ನ ಚಾರಿತ್ರ್ಯ ಹರಣ ಆಗುತ್ತಿದೆ’; ಅಲ್ಲು ಅರ್ಜುನ್ ಬೇಸರ
ರೇವಂತ್-ಅಲ್ಲು ಅರ್ಜುನ್
Follow us
ರಾಜೇಶ್ ದುಗ್ಗುಮನೆ
|

Updated on:Dec 21, 2024 | 10:03 PM

ಅಲ್ಲು ಅರ್ಜುನ್ ‘ಪುಷ್ಪ 2’ ಸಿನಿಮಾ ನೋಡಲು ಹೈದರಾಬಾದ್​ನ ಸಂಧ್ಯಾ ಥಿಯೇಟರ್ ತೆರಳಿದ್ದರು. ಈ ವೇಳೆ ನಡೆದ ಕಾಲ್ತುಳಿತ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಅಲ್ಲು ಅರ್ಜುನ್ ಅವರು ಈ ಪ್ರಕರಣದಲ್ಲಿ ಅರೆಸ್ಟ್ ಕೂಡ ಆಗಿದ್ದರು. ಈ ಬಂಧನದ ಹಿಂದೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಭಾವ ಇದೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಅಲ್ಲು ಅರ್ಜುನ್ ಅವರು ಒಪ್ಪಿಲ್ಲ. ಅವರು ಯಾರ ಮೇಲೂ ಆರೋಪ ಹೊರಿಸಲು ಹೋಗಿಲ್ಲ.

‘ಇಲ್ಲಿ ಯಾರದ್ದೂ ತಪ್ಪಿಲ್ಲ. ಇದೊಂದು ಅಪಘಾತ. ಎಲ್ಲರೂ ಒಳ್ಳೆಯ ವಿಚಾರಕ್ಕೆ ಸೇರಿದ್ದರು. ಇದು ಅಪಘಾತ ಅಷ್ಟೇ. ಇದು ಯಾರ ನಿಯಂತ್ರಣದಲ್ಲೂ ಇರಲಿಲ್ಲ. ನಾನು ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ರೇವತಿ ಅವರ ಮಗ ಬೇಗ ಚೇತರಿಕೆ ಕಾಣಲಿ ಎಂದು ಕೋರಿಕೊಳ್ಳುತ್ತೇನೆ. ನಾನು ಅವರ ಆರೋಗ್ಯದ ಬಗ್ಗೆ ಅಪ್​ಡೇಟ್ ಪಡೆಯುತ್ತಿದ್ದೇನೆ’ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

‘ಜನರನ್ನು ಮನರಂಜಿಸಬೇಕು ಎಂಬ ಉದ್ದೇಶ ನನ್ನದು. ಥಿಯೇಟರ್ ಎಂಬುದು ದೇವಸ್ಥಾನ ಇದ್ದಹಾಗೆ. ದೇವಸ್ಥಾನದಲ್ಲಿ ಏನಾದರೂ ಆದರೆ, ನನಗಿಂತ ಹೆಚ್ಚು ಇನ್ಯಾರಿಗೆ ಬೇಸರ ಆಗಲು ಸಾಧ್ಯ? 2 ದಶಕಗಳಲ್ಲಿ ಗಳಿಸಿದ ಗೌರವವನ್ನು ಒಂದು ದಿನ ನಾಶ ಆಗುತ್ತದೆ ಎಂದರೆ ಅದು ಸಾಕಷ್ಟು ಬೇಸರ ಉಂಟು ಮಾಡುತ್ತದೆ’ ಎಂದಿದ್ದಾರೆ ಅಲ್ಲು ಅರ್ಜುನ್.

‘ಹಲವು ವದಂತಿಗಳು ಹಬ್ಬುತ್ತಿವೆ. ನಾನು ಯಾವ ರಾಜಕಾರಣಿಯನ್ನೂ, ಸರ್ಕಾರವನ್ನೂ ದೂರುವುದಿಲ್ಲ. ಸಾಕಷ್ಟು ವದಂತಿ ಹಬ್ಬಿಸಲಾಗುತ್ತಿದೆ. ನನ್ನ ಚಾರಿತ್ರ್ಯ ಹರಣ ಆಗುತ್ತಿದೆ. ನಾನು ಎಲ್ಲಾ ಸೆಲಬ್ರೇಷನ್​ನ ರದ್ದು ಮಾಡಿದ್ದೇನೆ. ಮೂರು ವರ್ಷ ಕಷ್ಟಪಟ್ಟು ಮಾಡಿದ ಸಿನಿಮಾ ಹೇಗಿದೆ ಎಂಬುದನ್ನು ಕೂಡ ನಾನು ನೋಡುತ್ತಿಲ್ಲ. ಮನೆಯಲ್ಲಿ ಒಬ್ಬನೇ ಕೂರುತ್ತಿದ್ದೇನೆ. ನಾನು ಇದಕ್ಕೆ ನೇರ ಕಾರಣ ಅಲ್ಲ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ’ ಎಂದು ಭಾವುಕರಾದರು ಅಲ್ಲು ಅರ್ಜುನ್.

‘ತೆಲುಗು ಚಿತ್ರರಂಗವನ್ನು ಮೇಲಕ್ಕೆ ತೆಗೆದುಕೊಂಡು ಹೋಗಬೇಕು ಎಂದುಕೊಂಡವನು ನಾನು. ಮೂರು ವರ್ಷ ಮಾಡಿದ ಕೆಲಸ ಹೇಗಿದೆ ನೋಡಲು ಹೋಗಿದ್ದವನು ನಾನು. ನಾನು ಒಪ್ಪಿಗೆ ಇಲ್ಲದೆ ಹೋಗಿದ್ದೇನೆ ಎಂಬುದೆಲ್ಲ ಸುಳ್ಳು. ಅಲ್ಲಿ ಪೋಲಿಸರು ಇದ್ದರು. ಒಪ್ಪಿಗೆ ಇಲ್ಲ ಎಂದಿದ್ದರೆ ಅವರೇ ಹೇಳುತ್ತಿದ್ದರು. ಹೀಗಾಗಿ, ನಾನು ಒಪ್ಪಿಗೆ ಪಡೆದಿದ್ದೇನೆ ಎಂಬುದು ಸ್ಪಷ್ಟ. ಅಲ್ಲಿ ರೋಡ್​ಶೋ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಅದು ಸುಳ್ಳು. ಕೈ ಮಾಡಿದರೆ ಫ್ಯಾನ್ಸ್ ಖುಷಿಪಡುತ್ತಾರೆ. ಹಾಗಾಗಿ ನಾನು ಕೈ ಬೀಸಿದೆ. ಎಲ್ಲ ಹೀರೋಗಳು ಅದನ್ನೇ ಮಾಡುತ್ತಾರೆ’ ಎಂದರು ಅಲ್ಲು ಅರ್ಜುನ್.

ಇದನ್ನೂ ಓದಿ: ‘ಅಲ್ಲು ಅರ್ಜುನ್ ಯುದ್ಧ ಗೆದ್ದಿಲ್ಲ, ಸಿನಿಮಾ ಮಾಡಿ ಹಣ ಮಾಡಿಕೊಂಡಿದ್ದಾರೆ ಅಷ್ಟೇ’; ಸಿಎಂ ರೇವಂತ್ ರೆಡ್ಡಿ

‘ಹೊರಗೆ ಸಾಕಷ್ಟು ಜನ ಸೇರುತ್ತಿದ್ದಾರೆ ದಯವಿಟ್ಟು ಹೊರಡಿ ಎಂದು ಪೊಲೀಸರು ಹೇಳಿದರು. ನಾನು ಆ ಕ್ಷಣವೇ ಮನೆಗೆ ನಡೆದೆ. ಮರುದಿನವೇ ಸಾವಿನ ವಿಚಾರ ತಿಳಿಯಿತು. ನನಗೆ ಶಾಕ್ ಆಯಿತು. ನನಗೆ ಆ ವಿಚಾರ ಗೊತ್ತಾಗಿದ್ದರೆ ನಾನು ಸಿನಿಮಾ ನೋಡ್ತಾನೇ ಇರಲಿಲ್ಲ. ನಾನು ನನ್ನ ಆಪ್ತರಿಗೆ ಕರೆ ಮಾಡಿ ಏನೆಂದು ವಿಚಾರಿಸಿಕೊಳ್ಳಿ ಎಂದು ಹೇಳಿದೆ. ಅದೇ ದಿನ ಆಸ್ಪತ್ರೆಗೆ ತೆರಳಲು ನಿರ್ಧರಿಸಿದ್ದೆ. ಆದರೆ, ಬೇಡ ಎಂದರು’ ಎಂದು ನಡೆದ ಘಟನೆ ವಿವರಿಸಿದ್ದಾರೆ ಅಲ್ಲು ಅರ್ಜುನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:40 pm, Sat, 21 December 24

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ