ಚೈತ್ರಾಗೆ ಕೈಕೊಟ್ಟ ಗ್ರಹಚಾರ; ಕಾಲ ಮೇಲೆ ಬಿತ್ತು ಸುಡುವ ಗಂಜಿ

ಬಿಗ್ ಬಾಸ್ ಕನ್ನಡದ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಮೂರು ಬಾರಿ ಜೈಲು ಸೇರಿದ್ದಾರೆ. ಇತ್ತೀಚೆಗೆ ರಾಗಿ ಗಂಜಿ ಅವರ ಕಾಲಿಗೆ ಬಿದ್ದು ನೋವುಂಟು ಮಾಡಿದೆ. ಅವರು ತಮ್ಮ ಕೆಟ್ಟ ಅದೃಷ್ಟಕ್ಕೆ ಗ್ರಹಚಾರವನ್ನು ಕಾರಣವೆಂದು ಹೇಳಿದ್ದಾರೆ. ಮನೆಯಲ್ಲಿ ಅವರ ಆಟದ ಶೈಲಿ ಮತ್ತು ತಪ್ಪುಗಳಿಂದಾಗಿ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ.

ಚೈತ್ರಾಗೆ ಕೈಕೊಟ್ಟ ಗ್ರಹಚಾರ; ಕಾಲ ಮೇಲೆ ಬಿತ್ತು ಸುಡುವ ಗಂಜಿ
ಚೈತ್ರಾ
Follow us
ರಾಜೇಶ್ ದುಗ್ಗುಮನೆ
|

Updated on: Dec 21, 2024 | 9:33 PM

ಬಿಗ್ ಬಾಸ್ ಮನೆಯಲ್ಲಿರುವ ಚೈತ್ರಾ ಕುಂದಾಪುರ ಅವರು ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಮನೆಯ ಹೊರಗೆ ಚರ್ಚೆಯಲ್ಲಿ ಇದ್ದ ಅವರು, ಮನೆ ಒಳಗೂ ಚರ್ಚೆಯ ಕೇಂದ್ರ ಬಿಂದು ಆಗಿದ್ದಾರೆ. ಈಗ ಚೈತ್ರಾ ಕುಂದಾಪುರ ಅವರಿಗೆ ಗ್ರಹಚಾರ ಕೈಕೊಟ್ಟ ಭಾವನೆ ಕಾಡುತ್ತಿದೆ. ಅವರು ಕಳಪೆ ಪಡೆದು ಸತತ ಎರಡನೇ ಬಾರಿ ಜೈಲು ಸೇರಿದ್ದಾರೆ. ಈ ಸೀಸನ್​​ನಲ್ಲಿ ಜೈಲು ಸೇರಿದ್ದು ಮೂರನೇ ಬಾರಿ. ಈ ಬಾರಿ ಅವರ ಕಾಲಿಗೆ ಬಿಸಿ ಗಂಜಿ ಬಿದ್ದಿದೆ. ಇದರಿಂದ ಅವರು ಸಾಕಷ್ಟು ನೊಂದುಕೊಂಡಿದ್ದಾರೆ. ‘ಗ್ರಹಚಾರ ಕೆಟ್ಟಾಗ ಹೀಗೆ ಆಗೋದು’ ಎಂದು ಅವರು ಹೇಳಿದ್ದಾರೆ.

ಚೈತ್ರಾ ಕುಂದಾಪುರ ಅವರು ಈ ಬಾರಿಯ ಗೇಮ್​ನಲ್ಲಿ ಉಸ್ತುವಾರಿ ಮಾಡಿದ್ದರು. ಈ ವೇಳೆ ಅವರು ಸಾಕಷ್ಟು ತಪ್ಪು ಮಾಡಿದ್ದರು. ಅವರು ಸಾಕಷ್ಟು ಮೋಸ ಮಾಡಿದ ಆರೋಪ ಕೇಳಿ ಬಂತು. ಈ ಕಾರಣಕ್ಕೆ ಅವರಿಗೆ ಕಳಪೆ ಪಟ್ಟ ನೀಡಲಾಯಿತು. ಈ ಕಳಪೆ ಪಟ್ಟ ಪಡೆದ ಅವರು ಜೈಲಿಗೆ ಹೋಗಿದ್ದಾರೆ. ಜೈಲು ಸೇರಿದ ಸ್ಪರ್ಧಿಗಳಿಗೆ ಗಂಜಿ ನೀಡಲಾಗುತ್ತದೆ. ಅದೇ ರೀತಿ ಚೈತ್ರಾ ಕುಂದಾಪುರ ಅವರಿಗೆ ರಾಗಿ ಗಂಜಿ ನೀಡಲಾಗಿತ್ತು. ಆದರೆ ಈ ವೇಳೆ ಎಡವಟ್ಟು ಸಂಭವಿಸಿದೆ.

ಚೈತ್ರಾ ಕುಂದಾಪುರ ಅವರು ಗಂಜಿ ಹಿಡಿದು ಕುಳಿತಿದ್ದರು. ಈ ವೇಳೆ ಗಂಜಿ ಕಾಲ ಮೇಲೆ ಚೆಲ್ಲಿದೆ. ಈ ವೇಳೆ ನೋವು ತಡೆಯಲಾರದೇ ಚೈತ್ರಾ ಕುಂದಾಪುರ ಅವರು ಒದ್ದಾಡಿದ್ದಾರೆ. ‘ಗ್ರಹಚಾರ ಕೆಟ್ಟಾಗ ಹೀಗೆ ಆಗುತ್ತದೆ’ ಎಂದು ಚೈತ್ರಾ ಅವರು ಹೇಳಿಕೊಂಡಿದ್ದಾರೆ. ಅವರು ಓಡೋಡಿ ಹೋಗಿ ಕಾಲಿಗೆ ತಣ್ಣೀರು ಹಾಕಿಕೊಂಡರು. ಈ ಘಟನೆ ಅವರಿಗೆ ಸಾಕಷ್ಟು ನೋವು ತಂದಿದೆ.

ಇದನ್ನೂ ಓದಿ: ತಳ್ಳಿ ಆ ಬಳಿಕ ಕ್ಷಮೆ ಕೇಳಿದ ರಜತ್; ತೂಕದ ಮಾತನಾಡಿದ ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರಿಗೆ ಪದೇ ಪದೇ ಹಿನ್ನಡೆ ಉಂಟಾಗುತ್ತಿದೆ. ಅವರು ಈ ಮೊದಲು ಸುದೀಪ್ ಅವರಿಂದ ಬೈಸಿಕೊಂಡಾಗ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದರು. ಆ ಬಳಿಕ ಅವರು ನಿರ್ಧಾರ ಬದಲಿಸಿಕೊಂಡಿದ್ದರು. ಅವರು ಮೂರು ಬಾರಿ ಕಳಪೆ ಪಟ್ಟ ಪಡೆದಿದ್ದಾರೆ. ಈ ವಾರ ಎಲಿಮಿನೇಷನ್ ಇಲ್ಲದ ಕಾರಣ ಯಾರೂ ಔಟ್ ಆಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್