AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಳ್ಳಿ ಆ ಬಳಿಕ ಕ್ಷಮೆ ಕೇಳಿದ ರಜತ್; ತೂಕದ ಮಾತನಾಡಿದ ಚೈತ್ರಾ ಕುಂದಾಪುರ

ಟಾಸ್ಕ್ ನಡೆಯುವಾಗ ಚೈತ್ರಾ ಕುಂದಾಪುರ ಅವರು ಉಸ್ತುವಾರಿ ವಹಿಸಿಕೊಂಡಿದ್ದರು. ಅವರು ಟಾಸ್ಕ್ ಮಾಡುವಾಗ ಉಸ್ತುವಾರಿ ಆಗಿದ್ದವರು ಪದೇ ಪದೇ ಪೌಸ್ ಕೊಟ್ಟಿದ್ದರು. ಮಾಡದ ತಪ್ಪಿಗೆ ತಮಗೆ ಶಿಕ್ಷೆ ನೀಡಲಾಗಿದೆ ಎಂದು ಚೈತ್ರಾ ಭಾವಿಸಿದ್ದರು. ಈ ಕಾರಣಕ್ಕೆ ಸರಿಯಾದ ಸಮಯಕ್ಕೆ ಕಾದಿದ್ದರು. ಟಾಸ್ಕ್ ನಡೆಯುವಾಗ ಅವರು ಹಗೆ ತೀರಿಸಿಕೊಂಡಿದ್ದಾರೆ.

ತಳ್ಳಿ ಆ ಬಳಿಕ ಕ್ಷಮೆ ಕೇಳಿದ ರಜತ್; ತೂಕದ ಮಾತನಾಡಿದ ಚೈತ್ರಾ ಕುಂದಾಪುರ
ರಜತ್-ಚೈತ್ರಾ
Follow us
ರಾಜೇಶ್ ದುಗ್ಗುಮನೆ
|

Updated on: Dec 18, 2024 | 8:59 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಹಾಗೂ ಚೈತ್ರಾ ಕುಂದಾಪುರ ಮಧ್ಯೆ ಕಿರಿಕ್ ಆಗಿದೆ. ಟಾಸ್ಕ್ ನಡೆಯುವಾಗ ಚೈತ್ರಾ ಅವರನ್ನು ತಳ್ಳಿ ರಜತ್ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದಾರೆ. ಇವರ ಆಟ ಬೇರೆಯದೇ ಸ್ವರೂಪ ಪಡೆದುಕೊಂಡಿತ್ತು. ಕೊನೆಯಲ್ಲಿ ರಜತ್ ಅವರು ಕ್ಷಮೆ ಕೇಳಿದ್ದಾರೆ. ಇದಕ್ಕೆ ಚೈತ್ರಾ ಅವರು ಆಡಿದ ತೂಕದ ಮಾತು ಅನೇಕರಿಗೆ ಇಷ್ಟ ಆಗಿದೆ.

ಟಾಸ್ಕ್ ನಡೆಯುವಾಗ ಚೈತ್ರಾ ಕುಂದಾಪುರ ಅವರು ಉಸ್ತುವಾರಿ ವಹಿಸಿಕೊಂಡಿದ್ದರು. ಅವರು ಟಾಸ್ಕ್ ಮಾಡುವಾಗ ಉಸ್ತುವಾರಿ ಆಗಿದ್ದವರು ಪದೇ ಪದೇ ಪೌಸ್ ಕೊಟ್ಟಿದ್ದರು. ಮಾಡದ ತಪ್ಪಿಗೆ ತಮಗೆ ಶಿಕ್ಷೆ ನೀಡಲಾಗಿದೆ ಎಂದು ಚೈತ್ರಾ ಭಾವಿಸಿದ್ದರು. ಈ ಕಾರಣಕ್ಕೆ ಸರಿಯಾದ ಸಮಯಕ್ಕೆ ಕಾದಿದ್ದರು. ಟಾಸ್ಕ್ ನಡೆಯುವಾಗ ಅವರು ಹಗೆ ತೀರಿಸಿಕೊಂಡಿದ್ದಾರೆ.

ರಜತ್ ಅವರು ಹದ್ದುಮೀರಿ ಮಾತನಾಡುತ್ತಿದ್ದರು. ಇದಕ್ಕೆ ಚೈತ್ರಾ ಅವರು ಪೌಸ್ ಕೊಟ್ಟಿದ್ದಾರೆ. ಇದರಿಂದ ರಜತ್ ಹಾಗೂ ಚೈತ್ರಾ ಮಧ್ಯೆ ಕಿರಿಕ್ ಆಗಿದೆ. ಅದು ತಳ್ಳಾಟದ ಹಂತದವರೆಗೆ ಹೋಗಿದೆ. ಚೈತ್ರಾ ಅವರನ್ನು ರಜತ್ ತಳ್ಳಿದ ವಿಚಾರಕ್ಕೆ ತಂಡದಲ್ಲೇ ಅಸಮಾಧಾನ ಮೂಡಿತ್ತು. ಐಶ್ವರ್ಯಾ ಅವರು ರಜತ್ ನಡೆದುಕೊಂಡ ರೀತಿಯನ್ನು ವಿರೋಧಿಸಿದರು.

ಆ ಬಳಿಕ ಮೋಕ್ಷಿತಾ ಅವರು ರಜತ್​ಗೆ ಕಿವಿಮಾತು ಹೇಳಿದ್ದಾರೆ. ‘ನೀವು ಚೈತ್ರಾನ ತಳ್ಳಿದ್ದು ತಪ್ಪು. ನೀವು ಕೋಪ ಕಡಿಮೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಷ್ಟ ಇದೆ. ಚೈತ್ರಾ ಬಳಿ ಕ್ಷಮೆ ಕೇಳಿ. ಆಗ ನೀವು ದೊಡ್ಡವರಾಗುತ್ತೀರಾ’ ಎಂದು ಮೋಕ್ಷಿತಾ ಅವರು ರಜತ್​ಗೆ ಹೇಳಿದರು. ಈ ಮಾತಿಗೆ ರಜತ್ ಗೌರವ ಸೂಚಿಸಿದ್ದಾರೆ.

ಇದನ್ನೂ ಓದಿ: ‘ಅವರ ತಂಗಿಯರು ನೋಡ್ತಾ ಇರಲ್ವಾ’; ಗೌತಮಿ ಪ್ರಶ್ನೆಗೆ ಮಂಕಾದ ಹನುಮಂತ; ಮಾಡಿದ ತಪ್ಪೇನು?

ನೇರವಾಗಿ ಚೈತ್ರಾ ಬಳಿ ತೆರಳಿದ ರಜತ್ ಅವರು, ‘ತಪ್ಪಾಯಿತು. ನೀನು ನನ್ನ ತಂಗಿ ಸಮಾನ’ ಎಂದು ರಜತ್ ಹೇಳಿದ್ದಾರೆ. ‘ಗೇಮ್ ಅಗ್ರೆಶನ್​ಅಲ್ಲಿ ಎಲ್ಲರೂ ಮಾಡ್ತಾರೆ. ನನಗೆ ಕಂಫರ್ಟ್ ಇಲ್ಲ ಎಂದರೆ ಅವರ ಬಳಿ ಮಾತನಾಡಲ್ಲ. ನಾನು ನಿಮ್ಮ ಬಳಿ ಹೇಗೆ ನಡೆದುಕೊಳ್ಳುತ್ತಿದ್ದೆ ಎಂಬುದು ನಿಮಗೆ ಗೊತ್ತು. ನೀವು ತಳ್ಳುವಾಗ ಯಾರಿದ್ರೂ ಅದನ್ನು ಮಾಡಬೇಡಿ. ಹುಡುಗಿ ಆಗಿ ತಳ್ಳಿದೆ ಎಂದು ನೀವು ಕ್ಷಮೆ ಕೇಳಬೇಕು ಎಂಬುದಿಲ್ಲ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ