‘ಅವರ ತಂಗಿಯರು ನೋಡ್ತಾ ಇರಲ್ವಾ’; ಗೌತಮಿ ಪ್ರಶ್ನೆಗೆ ಮಂಕಾದ ಹನುಮಂತ; ಮಾಡಿದ ತಪ್ಪೇನು?

‘ಬಿಗ್ ಬಾಸ್ ಕನ್ನಡ ಸೀಸನ್ 11’ ರಲ್ಲಿ ಹನುಮಂತ ಅವರ ನಡವಳಿಕೆ ವಿವಾದಕ್ಕೆ ಕಾರಣವಾಗಿದೆ. ರಜತ್ ಮತ್ತು ಚೈತ್ರಾ ನಡುವಿನ ಜಗಳದ ಸಮಯದಲ್ಲಿ ಹನುಮಂತ ನಗುತ್ತಿದ್ದನ್ನು ಗಮನಿಸಿ ಗೌತಮಿ ಮತ್ತು ಮಂಜು ಅವರನ್ನು ಪ್ರಶ್ನಿಸಿದ್ದಾರೆ. ಹನುಮಂತ ತಮ್ಮ ನಡವಳಿಕೆಗೆ ಕ್ಷಮೆ ಕೇಳಿದ್ದಾರೆ.

‘ಅವರ ತಂಗಿಯರು ನೋಡ್ತಾ ಇರಲ್ವಾ’; ಗೌತಮಿ ಪ್ರಶ್ನೆಗೆ ಮಂಕಾದ ಹನುಮಂತ; ಮಾಡಿದ ತಪ್ಪೇನು?
ಹನುಮಂತ್-ಗೌತಮಿ
Follow us
ರಾಜೇಶ್ ದುಗ್ಗುಮನೆ
|

Updated on: Dec 18, 2024 | 7:28 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರು ಆಟದಲ್ಲಿ ಸಾಕಷ್ಟು ಗಮನ ಸೆಳೆದಿದ್ದರು. ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಮನೆಯಲ್ಲಿ ಪೆದ್ದನಂತೆ ಕಂಡರೂ ಅವರು ದೊಡ್ಮನೆಯಲ್ಲಿ ಇರುವ ಅತೀ ಬುದ್ಧಿವಂತರಲ್ಲಿ ಒಬ್ಬರು. ಇದನ್ನು ಸುದೀಪ್ ಅವರು ಒಪ್ಪಿದ್ದಾರೆ. ಈಗ ದೊಡ್ಮನೆಯಲ್ಲಿ ಅವರಿಂದ ಒಂದು ತಪ್ಪು ನಡೆದುಹೋಗಿದೆ. ಇದಕ್ಕೆ ಗೌತಮಿ ಜಾಧವ್ ಅವರು ಹನುಮಂತ ಅವರನ್ನು ಪ್ರಶ್ನೆ ಮಾಡಿದ್ದಾರೆ. ಆ ಬಳಿಕ ಅವರು ಕ್ಷಮೆ ಕೇಳಿದ್ದಾರೆ.

ಬಿಗ್ ಬಾಸ್​ನಲ್ಲಿ ಈ ವಾರ ರಜತ್ ಅವರು ದುರಹಂಕಾರ ತೋರಿಸುತ್ತಿದ್ದಾರೆ. ಇದರ ಪರಿಣಾಮಗಳನ್ನು ಅವರು ಎದುರಿಸುತ್ತಿದ್ದಾರೆ. ಮೂರಕ್ಕೆ ಮೂರು ಟಾಸ್ಕ್​ಗಳನ್ನು ಅವರು ಸೋತಿದ್ದಾರೆ. ಇದು ಅವರ ತಂಡಕ್ಕೆ ಸಾಕಷ್ಟು ಬೇಸರ ಮೂಡಿಸಿದೆ. ಇದೇ ದುರಹಂಕಾರದಿಂದ ಅವರು ಚೈತ್ರಾ ಅವರನ್ನು ತಳ್ಳಿದ್ದಾರೆ. ಈ ಘಟನೆ ನಡೆಯುವಾಗ ಅಲ್ಲಿಯೇ ಇದ್ದ ಹನುಮಂತ ಅವರು ನಗುತ್ತಿದ್ದರು.

ಚೈತ್ರಾ ಅವರು ಉಸ್ತುವಾರಿ ವಹಿಸಿಕೊಂಡಿದ್ದರು. ಆಗ ರಜತ್ ಹಾಗೂ ಚೈತ್ರಾ ವಿರುದ್ಧ ಕಿರಿಕ್ ಆಗಿದೆ. ಈ ಘಟನೆ ನಡೆಯುವಾಗ ಹನುಮಂತ ಅದನ್ನು ತಡೆಯುವ ಪ್ರಯತ್ನ ಮಾಡಬಹುದಿತ್ತು. ಆದರೆ, ಅದನ್ನೂ ಮಾಡಿಲ್ಲ. ‘ಧನರಾಜ್ ಬಂದಿದ್ದಕ್ಕೆ ಹೀಗಾಗಿದ್ದೀಯಾ. ನಾನು ಬಂದ್ರೆ ಪ್ರಾಣಪಕ್ಷಿ ಹೋಗಿ ಬಿಡುತ್ತಿತ್ತು’ ಎಂದು ರಜತ್ ಅವರು ಮಂಜುಗೆ ಹೇಳಿದರು.  ಇದನ್ನು ನೋಡಿ ಹನುಮಂತ ನಗುತ್ತಿದ್ದರು. ಇದನ್ನು ಗೌತಮಿ ಗಮನಿಸಿದ್ದಾರೆ ಮತ್ತು ಈ ಬಗ್ಗೆ ಹನುಮಂತ ಬಳಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹನುಮಂತ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು 

‘ಏನಕ್ಕೆ ನಗುತ್ತಿದ್ದಿರಿ ಹನುಮಂತ? ಪ್ರಾಣಪಕ್ಷಿ ಹೋಗಿಬಿಡುತ್ತೆ ಎಂದಲ್ಲ ಹೇಳಿದಾಗ ನೀವು ನಕ್ಕಿದ್ದು ಎಷ್ಟು ಸರಿ’ ಎಂದು ಮಂಜು ಮೊದಲು ಪ್ರಶ್ನೆ ಮಾಡಿದರು. ‘ಅವರ (ಮಂಜು) ಅಪ್ಪ ಅಮ್ಮ ನೋಡ್ತಾ ಇರಲ್ಲವಾ? ಅವರ ತಂಗಿಯರು ನೋಡ್ತಾ ಇಲ್ಲವಾ’ ಎಂದು ಗೌತಮಿ ಪ್ರಶ್ನೆ ಮಾಡಿದ್ದಾರೆ. ‘ನಾನು ನಕ್ಕಿದ್ದು ತಪ್ಪಾಯಿತು’ ಎಂದು ಹನುಮಂತ ಅವರು ಗೌತಮಿ ಹಾಗೂ ಮಂಜು ಬಳಿ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Horoscope: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ
Daily Horoscope: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ
ಶಿಮ್ಲಾದಲ್ಲಿರುವ ವಿಶ್ವದ ಎತ್ತರದ ಹನುಮಾನ್ ಪ್ರತಿಮೆಗೆ ಹಿಮದ ಸ್ನಾನ!
ಶಿಮ್ಲಾದಲ್ಲಿರುವ ವಿಶ್ವದ ಎತ್ತರದ ಹನುಮಾನ್ ಪ್ರತಿಮೆಗೆ ಹಿಮದ ಸ್ನಾನ!
ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಮುರಳಿ
ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಮುರಳಿ
ನಡುರಸ್ತೆಯಲ್ಲಿ ಯುವತಿಯ ಕೂದಲು ಹಿಡಿದೆಳೆದ ಪುರುಷರು; ವಿಡಿಯೋ ಇಲ್ಲಿದೆ
ನಡುರಸ್ತೆಯಲ್ಲಿ ಯುವತಿಯ ಕೂದಲು ಹಿಡಿದೆಳೆದ ಪುರುಷರು; ವಿಡಿಯೋ ಇಲ್ಲಿದೆ
ಜಾರಕಿಹೊಳಿ ಮತ್ತು ಬಸನಗೌಡ ಯತ್ನಾಳ್ ಹೇಳಿಕೆಗಳಲ್ಲಿ ವ್ಯತ್ಯಾಸ!
ಜಾರಕಿಹೊಳಿ ಮತ್ತು ಬಸನಗೌಡ ಯತ್ನಾಳ್ ಹೇಳಿಕೆಗಳಲ್ಲಿ ವ್ಯತ್ಯಾಸ!
ವಿಜಯೇಂದ್ರರನ್ನು ಟೀಕಿಸುವುದು ಬಿಡದ ಯತ್ನಾಳ್, ಪುನಃ ಟೀಕಾಪ್ರಹಾರ!
ವಿಜಯೇಂದ್ರರನ್ನು ಟೀಕಿಸುವುದು ಬಿಡದ ಯತ್ನಾಳ್, ಪುನಃ ಟೀಕಾಪ್ರಹಾರ!
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು
ಜಮೀರ್ ಭೇಟಿಯಾದ ಯತ್ನಾಳ್: ಭೇಟಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಶಾಸಕ
ಜಮೀರ್ ಭೇಟಿಯಾದ ಯತ್ನಾಳ್: ಭೇಟಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಶಾಸಕ
ಪವಿತ್ರಾ ಬದುಕಲ್ಲಿ ನಾನಿಲ್ಲ, ನನ್ನ ಬದುಕಲ್ಲಿ ಅವರಿದ್ದಾರೆ: ಸಂಜಯ ಸಿಂಗ್
ಪವಿತ್ರಾ ಬದುಕಲ್ಲಿ ನಾನಿಲ್ಲ, ನನ್ನ ಬದುಕಲ್ಲಿ ಅವರಿದ್ದಾರೆ: ಸಂಜಯ ಸಿಂಗ್
ಕಾಲು ಎಳೆದ ರಜತ್​ಗೆ ಹೊಡೆದೇ ಬಿಟ್ಟ ಚೈತ್ರಾ ಕುಂದಾಪುರ
ಕಾಲು ಎಳೆದ ರಜತ್​ಗೆ ಹೊಡೆದೇ ಬಿಟ್ಟ ಚೈತ್ರಾ ಕುಂದಾಪುರ