ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು

ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು

ಮದನ್​ ಕುಮಾರ್​
|

Updated on: Dec 17, 2024 | 5:07 PM

ರಜತ್​ ವಿರುದ್ಧ ಉಗ್ರಂ ಮಂಜು ಕೆಂಡಾಮಂಡಲ ಆಗಿದ್ದಾರೆ. ಪ್ರತಿ ಟಾಸ್ಕ್​ ಆಡುವಾಗಲೂ ರಜತ್ ಕಿರಿಕ್ ಮಾಡುತ್ತಾರೆ. ಅಲ್ಲದೇ ಗೌತಮಿ ಜಾದವ್​ ಜೊತೆ ಇತ್ತೀಚೆಗಿನ ಸಂಚಿಕೆಯಲ್ಲಿ ರಜತ್ ಅವರು ಹದ್ದು ಮೀರಿ ಮಾತನಾಡಿದ್ದರು. ಈಗ ರಜತ್ ಮತ್ತು ಉಗ್ರಂ ಮಂಜು ಅವರು ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದಾರೆ. ಡಿ.17ರ ಸಂಚಿಕೆಯ ಪ್ರೋಮೋ ಇಲ್ಲಿದೆ.

ಬಿಗ್ ಬಾಸ್ ಮನೆಯಲ್ಲಿ ರಜತ್ ಅವರಿಂದಾಗಿ ಜಗಳಗಳು ಜಾಸ್ತಿ ಆಗುತ್ತಿವೆ. ಉಗ್ರಂ ಮಂಜು ಮತ್ತು ರಜತ್ ಅವರು ಹೊಡೆದಾಡಿಕೊಳ್ಳಲು ಮುಂದಾಗಿದ್ದಾರೆ. ಡಿಸೆಂಬರ್​ 17ರ ಎಪಿಸೋಡ್​ನ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ವಾರ ರಜತ್ ಅವರನ್ನು ನಾಮಿನೇಟ್ ಮಾಡಲಾಗಿದೆ. ಆದರೆ ಅದಕ್ಕೆ ಅವರು ಕುಗ್ಗಿಲ್ಲ. ಆರ್ಭಟ ಇನ್ನಷ್ಟು ಜಾಸ್ತಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.