ಗೌತಮಿ ಅಪ್ಪ-ಅಮ್ಮನ ಬಗ್ಗೆ ಮಾತನಾಡಿ ನಾಲಿಗೆ ಹರಿಬಿಟ್ಟ ರಜತ್; ಅತಿಯಾಯ್ತು ಮಾತು

ರಜತ್ ಅವರ ವರ್ತನೆಗೆ ಕಳೆದ ವಾರ ಕಿಚ್ಚ ಸುದೀಪ್ ಶಿಕ್ಷೆ ನೀಡಿದ್ದರು. ಹಾಗಿದ್ದರೂ ಕೂಡ ರಜತ್ ಬದಲಾಗಿಲ್ಲ. ಈ ವಾರ ಅವರು ಗೌತಮಿ ಜಾದವ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದರಿಂದ ಗೌತಮಿ ಅವರು ಕೋಪಗೊಂಡಿದ್ದಾರೆ. ಪಾಸಿಟಿವಿ ಮಾಯವಾಗುವ ರೀತಿಯಲ್ಲಿ ಜಗಳ ಆಡಿದ್ದಾರೆ. ಗೌತಮಿಗೆ ತಿರುಗೇಟು ನೀಡಲೇಬೇಕು ಎಂದು ರಜತ್ ಹಠ ಹಿಡಿದು ಕುಳಿತಿದ್ದಾರೆ.

ಗೌತಮಿ ಅಪ್ಪ-ಅಮ್ಮನ ಬಗ್ಗೆ ಮಾತನಾಡಿ ನಾಲಿಗೆ ಹರಿಬಿಟ್ಟ ರಜತ್; ಅತಿಯಾಯ್ತು ಮಾತು
ರಜತ್, ಗೌತಮಿ ಜಾದವ್
Follow us
ಮದನ್​ ಕುಮಾರ್​
|

Updated on: Dec 16, 2024 | 10:52 PM

ವೈಲ್ಡ್ ಕಾರ್ಡ್​ ಮೂಲಕ ಬಿಗ್ ಬಾಸ್​ ಮನೆಗೆ ಬಂದಿರುವ ರಜತ್ ಅವರು ಬಹುತೇಕ ಎಲ್ಲರ ಜೊತೆಯೂ ಕಿರಿಕ್ ಮಾಡಿಕೊಂಡಿದ್ದಾರೆ. ಬಂದ ಮೊದಲ ವಾರದಲ್ಲೇ ಗೋಲ್ಡ್ ಸುರೇಶ್​ಗೆ ಅವಾಚ್ಯ ಪದಗಳನ್ನು ಬಳಸಿ ಕೆಂಗಣ್ಣಿಗೆ ಗುರಿಯಾಗಿದ್ದ ರಜತ್, ಈಗ ಗೌತಮಿಯ ಬಗ್ಗೆ ಮಾತನಾಡಿದ್ದಾರೆ. ಮಾತಿನ ಭರದಲ್ಲಿ ಅಪ್ಪ-ಅಮ್ಮನ ವಿಚಾರವನ್ನೆಲ್ಲ ಪ್ರಸ್ತಾಪಿಸಲು ಶುರು ಮಾಡಿದ್ದಾರೆ. ಇದರಿಂದಾಗಿ ಗೌತಮಿ ಅವರಿಗೆ ಸಖತ್ ಕೋಪ ಬಂದಿದೆ. ಡಿಸೆಂಬರ್​ 16ರ ಸಂಚಿಕೆಯಲ್ಲಿ ಗೌತಮಿ ಜಾದವ್ ಮತ್ತು ರಜತ್ ಅವರು ಸಿಕ್ಕಾಪಟ್ಟೆ ಜಗಳ ಮಾಡಿಕೊಂಡಿದ್ದಾರೆ. ರಜತ್ ಅವರ ಮಾತುಗಳನ್ನು ಉಗ್ರಂ ಮಂಜು ಖಂಡಿಸಿದ್ದಾರೆ.

ಇಡೀ ಮನೆಯಲ್ಲಿ ಕ್ಲೀನ್ ಮಾಡುವ ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್ ನಿಭಾಯಿಸುವ ವೇಳೆ ಗೌತಮಿ ಜಾದವ್ ಮತ್ತು ರಜತ್ ನಡುವೆ ಜಗಳ ಆರಂಭ ಆಯಿತು. ಕೆಲಸದ ವಿಚಾರ ಬಂದಾಗ ರಜತ್ ಯಾವಾಗಲೂ ಸೋಮಾರಿತನ ಪ್ರದರ್ಶಿಸುತ್ತಾರೆ. ಕೆಲಸ ಮಾಡಲು ಹಿಂದೇಟು ಹಾಕಿದ ಅವರಿಗೆ ‘ಸುಮ್ಮನೆ ಕುಳಿತುಕೊಂಡು ಹಣ್ಣು ತಿನ್ನಿ’ ಎಂದು ಗೌತಮಿ ಜಾದವ್ ತಿರುಗೇಟು ನೀಡಿದರು. ಅಲ್ಲಿಂದ ಮಾತಿನ ಚಕಮಕಿ ಆರಂಭ ಆಯಿತು.

ತಾವು ಹಣ್ಣು ತಿನ್ನುವುದನ್ನು ಗೌತಮಿ ಜಾದವ್ ಟೀಕಿಸಿದ್ದಕ್ಕೆ ರಜತ್ ಅವರಿಗೆ ವಿಪರೀತ ಕೋಪ ಬಂತು. ಆಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಇಷ್ಟು ದಿನ ಪಾಸಿಟಿವ್ ಮಂತ್ರ ಜಪಿಸುತ್ತಿದ್ದ ಗೌತಮಿ ಜಾದವ್ ಅವರು ರಜತ್​ಗೆ ಏಕವಚನದಲ್ಲಿ ಬೈಯ್ಯುವ ಮಟ್ಟಕ್ಕೆ ಬದಲಾದರು. ‘ಇವರ ಅಪ್ಪನ ಮನೆಯಿಂದ ತಂದವಳ ರೀತಿ ಹೇಳುತ್ತಾಳೆ’ ಎಂದು ರಜತ್ ಅವರು ಬಾಯಿಗೆ ಬಂದಂತೆ ಮಾತನಾಡಿ ಗದ್ದಲ ಎಬ್ಬಿಸಿದರು.

ಇದನ್ನೂ ಓದಿ: ‘ಗೋಲ್ಡ್ ಸುರೇಶ್​ ಸೋತಿಲ್ಲ’: ಮುಖ್ಯವಾದ ಸಂದೇಶ ನೀಡಿದ ಕಿಚ್ಚ ಸುದೀಪ್

ಮನೆ ಕ್ಲೀನ್ ಮಾಡುವ ಟಾಸ್ಕ್​ ಮುಗಿದ ಬಳಿಕ ಬಿಗ್ ಬಾಸ್ ಕಡೆಯಿಂದ ದಿನಸಿ ವಸ್ತುಗಳು ಬಂದವು. ಅದನ್ನು ನೋಡುತ್ತ ಇರುವಾಗ ‘ಇದು ಬಿಗ್ ಬಾಸ್ ಕಳಿಸಿದ್ದು ತಾನೆ? ಯಾರಾದರೂ ಅಪ್ಪನ ಮನೆಯಿಂದ ತಂದಿದ್ದೀರಾ’ ಎಂದು ರಜತ್ ಮತ್ತೊಮ್ಮೆ ಗೌತಮಿಯನ್ನು ಕೆಣಕಿದರು. ‘ಅಮ್ಮ ಅಮ್ಮನ ವಿಷಯಕ್ಕೆ ಬಂದರೆ ಸರಿ ಇರುವುದಿಲ್ಲ’ ಎಂದು ಗೌತಮಿ ಅವರು ರಜತ್​ಗೆ ವಾರ್ನಿಂಗ್ ನೀಡಿದ್ದಾರೆ. ಈ ವಿಚಾರದ ಬಗ್ಗೆ ವೀಕೆಂಡ್​ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಅವರು ರಜತ್​ಗೆ ಕ್ಲಾಸ್​ ತೆಗೆದುಕೊಳ್ಳುವ ಸಾಧ್ಯತೆ ಜಾಸ್ತಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ