ಬಿಗ್ ಬಾಸ್ ನಿರೂಪಣೆ ಬಿಟ್ಟಿದ್ದಕ್ಕೆ ನಿಜವಾದ ಕಾರಣ ತಿಳಿಸಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್​ ಅವರ ಮುಂದಿನ ಸೀಸನ್​ ಬಿಗ್ ಬಾಸ್​ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂಬುದರ ಹಿಂದೆ ಅನೇಕ ಅಂತೆ-ಕಂತೆಗಳು ಹರಿದಾಡಿವೆ. ಆದರೆ ಈಗ ಸ್ವತಃ ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಟಿವಿ9 ವಿಶೇಷ ಸಂದರ್ಶದಲ್ಲಿ ಕಿಚ್ಚ ಸುದೀಪ್ ಅವರು ಅಸಲಿ ಕಾರಣ ತಿಳಿಸಿದ್ದಾರೆ.

ಬಿಗ್ ಬಾಸ್ ನಿರೂಪಣೆ ಬಿಟ್ಟಿದ್ದಕ್ಕೆ ನಿಜವಾದ ಕಾರಣ ತಿಳಿಸಿದ ಕಿಚ್ಚ ಸುದೀಪ್
ಕಿಚ್ಚ ಸುದೀಪ್
Follow us
ಮದನ್​ ಕುಮಾರ್​
|

Updated on: Dec 16, 2024 | 7:17 PM

ಈವರೆಗೂ ಕಿಚ್ಚ ಸುದೀಪ್​ ಅವರು ಸತತ 11 ಸೀಸನ್​ಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. 12ನೇ ಸೀಸನ್​ಗೆ ಅವರು ನಿರೂಪಣೆ ಮಾಡುವುದಿಲ್ಲ. ಆ ಬಗ್ಗೆ ಸುದೀಪ್ ಈಗಾಗಲೇ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಆದರೆ ಆ ನಿರ್ಧಾರದ ಹಿಂದಿರುವ ಕಾರಣ ಏನು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆ ಕುರಿತು ಸುದೀಪ್ ಅವರು ಈಗ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾಗಳ ಶೂಟಿಂಗ್ ಮಧ್ಯದಲ್ಲಿ ಬಿಗ್ ಬಾಸ್ ನಿರೂಪಣೆಗೆ ಸಮಯ ಹೊಂದಿಸಿಕೊಳ್ಳುವುದು ತುಂಬ ಕಷ್ಟ. ಆ ಕಾರಣದಿಂದಲೇ ತಾವು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸುದೀಪ್ ಅವರು ತಿಳಿಸಿದ್ದಾರೆ.

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್​ 25ರಂದು ಬಿಡುಗಡೆ ಆಗಲಿದೆ. ಈ ಪ್ರಯುಕ್ತ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಬಿಗ್ ಬಾಸ್​ ನಿರೂಪಣೆಯ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ತಾವು ಬಿಗ್ ಬಾಸ್​ ನಿರೂಪಣೆಗೆ ವಿದಾಯ ಹೇಳಿದ್ದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಸುದೀಪ್ ತಿಳಿಸಿದ್ದಾರೆ.

‘ಸಾಕು, ಎಷ್ಟು ಮಾಡುವುದು? ಎಲ್ಲರನ್ನೂ ರಿಪೇರಿ ಮಾಡುತ್ತಾ ಕುಳಿತುಕೊಳ್ಳಲು ಬಂದಿದ್ದೀನಾ ನಾನು? ಬೇರೆ ಕೆಲಸಗಳು ಇರುತ್ತವೆ. ತುಂಬ ಶ್ರಮ ಬೇಕು. ಅದು ಯಾರಿಗೂ ಅರ್ಥ ಆಗಲ್ಲ. ಕಳೆದ ಸೀಸನ್​ ನಡೆಯುವಾಗ ನನ್ನ ಸಿನಿಮಾದ ಶೂಟಿಂಗ್​ ಮಹಾಬಲಿಪುರಂನಲ್ಲಿ ನಡೆಯುತ್ತಿತ್ತು. ಚೆನ್ನೈನಿಂದ ಅಲ್ಲಿಗೆ ಹೋಗಲು ಒಂದೂವರೆ ಗಂಟೆ ಬೇಕು. ಬೆಂಗಳೂರಿನಿಂದ ನಾನು ಅಲ್ಲಿಗೆ ಹೋಗಿ, ಅಲ್ಲಿ ಶೂಟಿಂಗ್ ಮಾಡಿ, ಮಧ್ಯರಾತ್ರಿ ಶೂಟಿಂಗ್ ಮುಗಿಸಿ, ಖಾಸಗಿ ವಿಮಾನದಲ್ಲಿ ವಾಪಸ್ ಬೆಂಗಳೂರಿಗೆ ಬಂದು ಬಿಗ್ ಬಾಸ್ ಎಪಿಸೋಡ್​ ನೋಡಿ, ವೀಕೆಂಡ್​ ಸಂಚಿಕೆ ಶೂಟ್ ಮಾಡಬೇಕು. ಇದರಿಂದ ನನಗೆ ತುಂಬ ಸುಸ್ತಾಗುತ್ತದೆ’ ಎಂದು ಸುದೀಪ್​ ಹೇಳಿದ್ದಾರೆ.

ಇದನ್ನೂ ಓದಿ: ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ

‘ನಾವು ಬೆಂಗಳೂರಿನಲ್ಲೇ ಇದ್ದರೆ ಓಕೆ. ಎಲ್ಲೆಲ್ಲೋ ಇದ್ದರೆ ಸಿನಿಮಾ ಶೂಟಿಂಗ್ ಸರಿಯಾಗಿ ಮಾಡೋಕೆ ಆಗಲ್ಲ. ನಾನು ಎಲ್ಲಿಯೇ ಇದ್ದರೂ ಗುರುವಾರ ಶೂಟಿಂಗ್ ಮುಗಿಸಿಕೊಂಡು ಶುಕ್ರವಾರ ಓಡಿಬರಬೇಕು. ಸಾವಿರ ಜನರು ಶೂಟಿಂಗ್ ಮಾಡುತ್ತಾ ಇರುತ್ತೇವೆ. ಆದರೆ ಬಿಗ್ ಬಾಸ್​ ಸಲುವಾಗಿ ಶುಕ್ರವಾರ, ಶನಿವಾರ ಬ್ರೇಕ್ ಆಗುತ್ತದೆ. ಸಿನಿಮಾಗಳು ಇಲ್ಲದಿದ್ದಾಗ ಓಕೆ. ಸಿನಿಮಾ ಶೂಟಿಂಗ್​ ಇದ್ದರೆ ತಡ ಆಗುತ್ತದೆ. ಇಷ್ಟು ವರ್ಷ ಖುಷಿಯಿಂದಲೇ ಮಾಡಿದ್ದೇನೆ. ಈಗ ಬೇರೆ ಯಾರಾದರೂ ಮಾಡಲಿ’ ಎಂದು ಸುದೀಪ್ ಅವರು ಹೇಳಿದ್ದಾರೆ.

ಸುದೀಪ್​ ಬಳಿಕ ಬೇರೆ ಯಾರು ಈ ಶೋ ನಡೆಸಿಕೊಡುತ್ತಾರೆ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಇದೆ. ‘ಯಾರು ಬೇಕಾದರೂ ನಡೆಸಿಕೊಡಬಹುದು. ಆದರೆ ನನ್ನ ರೀತಿ ಮಾಡೋಕೆ ಆಗತ್ತೋ ಇಲ್ಲವೋ ಎಂಬುದು ಬೇರೆ ಪ್ರಶ್ನೆ. ಆ ಹೋಲಿಕೆ ಬೇಡ. ಪ್ರತಿಯೊಬ್ಬರಿಗೂ ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ. ಅದರಂತೆ ಅವರು ನಡೆಸಿಕೊಡುತ್ತಾರೆ’ ಎಂದು ಸುದೀಪ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದ ಪ್ರತಿಭಟನೆಕಾರರು
ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದ ಪ್ರತಿಭಟನೆಕಾರರು
Video: ಸಂಸತ್ತಿಗೆ ಪ್ಯಾಲೆಸ್ತೀನ್ ಬ್ಯಾಗ್ ಹಿಡಿದು ಬಂದ ಪ್ರಿಯಾಂಕಾ ಗಾಂಧಿ
Video: ಸಂಸತ್ತಿಗೆ ಪ್ಯಾಲೆಸ್ತೀನ್ ಬ್ಯಾಗ್ ಹಿಡಿದು ಬಂದ ಪ್ರಿಯಾಂಕಾ ಗಾಂಧಿ
ಸಿದ್ದರಾಮಯ್ಯನವರ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ, ಬಗ್ಗಲ್ಲ: ವಿಜಯೇಂದ್ರ
ಸಿದ್ದರಾಮಯ್ಯನವರ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ, ಬಗ್ಗಲ್ಲ: ವಿಜಯೇಂದ್ರ
ವಿಜಯೇಂದ್ರ-ಭೈರೇಗೌಡ ನಡುವೆ ವಾಗ್ವಾದ, ಸ್ಪೀಕರ್ ಯುಟಿ ಖಾದರ್ ಅಸಹಾಯಕ
ವಿಜಯೇಂದ್ರ-ಭೈರೇಗೌಡ ನಡುವೆ ವಾಗ್ವಾದ, ಸ್ಪೀಕರ್ ಯುಟಿ ಖಾದರ್ ಅಸಹಾಯಕ
ಅಧಿಕಾರದಲ್ಲಿರೋದು ಮುಸ್ಲಿಂ ಓಲೈಕೆಯ ಹಿಂದೂ ವಿರೋಧಿ ಸರ್ಕಾರ: ಯತ್ನಾಳ್
ಅಧಿಕಾರದಲ್ಲಿರೋದು ಮುಸ್ಲಿಂ ಓಲೈಕೆಯ ಹಿಂದೂ ವಿರೋಧಿ ಸರ್ಕಾರ: ಯತ್ನಾಳ್