AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಬಿಗ್ ಬಾಸ್​ ಕಿರೀಟ ಗೆದ್ದ ಕನ್ನಡದ ಹುಡುಗ ನಿಖಿಲ್; ಸೃಷ್ಟಿ ಆಯಿತು ದಾಖಲೆ

ತೆಲುಗು ಬಿಗ್ ಬಾಸ್ ಸೀಸನ್ 8ರಲ್ಲಿ ಕನ್ನಡದ ನಿಖಿಲ್ ವಿಜೇತರಾಗಿದ್ದಾರೆ. ನಟ ಮತ್ತು ಯೂಟ್ಯೂಬರ್ ಆಗಿರುವ ನಿಖಿಲ್, ತಮ್ಮ ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. 50 ಲಕ್ಷ ರೂಪಾಯಿ ಬಹುಮಾನ ಮತ್ತು ಕಾರು ಗೆದ್ದ ನಿಖಿಲ್ ಅವರಿಗೆ ರಾಮ್ ಚರಣ್ ಅವಾರ್ಡ್ ನೀಡಿದ್ದಾರೆ. ಇದು ಕನ್ನಡದ ಯುವ ಪ್ರತಿಭೆಗೆ ಸಿಕ್ಕ ದೊಡ್ಡ ಗೆಲುವಾಗಿದೆ.

ತೆಲುಗು ಬಿಗ್ ಬಾಸ್​ ಕಿರೀಟ ಗೆದ್ದ ಕನ್ನಡದ ಹುಡುಗ ನಿಖಿಲ್; ಸೃಷ್ಟಿ ಆಯಿತು ದಾಖಲೆ
ನಿಖಿಲ್
ರಾಜೇಶ್ ದುಗ್ಗುಮನೆ
|

Updated on: Dec 16, 2024 | 9:08 AM

Share

ಬಿಗ್ ಬಾಸ್​ನಲ್ಲಿ ಸ್ಪರ್ಧೆ ಮಾಡಬೇಕು ಎಂದರೆ ಸಾಕಷ್ಟು ಟ್ಯಾಲೆಂಟ್ ಬೇಕು. ಅದನ್ನು ವಿನ್ ಆಗಬೇಕು ಎಂದರೆ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿರಬೇಕು. ಈಗ ‘ತೆಲುಗು ಬಿಗ್ ಬಾಸ್ ಸೀಸನ್ 8’ರಲ್ಲಿ ಕನ್ನಡದ ಹುಡುಗ ನಿಖಿಲ್ ಮಳಿಯಕ್ಕಲ್ ಗೆದ್ದಿದ್ದಾರೆ. ಈ ಮೂಲಕ ಅವಾರ್ಡ್​ನ ಬಾಚಿಕೊಂಡಿಕೊಂಡಿದ್ದಾರೆ. ರಾಮ್ ಚರಣ್ ಅವರು ಚೆಕ್ ಹಾಗೂ ಅವಾರ್ಡ್​ನ ನಿಖಿಲ್​ಗೆ ನೀಡಿದ್ದಾರೆ. ಬೇರೆ ಭಾಷೆಗೆ ತೆರಳಿ ಕನ್ನಡದ ಹುಡುಗ ಗೆದ್ದಿರುವುದರಿಂದ ದಾಖಲೆ ಸೃಷ್ಟಿ ಆಗಿದೆ.

ನಿಖಿಲ್ ಅವರು ಮೂಲತಃ ಕರ್ನಾಟಕದವರು. ಅವರು ಹುಟ್ಟಿದ್ದು ಮೈಸೂರಿನಲ್ಲಿ. ಅವರಿಗೆ ತೆಲುಗು ಚಿತ್ರರಂಗದ ಜೊತೆ, ಅಲ್ಲಿನ ಕಿರುತೆರೆ ಜೊತೆ ಒಳ್ಳೆಯ ನಂಟು ಬೆಳೆದಿದೆ. ಅವರು ನಟ ಹಾಗೂ ಯೂಟ್ಯೂಬರ್. ನಿಖಿಲ್​ಗೆ ಇನ್ನೂ 27 ವರ್ಷ. ಅವರು 2016ರಲ್ಲಿ ‘ಊಟಿ’ ಹೆಸರಿನ ಕನ್ನಡ ಸಿನಿಮಾ ಮಾಡಿದರು. 1991ರಲ್ಲಿ ನಡೆದ ಕಾವೇರಿ ಧಂಗೆಯಲ್ಲಿ ಬೇರೆ ಆಗುವ ಜೋಡಿ 12 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಾರೆ. ಈ ರೀತಿಯ ಕಥೆಯನ್ನು ಸಿನಿಮಾ ಹೊಂದಿತ್ತು. 2019ರಲ್ಲಿ ಪ್ರಸಾರ ಆರಂಭಿಸಿದ ತೆಲುಗಿನ ‘ಗೋರಿಂಟಕು’ ಧಾರಾವಾಹಿ ಮೂಲಕ ಅವರು ತೆಲುಗು ರಂಗದಲ್ಲಿ ಫೇಮಸ್ ಆದರು.

ನಿಖಿಲ್ ಅವರು ಸೆಪ್ಟೆಂಬರ್ 1ರಂದು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ಬಿಗ್ ಬಾಸ್​ನಲ್ಲಿ ಭರ್ಜರಿ ಮನರಂಜನೆ ನೀಡಿ ಗಮನ ಸೆಳೆದರು. ಈಗ ಬಿಗ್ ಬಾಸ್ ವಿನ್ ಆಗಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಅವಾರ್ಡ್​ ಹಣ ಸಿಕ್ಕಿದೆ. ಜೊತೆಗೆ ಸುಂದರವಾದ ಒಂದು ಕಪ್ ಸಿಕ್ಕಿದೆ. ಜೊತೆಗೆ ಒಂದು ಕಾರ್ ಕೂಡ ಗಿಫ್ಟ್ ಆಗಿ ಸಿಕ್ಕಿದೆ. ಫಿನಾಲೆಯಲ್ಲಿ ಇದ್ದ ಗೌತಮ್ ಕೃಷ್ಣ, ಅವಿನಾಶ್, ಪ್ರೇರಣಾ ಹಾಗೂ ನಬೀಲ್​ನ ಬೀಟ್ ಮಾಡಿದರು.

ಇದನ್ನೂ ಓದಿ: ತಂದೆ ನಿಧನ ಹೊಂದಿದ್ದಕ್ಕೆ ಹೊರ ಹೋದ್ರಾ ಗೋಲ್ಡ್ ಸುರೇಶ್? ಇಲ್ಲಿದೆ ಅಸಲಿ ವಿಚಾರ

ಫಿನಾಲೆಗೆ ರಾಮ್ ಚರಣ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ನಿಖಿಲ್​ಗೆ ಅವಾರ್ಡ್ ನೀಡಿದ್ದಾರೆ. ರಾಮ್ ಚರಣ್ ಅವರಿಂದ ಅವಾರ್ಡ್ ಪಡೆದು ನಿಖಿಲ್ ಖುಷಿಪಟ್ಟಿದ್ದಾರೆ. ಈಗ ಅವರು ಬಣ್ಣದ ಲೋಕದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು