ತಂದೆ ನಿಧನ ಹೊಂದಿದ್ದಕ್ಕೆ ಹೊರ ಹೋದ್ರಾ ಗೋಲ್ಡ್ ಸುರೇಶ್? ಇಲ್ಲಿದೆ ಅಸಲಿ ವಿಚಾರ
ಸುರೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ತೊಂದರೆ ಅನುಭವಿಸಿದ್ದರು. ಅವರು ಟಾಸ್ಕ್ ಆಡುವಾಗ ಪೆಟ್ಟು ಮಾಡಿಕೊಂಡಿದ್ದರು. ಇದು ಅವರಿಗೆ ತೀವ್ರ ಹಿನ್ನಡೆ ಉಂಟು ಮಾಡಿತ್ತು. ಕೆಲ ವಾರ ಅವರಿಗೆ ಆಡಲು ತೊಂದರೆ ಆಗಿತ್ತು. ಇದೆಲ್ಲ ಅಡೆತಡೆಯನ್ನು ಮೀರಿ ಅವರು ಮುಂದೆ ಬಂದಿದ್ದರು. ಆದರೆ, ಈಗ ಅವರು ದೊಡ್ಮನೆಯಿಂದ ಹೊರ ಹೋಗುವ ಪರಿಸ್ಥಿತಿ ಬಂದಿದೆ.
ಗೋಲ್ಡ್ ಸುರೇಶ್ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಅವರು ಈ ವಾರ ಕ್ಯಾಪ್ಟನ್ ಆದರು. ಆದರೆ, ಆ ವಾರವೇ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಮನೆಯಲ್ಲಿ ಎಮರ್ಜೆನ್ಸಿ ಪರಿಸ್ಥಿತಿ ಉಂಟಾಗಿದ್ದರಿಂದ ಅವರು ಹೊರ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಎಲ್ಲರೂ ಸುರೇಶ್ ತಂದೆ ನಿಧನ ಹೊಂದಿದ್ದಾಗಿ ವರದಿ ಮಾಡಿದ್ದರು. ಆದರೆ, ಅಸಲಿ ವಿಚಾರ ಹಾಗಿಲ್ಲ ಎನ್ನಲಾಗಿದೆ. ಈ ಬೆಳವಣಿಗೆಯನ್ನು ಇಂದಿನ (ಡಿಸೆಂಬರ್ 16) ಎಪಿಸೋಡ್ನಲ್ಲಿ ಪ್ರಸಾರ ಮಾಡಲಿದ್ದಾರೆ.
ಸುರೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ತೊಂದರೆ ಅನುಭವಿಸಿದ್ದರು. ಅವರು ಟಾಸ್ಕ್ ಆಡುವಾಗ ಪೆಟ್ಟು ಮಾಡಿಕೊಂಡಿದ್ದರು. ಇದು ಅವರಿಗೆ ತೀವ್ರ ಹಿನ್ನಡೆ ಉಂಟು ಮಾಡಿತ್ತು. ಕೆಲ ವಾರ ಅವರಿಗೆ ಆಡಲು ತೊಂದರೆ ಆಗಿತ್ತು. ಇದೆಲ್ಲ ಅಡೆತಡೆಯನ್ನು ಮೀರಿ ಅವರು ಮುಂದೆ ಬಂದಿದ್ದರು. ಆದರೆ, ಈಗ ಅವರು ದೊಡ್ಮನೆಯಿಂದ ಹೊರ ಹೋಗುವ ಪರಿಸ್ಥಿತಿ ಬಂದಿದೆ.
‘ಮನೆಯಲ್ಲಿ ತುರ್ತುಪರಿಸ್ಥಿತಿ ನಿರ್ಮಾಣ ಆಗಿರುವುದರಿಂದ ಗೋಲ್ಡ್ ಸುರೇಶ್ ನೀವು ಈ ಕೂಡಲೇ ಹೊರಡಬೇಕು’ ಎಂದು ಬಿಗ್ ಬಾಸ್ ಘೋಷಣೆ ಮಾಡಿದರು. ಈ ವೇಳೆ ಗೋಲ್ಡ್ ಸುರೇಶ್ ಅವರು ಕಣ್ಣೀರು ಹಾಕಿದರು. ಏನಾಗಿರಬಹುದು ಎಂದು ಊಹಿಸಿ ಅವರಿಗೆ ಅಳು ಬಂತು. ಆ ಬಳಿಕ ಚಿನ್ನ ಹಾಕಿಕೊಂಡೇ ದೊಡ್ಮನೆಯಿಂದ ಹೊರಟರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ವದಂತಿ ಹಬ್ಬಿದೆ. ಸುರೇಶ್ ತಂದೆ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅದರಲ್ಲಿ ನಿಜವಿಲ್ಲ.
ಇದನ್ನೂ ಓದಿ: ಕ್ಯಾಪ್ಟನ್ ಆದ ಗೋಲ್ಡ್ ಸುರೇಶ್; ಮೈ ತುಂಬಾ ಬಂಗಾರ ಧರಿಸಿ ಅಧಿಕಾರ ಸ್ವೀಕಾರ
ಶಿವಗೌಡ ಎಂಬುದು ಸುರೇಶ್ ತಂದೆ ಹೆಸರು. ಆದರೆ, ಅಸಲಿಗೆ ಅವರ ತಂದೆ ನಿಧನ ಹೊಂದಿಲ್ಲ. ಅವರು ಬದುಕಿಯೇ ಇದ್ದಾರೆ. ಕಾಲು ನೋವಿನ ಕಾರಣದಿಂದ ಹೊರ ಬಂದಿರಬಹುದು ಎಂದು ಅವರ ತಂದೆ ಅನುಮಾನ ಹೊರಹಾಕಿದ್ದಾರೆ. ಇಂದಿನ ಎಪಿಸೋಡ್ನಲ್ಲಿ ಆ ಬಗ್ಗೆ ಮಾಹಿತಿ ಸಿಗೋ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.