ಕಮಲ್ ಹಾಸನ್ನ ತಬ್ಬಿ ಮೂರು ದಿನ ಸ್ನಾನ ಮಾಡಿರಲಿಲ್ಲ ಶಿವರಾಜ್ಕುಮಾರ್
ಕಮಲ್ ಹಾಸನ್ ಅವರು ಕಾಲಿವುಡ್ನ ಬೇಡಿಕೆಯ ನಟ. ಅವರಿಗೆ ಕೋಟ್ಯಾಂತರ ಫ್ಯಾನ್ಸ್ ಇದ್ದಾರೆ. ತಮಿಳು ಮಾತ್ರವಲ್ಲದೆ, ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ಕಮಲ್ ಹಾಸನ್ ನಟಿಸಿ ಗಮನ ಸೆಳೆದಿದ್ದಾರೆ. ಅವರ ಬೇಡಿಕೆ ಹೆಚ್ಚಿದೆ. ಶಿವಣ್ಣನಿಗೆ ಅವರನ್ನು ಕಂಡರೆ ಸಖತ್ ಪ್ರೀತಿ. ಈ ಬಗ್ಗೆ ಶಿವರಾಜ್ಕುಮಾರ್ ಅವರು ಮಾತನಾಡಿದ್ದರು.
ಶಿವರಾಜ್ಕುಮಾರ್ ಅವರು ದೊಡ್ಡ ಸ್ಟಾರ್ ಹೀರೋ. ಅವರಿಗೆ ಹಲವು ಅಭಿಮಾನಿಗಳು ಇದ್ದಾರೆ. ಇಷ್ಟು ದೊಡ್ಡ ಸ್ಟಾರ್ ಆದರೂ ಅವರಿಗೂ ಕೆಲವರು ಫೇವರಿಟ್ ಹೀರೋಗಳು ಎಂಬುದು ಇರುತ್ತಾರೆ. ಈ ಬಗ್ಗೆ ಶಿವರಾಜ್ಕುಮಾರ್ ಅವರು ಈ ಮೊದಲು ಮಾತನಾಡಿದ್ದರು. ಅವರು ಹಲವು ವಿಚಾರಗಳ ಬಗ್ಗೆ ಹೇಳಿಕೊಂಡಿದ್ದರು. ಅವರಿಗೆ ಕಮಲ್ ಹಾಸನ್ ಎಂದರೆ ಸಖತ್ ಇಷ್ಟ ಅಂತೆ. ಈ ಬಗ್ಗೆ ಅವರು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಮೊದಲು ನಡೆದ ಒಂದು ಅಚ್ಚರಿಯ ವಿಚಾರ ರಿವೀಲ್ ಆಗಿದೆ.
ಕಮಲ್ ಹಾಸನ್ ಅವರು ಕಾಲಿವುಡ್ನ ಬೇಡಿಕೆಯ ನಟ. ಅವರಿಗೆ ಕೋಟ್ಯಾಂತರ ಫ್ಯಾನ್ಸ್ ಇದ್ದಾರೆ. ತಮಿಳು ಮಾತ್ರವಲ್ಲದೆ, ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ಕಮಲ್ ಹಾಸನ್ ನಟಿಸಿ ಗಮನ ಸೆಳೆದಿದ್ದಾರೆ. ಅವರ ಬೇಡಿಕೆ ಹೆಚ್ಚಿದೆ. ಶಿವಣ್ಣನಿಗೆ ಅವರನ್ನು ಕಂಡರೆ ಸಖತ್ ಪ್ರೀತಿ. ಈ ಬಗ್ಗೆ ಶಿವರಾಜ್ಕುಮಾರ್ ಅವರು ಮಾತನಾಡಿದ್ದರು.
‘ನನಗೆ ಕಮಲ್ ಹಾಸನ್ ಇಷ್ಟ. ನಾನು ಚಿಕ್ಕವನಾಗಿದ್ದಾಗ ಅವರು ನಮ್ಮ ಮನೆಗೆ ಬಂದಿದ್ದರು. ಅವರು ನನ್ನನ್ನು ನೋಡಿ ಯಾರು ಈ ಹುಡುಗ ಎಂದು ಕೇಳಿದರು. ನಮ್ಮ ಮಗ ಎಂದು ಅಪ್ಪಾಜಿ ಪರಿಚಯಿಸಿದರು. ಏನಪ್ಪ ಎಂದು ಕಮಲ್ ಹಾಸನ್ ಕೇಳಿದರು. ತಬ್ಬಿಕೊಳ್ಳಲಾ ಎಂದು ಕೇಳಿದೆ. ಹು ತಬ್ಬಿಕೊಳ್ಳಿ ಎಂದು, ಪ್ರೀತಿಯಿಂದ ಹಗ್ ಕೊಟ್ಟರು. ಆ ಬಳಿಕ ಅವರು ಮೂರು ದಿನ ಸ್ನಾನ ಮಾಡಿರಲಿಲ್ಲ’ ಎಂದಿದ್ದಾರೆ ಶಿವರಾಜ್ಕುಮಾರ್.
‘ನನಗೆ ಅವರೆಂದರೆ ಸಖತ್ ಇಷ್ಟ. ಅವರ ಸ್ಮೆಲ್ ನನ್ನ ಮೇಲೆ ಇರಲಿ ಎಂದು ನಾನು ಸ್ನಾನ ಮಾಡಿರಲಿಲ್ಲ. ನೀವು ಹುಡಗಿ ಆಗಿದ್ದರೆ ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡಿ ಬಿಡುತ್ತಿದ್ದೆ. ಗುಣ ಸಿನಿಮಾದಲ್ಲಿ ನೀವು ಕಿಡ್ನ್ಯಾಪ್ ಮಾಡುತ್ತಿದ್ದರಲ್ಲ ಹಾಗೆ ನಿಮ್ಮನ್ನು ಕಿಡ್ನ್ಯಾಪ್ ಮಾಡುತ್ತಿದ್ದೆ ಎಂದು ಅವರಿಗೇ ಹೇಳಿದ್ದೆ’ ಎಂದಿದ್ದಾರೆ ಶಿವಣ್ಣ.
View this post on Instagram
ಇದನ್ನೂ ಓದಿ: ‘ಆ ದೇವರ ತೋರಿಸಿದ್ದಕ್ಕೆ ಜೋಗಿ ಸಿನಿಮಾ ಯಶಸ್ಸು ಕಂಡಿತು’; ಶಿವರಾಜ್ಕುಮಾರ್
ಶಿವರಾಜ್ಕುಮಾರ್ ಅವರು ಅಮೆರಿಕ ತೆರಳಲಿದ್ದಾರೆ. ಅಲ್ಲಿ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಆ ಬಳಿಕ ಭಾರತಕ್ಕೆ ಮರಳುವ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಕಮಲ್ ಹಾಸನ್ ಅವರು ವಿವಿಧ ಸಿನಿಮಾನಗಳನ್ನು ಒಪ್ಪಿ ನಟಿಸುತ್ತಿದ್ದಾರೆ.
ಶಿವರಾಜ್ಕುಮಾರ್ ಅವರಿಗೆ ಉತ್ತಮವಾಗಿ ತಮಿಳು ಮಾತನಾಡಲು ಬರುತ್ತದೆ. ಚೆನ್ನೈ ಜೊತೆ ಅವರಿಗೆ ಒಳ್ಳೆಯ ನಂಟು ಬೆಳೆದಿದೆ. ಇದಕ್ಕೆ ಕಾರಣ ಅವರು ಹುಟ್ಟಿ ಬೆಳೆದ ಊರು ಅದು. ರಾಜ್ಕುಮಾರ್ ಮೊದಲು ಮದ್ರಾಸ್ನಲ್ಲಿ (ಈಗಿನ ಚೆನ್ನೈ) ಇರುತ್ತಿದ್ದರು. ಆ ಸಂದರ್ಭದಲ್ಲಿ ಇವರು ಜನಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:47 am, Mon, 16 December 24