‘ಆ ದೇವರ ತೋರಿಸಿದ್ದಕ್ಕೆ ಜೋಗಿ ಸಿನಿಮಾ ಯಶಸ್ಸು ಕಂಡಿತು’; ಶಿವರಾಜ್​ಕುಮಾರ್

‘ಜೋಗಿ’ ಚಿತ್ರದ ಅಪಾರ ಯಶಸ್ಸಿನ ಬಗ್ಗೆ ಶಿವರಾಜ್ ಕುಮಾರ್ ಅವರು ಮಾತನಾಡಿದ್ದಾರೆ. ಚಿತ್ರದ ಯಶಸ್ಸಿಗೆ ತಮ್ಮ ತಂದೆ-ತಾಯಿಯ ಆಶೀರ್ವಾದ ಹಾಗೂ ಚಿತ್ರೀಕರಣದ ಸಮಯದಲ್ಲಿ ನಡೆದ ಅನೇಕ ಅದ್ಭುತ ಘಟನೆಗಳು ಕಾರಣ ಎಂದು ಹೇಳಿದ್ದಾರೆ. ತಾಯಿ-ಮಗನ ಬಾಂಧವ್ಯವನ್ನು ಪ್ರಮುಖವಾಗಿ ಚಿತ್ರಿಸಿರುವ ಈ ಚಿತ್ರವು ಅನೇಕರ ಹೃದಯವನ್ನು ಗೆದ್ದಿದೆ ಎಂದು ಅವರು ತಿಳಿಸಿದ್ದಾರೆ.

‘ಆ ದೇವರ ತೋರಿಸಿದ್ದಕ್ಕೆ ಜೋಗಿ ಸಿನಿಮಾ ಯಶಸ್ಸು ಕಂಡಿತು’; ಶಿವರಾಜ್​ಕುಮಾರ್
ಜೋಗಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 11, 2024 | 8:15 AM

‘ಜೋಗಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಮೊದಲಾದವರು ನಟಿಸಿದ್ದರು. ಈ ಸಿನಿಮಾದ ದೊಡ್ಡ ಗೆಲುವಿನ ಹಿಂದೆ ಅನೇಕರ ಶ್ರಮ ಇದೆ. ತಾಯಿಗೆ ಬಳೆ ಮಾಡಿಸಬೇಕು ಎಂದು ಹಣ ಮಾಡಲು ನಗರಕ್ಕೆ ಬರೋ ವ್ಯಕ್ತಿ ಆ ಬಳಿಕ ತಾಯಿ ಮುಖವನ್ನು ನೋಡದೇ ಹೋಗಬೇಕಾಗುತ್ತದೆ. ಭವಾನತ್ಮಕವಾಗಿ ಈ ಸಿನಿಮಾ ಆವರಿಸಿಕೊಂಡಿತ್ತು. ಈ ಚಿತ್ರ ಯಶಸ್ಸು ಕಂಡಿದ್ದು ಏಕೆ ಎಂಬ ಬಗ್ಗೆ ಶಿವರಾಜ್​ಕುಮಾರ್ ಮಾತನಾಡಿದ್ದರು.

‘ಜೋಗಿ’ ಸಿನಿಮಾ 2005ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಶಿವಣ್ಣ ಜೋಗಿ ಹೆಸರಿನ ಪಾತ್ರ ಮಾಡಿದ್ದರು. ಅರುಂಧತಿ ನಾಗ್ ಅವರು ತಾಯಿ ಜೋಗಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಡಿ ಸಿನಿಮಾ ತಾಯಿ-ಮಗನ ಬಾಂಧವ್ಯದ ಬಗ್ಗೆ ಹೇಳುತ್ತದೆ. ಈ ಚಿತ್ರದ ಓಪನಿಂಗ್ ಕಾರ್ಡ್​​ನಲ್ಲಿ ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಬರುತ್ತಾರೆ. ಈ ಕಾರಣಕ್ಕೆ ಸಿನಿಮಾ ಹಿಟ್ ಆಯಿತು ಎಂಬುದು ಶಿವರಾಜ್​ಕುಮಾರ್ ಅವರ ನಂಬಿಕೆ.

‘ಓಪನಿಂಗ್ ಕಾರ್ಡ್​ನಲ್ಲಿ ಅಪ್ಪಾಜಿ-ಅಮ್ಮ ಬಂದಿದ್ದರು. ಆಶೀರ್ವಾದ ಮಾಡಿದರು ಅವರು. ಓಪನಿಂಗ್ ಅಲ್ಲೇ ದೇವರನ್ನು ತೋರಿಸಿದರು. ಅದಕ್ಕೆ ಸಿನಿಮಾ ಹಿಟ್ ಆಯ್ತು’ ಎಂದಿದ್ದಾರೆ ಶಿವರಾಜ್​ಕುಮಾರ್. ‘ಅಮ್ಮನ ಶವ ನೋಡೋದೇ ಇಲ್ವ ಎಂಬ ಪ್ರಶ್ನಾರ್ಥಕದಲ್ಲೇ ಸಿನಿಮಾ ಸಾಗುತ್ತದೆ. ಸ್ಮಶಾನದಲ್ಲಿ ಸಿನಿಮಾ ಶೂಟ್ ಮಾಡುತ್ತಿದ್ದೆವು. ಅಲ್ಲಿ ರಿಯಲ್ ಹೆಣ ಬಂತು. ಆಗ ನಾನು ಅಲ್ಲೋಗಿ ಡ್ಯಾನ್ಸ್ ಮಾಡಿದ್ದೆ. ಎಲ್ಲವೂ ರಿಯಲ್ ಆಗಿ ಬಂದಿದೆ’ ಎಂದಿದ್ದಾರೆ ಶಿವಣ್ಣ.

‘ದೇವಸ್ಥಾನದಲ್ಲಿ ಬರುವ ಒಂದು ದೃಶ್ಯವನ್ನು ನೋಡಿ ರಜನಿಕಾಂತ್ ಈಗಲೂ ಮೆಚ್ಚಿಕೊಳ್ಳುತ್ತಾರೆ. ಅದನ್ನು ಹೇಗೆ ಮಾಡಿದೆ ನೀನು ಅನ್ನೋದು ನನಗೆ ಈಗಲೂ ಗೊತ್ತಾಗಲ್ಲ ಎಂದು ಹೇಳುತ್ತಾರೆ’ ಎಂದಿದ್ದಾರೆ ಶಿವರಾಜ್​ಕುಮಾರ್ ಅವರು.

ಇದನ್ನೂ ಓದಿ: ಶಿವರಾಜ್​ಕುಮಾರ್ ಅಮೆರಿಕ ಹೋಗೋದು ಎಂದು? ಸರ್ಜರಿ ಯಾವಾಗ?; ಮಾಹಿತಿ ನೀಡಿದ ಗೀತಕ್ಕ

ಶಿವರಾಜ್​ಕುಮಾರ್ ಅವರಿಗೆ ಈಗ ಅನಾರೋಗ್ಯ ಆಗಿದೆ. ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಡಿಸೆಂಬರ್ 24ರಂದು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅದಕ್ಕೂ ಕೆಲ ದಿನಗಳ ಮೊದಲು ಅವರು ಅಮೆರಿಕಕ್ಕೆ ತೆರಳಲಿಲದ್ದಾರೆ. ಆ ಬಳಿಕ ಶಿವಣ್ಣ ಅವರು ದೀರ್ಘ ಬ್ರೇಕ್ ಪಡೆಯಲಿದ್ದಾರೆ. ಅವರ ನಟನೆಯ ‘ಭೈರತಿ ರಣಗಲ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ‘45’ ಹೆಸರಿನ ಸಿನಿಮಾ ರಿಲೀಸ್ ಆಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ