‘ಅಯೋಗ್ಯ 2’ ಸಿನಿಮಾಗೆ ಮುಹೂರ್ತ; ಸತೀಶ್, ರಚಿತಾ ಚಿತ್ರಕ್ಕೆ ಅಶ್ವಿನಿ ಹಾರೈಕೆ

ರಚಿತಾ ರಾಮ್, ಸತೀಶ್ ನೀನಾಸಂ ಮುಖ್ಯ ಭೂಮಿಕೆಯಲ್ಲಿರುವ ‘ಅಯೋಗ್ಯ 2’ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ‘ಅಯೋಗ್ಯ’ ಚಿತ್ರದಲ್ಲಿ ಇದ್ದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಈಗ ‘ಅಯೋಗ್ಯ 2’ ಸಿನಿಮಾದಲ್ಲೂ ಮುಂದುವರಿಯಲಿದ್ದಾರೆ. ಮಂಡ್ಯದಲ್ಲಿ ಈ ಸಿನಿಮಾಗೆ ಶೂಟಿಂಗ್ ನಡೆಲಿದೆ. ಮಹೇಶ್​ ಕುಮಾರ್​ ನಿರ್ದೇಶನ, ಮುನೇಗೌಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

‘ಅಯೋಗ್ಯ 2’ ಸಿನಿಮಾಗೆ ಮುಹೂರ್ತ; ಸತೀಶ್, ರಚಿತಾ ಚಿತ್ರಕ್ಕೆ ಅಶ್ವಿನಿ ಹಾರೈಕೆ
‘ಅಯೋಗ್ಯ 2’ ಸಿನಿಮಾ ಮುಹೂರ್ತ
Follow us
ಮದನ್​ ಕುಮಾರ್​
|

Updated on: Dec 11, 2024 | 4:47 PM

ನಟಿ ರಚಿತಾ ರಾಮ್ ಮತ್ತು ನಟ ಸತೀಶ್ ನೀನಾಸಂ ಅವರು ಮತ್ತೆ ಒಂದಾಗಿದ್ದರೆ. ‘ಅಯೋಗ್ಯ’ ಸಿನಿಮಾದಲ್ಲಿ ಜನರನ್ನು ರಂಜಿಸಿದ್ದ ಅವರು ಈಗ ‘ಅಯೋಗ್ಯ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಸೂಪರ್ ಹಿಟ್ ಆದ ‘ಅಯೋಗ್ಯ’ ಸಿನಿಮಾ ಬಿಡುಗಡೆಯಾಗಿ 6 ವರ್ಷ ಕಳೆದಿದೆ. ಈಗ ‘ಅಯೋಗ್ಯ 2’ ಚಿತ್ರ ಸೆಟ್ಟೇರಿದೆ. ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇಂದು (ಡಿ.11) ಅದ್ದೂರಿಯಾಗಿ ಮುಹೂರ್ತ ಮಾಡಲಾಗಿದೆ. ಆ ಮೂಲಕ ಶೂಟಿಂಗ್​ಗೆ ಚಾಲನೆ ನೀಡಲಾಗಿದೆ.

ನಿರ್ದೇಶಕ ಮಹೇಶ್ ಕುಮಾರ್ ಅವರು ‘ಅಯೋಗ್ಯ 2’ ಸಿನಿಮಾಗೆ ಆ್ಯಕ್ಷನ್​-ಕಟ್ ಹೇಳುತ್ತಿದ್ದಾರೆ. ಮುನೇಗೌಡ ಅವರು ‘ಎಸ್​ವಿಸಿ ಪ್ರೊಡಕ್ಷನ್’ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಮುಹೂರ್ತ ಕಾರ್ಯಕ್ರಮಕ್ಕೆ ಬಂದು ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು. ನೆನಪಿರಲಿ ಪ್ರೇಮ್, ಶ್ರೇಯರ್ ಮಂಜು, ಪ್ರಮೋದ್ ಮುಂತಾದವರು ಕೂಡ ಹಾಜರಿದ್ದು ಶುಭ ಕೋರಿದರು.

ಮುಹೂರ್ತದ ಬಳಿಕ ಸುದ್ದಿಗೋಷ್ಠಿ ಮಾಡಲಾಯಿತು. ಈ ವೇಳೆ ನಿರ್ದೇಶಕ ಮಹೇಶ್ ಮಾತನಾಡಿದರು. ‘ಈ ಸಿನಿಮಾ ಕನ್ನಡ ಮಾತ್ರವಲ್ಲದೇ ತಮಿಳು ಹಾಗೂ ತೆಲುಗಿನಲ್ಲೂ ಬರಲಿದೆ. ಮೊದಲ ಭಾಗ ಹಿಟ್ ಆದ್ಮೇಲೆ ಬೇರೆ ಭಾಷೆಗೆ ಡಬ್ ಮಾಡಿದ್ದೆವು. ಈಗ ಕನ್ನಡದ ಜೊತೆ ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್​ ಮಾಡಲಿದ್ದೇವೆ’ ಎಂದು ಮಹೇಶ್ ಹೇಳಿದ್ದಾರೆ.

ನಿರ್ಮಾಪಕರ ಬಗ್ಗೆ ಸತೀಶ್ ನೀನಾಸಂ ಅವರು ಮೆಚ್ಚುಗೆಯ ಮಾತಾಡಿದರು. ‘ಅಯೋಗ್ಯ2 ಚಿತ್ರಕ್ಕೆ ನಿರ್ಮಾಪಕರ ದೊಡ್ಡ ಪಟ್ಟಿ ಇತ್ತು. ಅದರೆ ಅಂತಿಮವಾಗಿ ಮುನೇಗೌಡ ಅವರು ಫೈನಲ್ ಆಗಿದ್ದಾರೆ. ಅವರು ಉತ್ತಮ ಪ್ರೊಡ್ಯುಸರ್​. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಿನಿಮಾ ಆಗಲಿದೆ’ ಎಂದಿದ್ದಾರೆ ಸತೀಶ್​. ಬಳಿಕ ಎಂ. ಮುನೇಗೌಡ ಮಾತನಾಡಿ, ‘ಮಹೇಶ್ ಅಯೋಗ್ಯ 2 ಸಿನಿಮಾ ಮಾಡಬೇಕು ಅಂತ ಹೇಳಿದಾಗ ಹಿಂದೆ-ಮುಂದೆ ಯೋಚಿಸದೇ ಒಪ್ಪಿಕೊಂಡೆ. ರಚಿತಾ ಕೂಡ ಈ ಸಿನಿಮಾ ಮಾಡಿ ಎಂದು ನಮಗೆ ಹೇಳಿದರು. ಹಲವು ಉತ್ತಮ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ’ ಎಂದರು.

ಇದನ್ನೂ ಓದಿ: ತಿರುಪತಿಯಲ್ಲಿ ದೇವರ ದರ್ಶನ ಪಡೆದು ಪ್ರಸಾದ ಹಂಚಿದ ರಚಿತಾ ರಾಮ್

ಈ ಸಿನಿಮಾ ಮೂಲಕ ನಟಿ ರಚಿತಾ ರಾಮ್ ಅವರಿಗೆ ‘ಲೇಡಿ ಸೂಪರ್​ ಸ್ಟಾರ್​’ ಎಂಬ ಬಿರುದು ನೀಡಲಾಗಿದೆ. ಆದರೆ ‘ನಾನು ಎಂದಿಗೂ ಅಭಿಮಾನಿಗಳ ಪ್ರೀತಿ ಬುಲ್ ಬುಲ್ ಆಗಿರುವೆ’ ಎಂದಿದ್ದಾರೆ ರಚಿತಾ. ‘6 ವರ್ಷಗಳ ಹಿಂದೆ ಇದೇ ಅಯೋಗ್ಯ ಸಿನಿಮಾ ಮುಹೂರ್ತ ಆಗಿತ್ತು. ಈಗ ಅಯೋಗ್ಯ 2 ಸೆಟ್ಟೇರುತ್ತಿದೆ. ತುಂಬಾ ಖುಷಿ ಆಗುತ್ತಿದೆ. ಅಶ್ವಿನಿ ಮೇಡಂ ಆಶೀರ್ವಾದವಿದೆ’ ಎಂದು ರಚಿತಾ ರಾಮ್ ಹೇಳಿದರು.

ರಚಿತಾ ರಾಮ್, ನೀನಾಸಂ ಸತೀಶ್ ಜೊತೆ ಸುಂದರ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ತಬಲ ನಾಣಿ, ಮಂಜು ಪಾವಗಡ ಅವರು ‘ಅಯೋಗ್ಯ 2’ ಚಿತ್ರದ ಪಾತ್ರವರ್ಗದಲ್ಲಿ ಇರಲಿದ್ದಾರೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ವಿಶ್ವಜಿತ್ ರಾವ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಯತ್ನಾಳ್ ಹೆಸರೇಳದೆ ನಾಯಿ-ಕುರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದ ಕಾಶಪ್ಪನವರ್
ಯತ್ನಾಳ್ ಹೆಸರೇಳದೆ ನಾಯಿ-ಕುರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದ ಕಾಶಪ್ಪನವರ್
ಅವಿವಾಹಿತ ಜಯಣ್ಣ ನಾಳೆ ಗೃಹಪ್ರವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು!
ಅವಿವಾಹಿತ ಜಯಣ್ಣ ನಾಳೆ ಗೃಹಪ್ರವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು!
ರಾಜ್ ಕುಮಾರ್, ಅಂಬರೀಶ್ ಅಂತ್ಯಕ್ರಿಯೆಗೂ ಶ್ರೀಗಂಧದ ಕಟ್ಟಿಗೆ ಬಳಸಲಾಗಿತ್ತು
ರಾಜ್ ಕುಮಾರ್, ಅಂಬರೀಶ್ ಅಂತ್ಯಕ್ರಿಯೆಗೂ ಶ್ರೀಗಂಧದ ಕಟ್ಟಿಗೆ ಬಳಸಲಾಗಿತ್ತು
ಸಂಬಂಧ ಬೆಳೆಸುವಾಗಲೂ ಕೃಷ್ಣ ನಮ್ಮನ್ನು ಮನೆಗೆ ಕರೆಸಿ ಮಾತಾಡಿದ್ದರು: ಸುರೇಶ್
ಸಂಬಂಧ ಬೆಳೆಸುವಾಗಲೂ ಕೃಷ್ಣ ನಮ್ಮನ್ನು ಮನೆಗೆ ಕರೆಸಿ ಮಾತಾಡಿದ್ದರು: ಸುರೇಶ್
ನಿನ್ನೆ ಶಿವಕುಮಾರ್ ಹೇಳಿದಂತೆ ಕೃಷ್ಣ ಜೊತೆ ಅವರದ್ದು ತಂದೆ ಮಗನ ಸಂಬಂಧ
ನಿನ್ನೆ ಶಿವಕುಮಾರ್ ಹೇಳಿದಂತೆ ಕೃಷ್ಣ ಜೊತೆ ಅವರದ್ದು ತಂದೆ ಮಗನ ಸಂಬಂಧ
KSRTC ಬಸ್​ ಚಾಲನೆ ವೇಳೆ ಮೊಬೈಲ್​ ಬಳಕೆ: ಚಾಲಕ ಅರೆಸ್ಟ್​
KSRTC ಬಸ್​ ಚಾಲನೆ ವೇಳೆ ಮೊಬೈಲ್​ ಬಳಕೆ: ಚಾಲಕ ಅರೆಸ್ಟ್​
ಮಾಜಿ ಸಿಎಂ SM ಕೃಷ್ಣ ಅಂತ್ಯಸಂಸ್ಕಾರ ನೇರಪ್ರಸಾರ
ಮಾಜಿ ಸಿಎಂ SM ಕೃಷ್ಣ ಅಂತ್ಯಸಂಸ್ಕಾರ ನೇರಪ್ರಸಾರ
ಎಸ್​ಎಂ ಕೃಷ್ಣ ಅಂತಿಮಯಾತ್ರೆ ವಾಹನದ ವಿಶೇಷವೇನು? ವಿಡಿಯೋ ನೋಡಿ
ಎಸ್​ಎಂ ಕೃಷ್ಣ ಅಂತಿಮಯಾತ್ರೆ ವಾಹನದ ವಿಶೇಷವೇನು? ವಿಡಿಯೋ ನೋಡಿ
Video: ಗುರುಗ್ರಾಮದ ಕ್ಲಬ್ ಹೊರಗೆ ಅವಳಿ ಬಾಂಬ್ ಸ್ಪೋಟ
Video: ಗುರುಗ್ರಾಮದ ಕ್ಲಬ್ ಹೊರಗೆ ಅವಳಿ ಬಾಂಬ್ ಸ್ಪೋಟ