AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಲ್ಡ್ ಸುರೇಶ್ ದೊಡ್ಮನೆಯಿಂದ ಹೊರ ಹೋಗಲು ಅಸಲಿ ಕಾರಣ ಹೊರಬಿತ್ತು; ವಿವರಿಸಿದ ಐಶ್ವರ್ಯಾ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಗೋಲ್ಡ್ ಸುರೇಶ್ ಅವರ ಅನಿರೀಕ್ಷಿತ ನಿರ್ಗಮನ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅವರ ತಂದೆಯ ಆರೋಗ್ಯದ ಸಮಸ್ಯೆ ಎಂಬ ವದಂತಿಗಳು ಹರಡಿತ್ತು. ಅವರ ತಂದೆಯೇ ಅದನ್ನು ನಿರಾಕರಿಸಿದ್ದಾರೆ. ಸುರೇಶ್ ಅವರ ವ್ಯಾಪಾರ ಅಥವಾ ಸಾಲದ ಸಮಸ್ಯೆಯಿಂದಾಗಿ ನಿರ್ಗಮನ ಸಂಭವಿಸಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ. ಆದರೆ, ನಿಜವಾದ ಕಾರಣವನ್ನು ಸುರೇಶ್ ಅವರೇ ಬಹಿರಂಗಪಡಿಸಬೇಕಿದೆ.

ಗೋಲ್ಡ್ ಸುರೇಶ್ ದೊಡ್ಮನೆಯಿಂದ ಹೊರ ಹೋಗಲು ಅಸಲಿ ಕಾರಣ ಹೊರಬಿತ್ತು; ವಿವರಿಸಿದ ಐಶ್ವರ್ಯಾ
ಸುರೇಶ್-ಐಶ್ವರ್ಯಾ
ರಾಜೇಶ್ ದುಗ್ಗುಮನೆ
|

Updated on:Dec 17, 2024 | 7:27 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸಾಕಷ್ಟು ಅಚ್ಚರಿಯ ಎಲಿಮಿನೇಷನ್​ಗಳು ನಡೆದು ಹೋಗಿವೆ. ಶಿಶಿರ್ ಅವರು ಹೊರ ಹೋಗುತ್ತಿದ್ದಂತೆ ಗೋಲ್ಡ್ ಸುರೇಶ್ ಕೂಡ ದೊಡ್ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬಂದಿದೆ. ‘ಮನೆಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಆಗಿದೆ’ ಎಂದು ದೊಡ್ಮನೆಯಲ್ಲಿ ಘೋಷಣೆ ಮಾಡಲಾಯಿತು. ಆ ಬಳಿಕ ಸುರೇಶ್ ಹೊರ ಹೋದರು. ಅವರು ಹೊರ ಹೋಗಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಚರ್ಚೆಗಳು ನಡೆದಿವೆ.

ಗೋಲ್ಡ್ ಸುರೇಶ್ ಎಲಿಮಿನೇಟ್ ಆಗಲು ಕಾರಣ ಏನು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಆರಂಭದಲ್ಲಿ ಗೋಲ್ಡ್ ಸುರೇಶ್ ತಂದೆ ಮೃತಪಟ್ಟರು ಎಂದು ವರದಿ ಆಯಿತು. ಆದರೆ, ಈ ಬಗ್ಗೆ ಅವರ ತಂದೆಯೇ ಸ್ಪಷ್ಟನೆ ಕೊಟ್ಟರು. ‘ನನಗೆ ಏನೂ ಆಗಿಲ್ಲ. ನಾನು ಆರೋಗ್ಯವಾಗಿ ಇದ್ದೇನೆ’ ಎಂದು ಹೇಳಿದ್ದರು. ಜೊತೆಗೆ ಊರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿಕೊಂಡಿದ್ದರು.

ಹಾಗಾದರೆ, ಏನು ಆ ತುರ್ತುಪರಿಸ್ಥಿತಿ ಎಂಬ ಬಗ್ಗೆ ಚರ್ಚೆಗಳು ಆಗಿವೆ. ಬಿಗ್ ಬಾಸ್ ಆದೇಶ ನೀಡುವಾಗ ‘ಹೆಚ್ಚು ಚಿಂತಿಸುವ ಅಗತ್ಯ ಇಲ್ಲ’ ಎಂದು ಹೇಳಿದ್ದಾರೆ. ಇದೇ ವಿಚಾರ ಇಟ್ಟುಕೊಂಡು ಐಶ್ವರ್ಯಾ ಅವರು ಚರ್ಚೆ ಮಾಡಿದ್ದಾರೆ. ಸುರೇಶ್ ಅವರು ಎಲಿಮಿನೇಟ್ ಆಗಲು ನಿಜವಾದ ಕಾರಣ ಏನು ಎಂಬುದನ್ನು ಚರ್ಚಿಸಿದ್ದಾರೆ.

‘ಬಹುಶಃ ಬಿಸ್ನೆಸ್​ನಲ್ಲಿ ಏನೋ ತೊಂದರೆ ಆಗಿರಬಹುದು ಎಂದು ನನಗೆ ಅನಿಸುತ್ತಿದೆ. ಕುಟುಂಬದಲ್ಲಿ ತೊಂದರೆ ಆಗಿದ್ದರೆ ಹೆದರುವ ಅಗತ್ಯ ಇಲ್ಲ ಎಂದೆಲ್ಲ ಹೇಳುತ್ತಿರಲಿಲ್ಲ. ಉದ್ಯಮದಲ್ಲಿಯೇ ಏನೋ ತೊಂದರೆ ಆಗಿದೆ. ಅವರು ಏನನ್ನೂ ಓಪನ್ ಆಗಿ ಹೇಳಿಕೊಂಡವರಲ್ಲ. ಇತ್ತೀಚೆಗೆ ಅವರು ಸಾಕಷ್ಟು ಸೈಲೆಂಟ್ ಆಗಿದ್ದರು’ ಎಂದು ಐಶ್ವರ್ಯಾ ಹೇಳಿದ್ದಾರೆ. ಈ ವಿಚಾರ ನಿಜ ಇರಬಹುದು ಎಂದು ಅನೇಕರಿಗೆ ಅನಿಸಿದೆ.

ಇದನ್ನೂ ಓದಿ: ಶಿಶಿರ್ ಎಲಿಮಿನೇಷನ್​ಗೆ ಕಾರಣ ಆಗಿದ್ದು ಐಶ್ವರ್ಯಾ? ಮೂಡಿದೆ ಅನುಮಾನ

ಸುರೇಶ್ ಅವರು ಸಾಲ ಮಾಡಿಕೊಂಡಿದ್ದರು ಎಂದು ಕೆಲವು ಕಡೆಗಳಲ್ಲಿ ವರದಿ ಆಗಿದೆ. ಆದರೆ, ನಿಜ ವಿಚಾರ ಏನು ಏಂಬುದನ್ನು ಸುರೇಶ್ ಅವರೇ ಮಾಧ್ಯಮಗಳ ಎದುರು ಬಂದು ಹೇಳಿಕೊಳ್ಳಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:27 am, Tue, 17 December 24

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ