AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಶಿರ್ ಎಲಿಮಿನೇಷನ್​ಗೆ ಕಾರಣ ಆಗಿದ್ದು ಐಶ್ವರ್ಯಾ? ಮೂಡಿದೆ ಅನುಮಾನ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಿಶಿರ್ ಹೊರಗುಳಿದ ನಂತರ ಐಶ್ವರ್ಯಾ ಮತ್ತು ಭವ್ಯಾ ನಡುವೆ ಜಗಳ ಶುರುವಾಗಿದೆ. ಐಶ್ವರ್ಯಾ ಅವರೇ ಶಿಶಿರ್ ಅವರನ್ನು ಟಾರ್ಗೆಟ್ ಮಾಡಿ ಹೊರಕ್ಕೆ ಕಳುಹಿಸಿದ್ದಾರೆ ಎಂದು ಭವ್ಯಾ ಆರೋಪಿಸಿದ್ದಾರೆ. ಶಿಶಿರ್ ನ ನಿರ್ಗಮನದಿಂದ ಐಶ್ವರ್ಯಾ ತುಂಬಾ ದುಃಖಿತರಾಗಿದ್ದಾರೆ ಮತ್ತು ಮನೆಯ ಸದಸ್ಯರ ಮೇಲೆ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ.

ಶಿಶಿರ್ ಎಲಿಮಿನೇಷನ್​ಗೆ ಕಾರಣ ಆಗಿದ್ದು ಐಶ್ವರ್ಯಾ? ಮೂಡಿದೆ ಅನುಮಾನ
ಐಶ್ವರ್ಯಾ-ಶಿಶಿರ್
TV9 Web
| Edited By: |

Updated on: Dec 17, 2024 | 7:02 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಕೆಲವೇ ವಾರಗಳಲ್ಲಿ ಶೋ ಪೂರ್ಣಗೊಳ್ಳಲಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಸಂಖ್ಯೆ 10ಕ್ಕೆ ಇಳಿಕೆ ಆಗಿದೆ. ಸ್ಪರ್ಧಿಗಳ ಮಧ್ಯೆ ಆಟ ಜೋರಾಗಿದೆ. ಕಳೆದ ವಾರ ಶಿಶಿರ್ ದೊಡ್ಮನೆಯಿಂದ ಔಟ್ ಆಗಿದ್ದರು. ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಐಶ್ವರ್ಯಾ ಅವರು ಕಾರಣವಾ? ಇಂಥದ್ದೊಂದು ಪ್ರಶ್ನೆ ದೊಡ್ಮನೆಯಲ್ಲಿ ಮೂಡಿದೆ. ಇದಕ್ಕೆ ಭವ್ಯಾ ಆಡಿದ ಮಾತೇ ಕಾರಣ.

ಶಿಶಿರ್ ಹಾಗೂ ಐಶ್ವರ್ಯಾ ತುಂಬಾನೇ ಆಪ್ತವಾಗಿದ್ದರು. ಇಬ್ಬರ ಮಧ್ಯೆ  ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ಈಗ ಶಿಶಿರ್ ಎಲಿಮಿನೇಟ್ ಆಗುವ ಮೂಲಕ ಅವರು ಸಾಕಷ್ಟು ಬೇಸರಗೊಂಡಿದ್ದಾರೆ. ಅವರು ತಮ್ಮ ಕೋಪವನ್ನು ಇಡೀ ಮನೆಯವರ ಮೇಲೆಲ್ಲ ತೋರಿಸಿದ್ದಾರೆ. ಶಿಶಿರ್​ನ ನಾಮಿನೇಟ್ ಮಾಡಿದವರ ಮೇಲೆ, ತಮ್ಮ ಬಗ್ಗೆ ಹೇಳಿಕೊಂಡವರ ಬಗ್ಗೆ ಕೂಗಾಡಿದ್ದಾರೆ.

ಶಿಶಿರ್ ಹೊರ ಹೋಗುತ್ತಿದ್ದಂತೆ ಐಶ್ವರ್ಯಾ ಅವರು ಜೋರಾಗಿ ಅರಚೋಕೆ ಆರಂಭಿಸಿದರು. ‘ಶಿಶಿರ್ ಮೇಲೆ ಇಲ್ಲದಿರೋ ಅಪವಾದ ಎಲ್ಲ ಹಾಕಿದ್ದೀಯಾ. ನೀನೇ ಟಾರ್ಗೆಟ್ ಮಾಡಿದ್ದು’ ಎಂದು ಐಶ್ವರ್ಯಾ ಅವರು ಭವ್ಯಾ ಎದುರು ಬಂದು ಹೇಳಿಕೊಂಡರು. ಇದಕ್ಕೆ ಸಿಟ್ಟಾದ ಭವ್ಯಾ, ‘ನೀನೆ ಶಿಶಿರ್​ನ ಟಾರ್ಗೆಟ್ ಮಾಡಿ ಗೇಟ್ ಎದುರು ತಂದು ನಿಲ್ಲಿಸಿದ್ದು’ ಎಂದು ಭವ್ಯಾ ಆರೋಪಿಸಿದರು.

ಭವ್ಯಾ ಗೌಡ ಈ ರೀತಿ ಹೇಳುವುದಕ್ಕೂ ಒಂದು ಕಾರಣ ಇದೆ. ಮನೆಯಲ್ಲಿ ಟಾರ್ಗೆಟ್ ಮಾಡಿ ನಾಮಿನೇಷನ್ ಮಾಡಬೇಕು ಎಂಬ ವಾಕ್ಯವನ್ನು ಐಶ್ವರ್ಯಾ ಹೇಳಿದ್ದರು. ಅದರಂತೆ ಐಶ್ವರ್ಯಾ, ಮೋಕ್ಷಿತಾ ಅವರು ತ್ರಿವಿಕ್ರಂ ಹಾಗೂ ಭವ್ಯಾ ಅವರನ್ನು ಟಾರ್ಗೆಟ್ ಮಾಡಿ ನಾಮಿನೇಟ್ ಮಾಡಿದ್ದರು. ಈ ಕಾರಣಕ್ಕೆ ಭವ್ಯಾ ಟಾಂಟ್ ಹೊಡೆದಿದ್ದಾರೆ.

ಶಿಶಿರ್ ಇಲ್ಲದೆ ಐಶ್ವರ್ಯಾ ಕಂಗಾಲಾಗಿದ್ದಾರೆ. ಏನು ಮಾಡಬೇಕು ಎಂಬುದು ಅವರಿಗೆ ತಿಳಿಯುತ್ತಿಲ್ಲ. ಪದೇ ಪದೇ ಅವರು ಇಡೀ ಮನೆಯ ಸದಸ್ಯರ ಮೇಲೆ ಕೂಗಾಟ ನಡೆಸುತ್ತಾ ಇದ್ದಾರೆ. ಅವರು ಈ ಮೊದಲು ಎಲಿಮಿನೇಷನ್​ನಿಂದ ಬಚಾವ್ ಆಗಿದ್ದರು. ಆ ಬಳಿಕ ಅವರು ಸಿಟ್ಟಾಗಿದ್ದಾರೆ.