ವಕ್ಫ್ ವಿರುದ್ಧ ಹೋರಾಟವನ್ನು ಡಿಸೆಂಬರ್ 26ರಿಂದ ಆರಂಭಿಸಲಾಗುವುದು: ರಮೇಶ್ ಜಾರಕಿಹೊಳಿ
ಮೊದಲ ಹಂತದ ಹೋರಾಟದ ಹಾಗೆಯೇ ಎರಡನೇ ಹಂತದ ಹೋರಾಟವನ್ನು ರೂಪಿಸಲಾಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳುತ್ತಾರೆ, ಅದರೆ ಯತ್ನಾಳ್ ಹೋರಾಟಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸೇರಿದಂತೆ ಎಲ್ಲರನ್ನೂ ಆಹ್ವಾನಿಸಲಾಗಿದೆ ಎಂದು ಹೇಳುತ್ತಾರೆ. ಕನ್ನಡಿಗರಿಗೆ ಇರುವ ಗೊಂದಲವೆಂದರೆ, ಮೊದಲ ಹಂತದ ಧರಣಿಯಲ್ಲಿ ಪಾಲ್ಗೊಳ್ಳದವರೆಲ್ಲ ಎರಡನೇ ಹಂತದ ಹೋರಾಟದಲ್ಲಿ ಭಾಗಿಯಾಗುವರೇ ಅನ್ನೋದು!
ಬೆಳಗಾವಿ: ಗೋಕಾಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡುವಾಗ ಕೊಂಚ ಅನ್ಯಮನಸ್ಕತೆ ಪ್ರದರ್ಶಿಸಿದರು. ವಕ್ಫ್ ವಿರುದ್ಧ ಎರಡನೇ ಹಂತದ ಯಾವಾಗ ಶುರುಮಾಡಲಿದ್ದೀರಿ ಅಂತ ಕೇಳಿದಾಗ ಅವರು, ಡಿಸೆಂಬರ್ 26, 27ರಿಂದ ಆರಂಭಿಸುತ್ತೇವೆ, ದಿನಾಂಕಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಬಹುದು ಎಂದು ಹೇಳಿದರು. ಮೊದಲ ಹಂತ ಹೋರಾಟದ ವರದಿಯನ್ನು ಈಗಾಗಲೇ ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯೇಂದ್ರ ಭ್ರಷ್ಟ, ಆತನ ನಾಯಕತ್ವಕ್ಕೆ ನನ್ನ ವಿರೋಧ; ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೇ ರಮೇಶ್ ಜಾರಕಿಹೊಳಿ ಕಿಡಿ
Latest Videos