ಮತ್ತೆ ಚೈತ್ರಾಗೆ ಕಳಪೆ, ಮನೆ ಮಂದಿಯಿಂದ ಟಾರ್ಗೆಟ್ ಆಗುತ್ತಿದ್ದಾರೆಯೇ

Bigg Boss Kannada: ಬಿಗ್​ಬಾಸ್ ಕನ್ನಡದ ಈ ವಾರ ಮತ್ತೆ ಚೈತ್ರಾ ಕುಂದಾಪುರಗೆ ಕಳಪೆ ಪಟ್ಟ ನೀಡಲಾಗಿದೆ. ತ್ರಿವಿಕ್ರಂಗೆ ಉತ್ತಮ ನೀಡಲಾಗಿದೆ. ಕಳಪೆ ಸ್ವೀಕರಿಸಿದ ಚೈತ್ರಾ ಈ ಮನೆಯಲ್ಲಿ ಮೊದಲು ಯಾರಿಗೆ ಕಳಪೆ ನೀಡಬೇಕು ಎಂದು ಗುರುತಿಸುತ್ತಾರೆ ಆ ನಂತರ ಅದಕ್ಕೆ ಕೊಡಬಹುದಾದ ಕಾರಣಗಳನ್ನು ಹುಡುಕುತ್ತಾರೆ ಎಂದು ಟೀಕಿಸುತ್ತಾರೆ.

ಮತ್ತೆ ಚೈತ್ರಾಗೆ ಕಳಪೆ, ಮನೆ ಮಂದಿಯಿಂದ ಟಾರ್ಗೆಟ್ ಆಗುತ್ತಿದ್ದಾರೆಯೇ
Chaithra Kundapura
Follow us
ಮಂಜುನಾಥ ಸಿ.
|

Updated on: Dec 20, 2024 | 11:19 PM

ಚೈತ್ರಾ ಕುಂದಾಪುರ ಬಿಗ್​ಬಾಸ್ ಮನೆಯ ಭಿನ್ನ ಸ್ಪರ್ಧಿಯಾಗಿದ್ದಾರೆ. ಒಮ್ಮೆ ಈಗಾಗಲೇ ಮನೆ ಬಿಟ್ಟು ಹೋಗಿ ಮತ್ತೆ ಬಂದಿದ್ದಾರೆ. ಆದರೆ ಮನೆಯ ಸದಸ್ಯರಿಂದ ಸತತವಾಗಿ ಟಾರ್ಗೆಟ್ ಆಗುತ್ತಿದ್ದಾರೆಯೇ ಎಂಬ ಅನುಮಾನವೂ ಸಹ ಮೂಡಿದೆ. ಈ ವಾರ ಟಾಸ್ಕ್​ಗಳಲ್ಲಿ ಚೈತ್ರಾ ಅವರಿಂದ ಒಳ್ಳೆಯ ಪ್ರದರ್ಶನ ಬಂದಿಲ್ಲ. ಆದರೆ ಉಸ್ತುವಾರಿಯಾಗಿ ಮನೆಯ ಸದಸ್ಯರಿಗೆ ಬೆವರು ಇಳಿಸಿದ್ದಾರೆ. ಚೈತ್ರಾ ಅವರ ಉಸ್ತುವಾರಿಯನ್ನು ಕೆಲವರು ಒಪ್ಪಿದರೆ ಹಲವರು ಒಪ್ಪಿಲ್ಲ. ಆದರೆ ವಾರಾಂತ್ಯಕ್ಕೆ ಎಲ್ಲರೂ ಸೇರಿ ಚೈತ್ರಾಗೆ ಕಳಪೆ ಕೊಟ್ಟಿದ್ದಾರೆ.

ಮೊದಲೇ ನಿರ್ಣಯ ಮಾಡಿಕೊಂಡಂತೆ ಒಬ್ಬರ ಮೇಲಾದಮೇಲೊಬ್ಬರು ಚೈತ್ರಾಗೆ ಕಳಪೆ ನೀಡಿದರು. ಪ್ರತಿ ವಾರಾಂತ್ಯದಲ್ಲಿ ಚೈತ್ರಾಗೆ ಕಳಪೆ ನೀಡುವ ಕೆಲವರು ಈ ವಾರವೂ ಅದನ್ನೇ ಮುಂದುವರೆಸಿದರು. ಈಗಾಗಲೇ ಮೂರು-ನಾಲ್ಕು ಬಾರಿ ಕಳಪೆ ಸ್ವೀಕಾರ ಮಾಡಿರುವ ಚೈತ್ರಾ ಈ ಬಾರಿಯಂತೂ ನಗು-ನಗುತ್ತಲೇ ಕಳಪೆ ಪಟ್ಟ ಸ್ವೀಕರಿಸಿ ಜೈಲಿಗೆ ಹೋದರು.

ರಜತ್, ಚೈತ್ರಾ ಅವರ ಉಸ್ತುವಾರಿ ಸರಿ ಇರಲಿಲ್ಲ. ಅವರು ಆಟಗಾರರಿಗೆ ನೆಮ್ಮದಿ ಕೊಡಲಿಲ್ಲ ಎಂದರು. ಚೈತ್ರಾ ಸಹ ರಜತ್ ಮಾತಿಗೆ ಪ್ರತ್ಯುತ್ತರಗಳನ್ನು ನೀಡಿದರು. ಧನರಾಜ್, ಹನುಮಂತು, ಭವ್ಯಾ ಗೌಡ, ಮೋಕ್ಷಿತಾ ಅವರುಗಳು ಸಹ ಚೈತ್ರಾಗೆ ಕಳಪೆ ನೀಡಿದರು. ಇದರಿಂದ ಬೇಸರಗೊಂಡ ಚೈತ್ರಾ, ಗುಂಪು ಮಾಡಿಕೊಂಡು ಕಳಪೆ ಕೊಡುತ್ತೀರ ಎಂದು ಆರೋಪ ಮಾಡಿದರು. ಮಾತ್ರವಲ್ಲದೆ ಇಲ್ಲಿ ಮೊದಲು ಯಾವ ವ್ಯಕ್ತಿಗೆ ಕಳಪೆ ಕೊಡಬೇಕು ಎಂದು ಫಿಕ್ಸ್ ಮಾಡುತ್ತಾರೆ ಆ ನಂತರ ಅದಕ್ಕೆ ಕಾರಣ ಹುಡುಕುತ್ತಾರೆ ಎಂದರು. ಚೈತ್ರಾ ಕೊನೆಗೆ ನಗು-ನಗುತ್ತಲೇ ಕಳಪೆ ಪಟ್ಟ ತೆಗೆದುಕೊಂಡು ಜೈಲಿಗೆ ಹೋದರು.

ಇದನ್ನೂ ಓದಿ:ಈ ಬಾರಿ ಬಿಗ್​ಬಾಸ್​ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್

ಚೈತ್ರಾಗೆ ಕಳಪೆ ಸಿಕ್ಕಿತು ಆದರೆ ವಿಕ್ರಂಗೆ ಉತ್ತಮ ಸಿಕ್ಕಿತು. ಅಂದಹಾಗೆ ಕಳೆದ ವಾರ ಚೈತ್ರಾ ಹಾಗೂ ತ್ರಿವಿಕ್ರಂ ಇಬ್ಬರಿಗೂ ಕಳಪೆ ಸಿಕ್ಕು ಇಬ್ಬರೂ ಒಟ್ಟಿಗೆ ಜೈಲು ಸೇರಿದ್ದರು. ಆದರೆ ತಮ್ಮ ಪ್ರದರ್ಶನ ಉತ್ತಮ ಮಾಡಿಕೊಂಡ ತ್ರಿವಿಕ್ರಮ್ ಈ ವಾರ ಕಳಪೆ ಆದರು. ಆದರೆ ಪ್ರದರ್ಶನ ಉತ್ತಮ ಮಾಡಿಕೊಳ್ಳದ ಚೈತ್ರಾ ಈ ವಾರವೂ ಕಳಪೆ ಆಗಿಯೇ ಉಳಿದುಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ