AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀ ಕನ್ನಡದಲ್ಲಿ ಬಂದಿದ್ರು ಐಶ್ವರ್ಯಾ ಸಿಂಧೋಗಿ; ಇಲ್ಲಿದೆ ಹಳೆಯ ವಿಡಿಯೋ

ಐಶ್ವರ್ಯಾ ಶಿಂಧೋಗಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಕಷ್ಟದ ಬಾಲ್ಯ ಮತ್ತು ‘ಸೂಪರ್ ಕ್ವೀನ್’ ರಿಯಾಲಿಟಿ ಶೋನಲ್ಲಿ ಅವರ ಭಾಗವಹಿಸುವಿಕೆ ವೈರಲ್ ಆಗಿದೆ. ಅವರ ತಂದೆ-ತಾಯಿಯ ನಷ್ಟದ ಬಗ್ಗೆ ಮಾತನಾಡುತ್ತಾ ಅವರು ಕಣ್ಣೀರು ಹಾಕಿದ್ದಾರೆ.

ಜೀ ಕನ್ನಡದಲ್ಲಿ ಬಂದಿದ್ರು ಐಶ್ವರ್ಯಾ ಸಿಂಧೋಗಿ; ಇಲ್ಲಿದೆ ಹಳೆಯ ವಿಡಿಯೋ
Aishwarya
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Dec 20, 2024 | 8:47 AM

Share

ಐಶ್ವರ್ಯಾ ಶಿಂಧೋಗಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರು ಸ್ಪರ್ಧಿಯಾಗಿ ಗಮನ ಸೆಳೆದಿದ್ದಾರೆ. ಅವರು ಕೆಲವು ವಿಚಾರಕ್ಕೆ ಟೀಕೆ ಕೂಡ ಆಗುತ್ತಿದ್ದಾರೆ. ಅಂದಹಾಗೆ, ಐಶ್ವರ್ಯಾ ಅವರಿಗೆ ಇದು ಮೊದಲ ರಿಯಾಲಿಟಿ ಶೋ ಅಲ್ಲ. ಈ ಮೊದಲು ಕೆಲವು ರಿಯಾಲಿಟಿ ಶೋಗಳಲ್ಲಿ ಅವರು ಸ್ಪರ್ಧೆ ಮಾಡಿದ್ದರು. ಅವರು ಜೀ ಕನ್ನಡದ ರಿಯಾಲಿಟಿ ಶೋಗೂ ಬಂದಿದ್ದರು.

ಜೀ ಕನ್ನಡದಲ್ಲಿ ಹಲವು ರಿಯಾಲಿಟಿ ಶೋಗಳು ಪ್ರಸಾರ ಕಂಡಿವೆ. ಆ ಪೈಕಿ ‘ಸೂಪರ್​ ಕ್ವೀನ್’ ರಿಯಾಲಿಟಿ ಶೋ ಕೂಡ ಒಂದು. ಈ ರಿಯಾಲಿಟಿ ಶೋಗೆ ಬಂದು ಅವರು ತಮ್ಮ ಕಷ್ಟದ ದಿನದ ಬಗ್ಗೆ ಹೇಳಿಕೊಂಡಿದ್ದರು. ಆ ವಿಡಿಯೋನ ಈಗ ವೈರಲ್ ಮಾಡಲಾಗುತ್ತಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಐಶ್ವರ್ಯಾ ಅವರಿಗೆ ತಂದೆ ತಾಯಿ ಇಬ್ಬರೂ ಇಲ್ಲ. ಅವರು ಕಷ್ಟಪಟ್ಟು ಜೀವನ ಸಾಗಿಸುತ್ತಾ ಇದ್ದಾರೆ. ಅವರು ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದರು. ‘ನನ್ನ ತಂದೆ ತಾಯಿ ನಿಧನ ಹೊಂದಿದಾಗ ನನ್ನ ಕುಟುಂಬದ ಯಾರೂ ನನ್ನತ್ತ ತಿರುಗಿ ನೋಡಿಲ್ಲ’ ಎಂದು ಐಶ್ವರ್ಯಾ ಅವರು ಹೇಳಿಕೊಂಡಿದ್ದರು. ‘ನನ್ನ ಸಿಂಬಾ (ಶ್ವಾನ) ನನಗೆ ಎಲ್ಲವೂ. ನನ್ನ ತಂದೆ-ತಾಯಿಯ ಪ್ರೀತಿಯನ್ನು ಅವನಲ್ಲಿ ನೋಡಿದ್ದೇನೆ’ ಎಂದು ಐಶ್ವರ್ಯಾ ಹೇಳಿದ್ದರು. ತಂದೆ ತಾಯಿಯನ್ನು ನೆನಪಿಸಿಕೊಂಡು ಅವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: ಹೆಂಗ್ ಹೆಂಗೋ ಆಡ್ತಿದ್ದಾರೆ ಬಿಗ್ ಬಾಸ್ ಐಶ್ವರ್ಯಾ 

ಐಶ್ವರ್ಯಾ ಅವರು ಈಗಾಗಲೇ ಬಿಗ್ ಬಾಸ್​ನಲ್ಲಿ ಎಲಿಮಿನೇಟ್ ಆಗಿ ಇರಬೇಕಿತ್ತು ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಕಾರಣವೂ ಇದೆ. ಒಂದು ವಾರದ ಎಲಿಮಿನೇಶನ್​ನಲ್ಲಿ ಶಿಶಿರ್ ಹಾಗೂ ಐಶ್ವರ್ಯ ಕೊನೆಯ ಹಂತದಲ್ಲಿ ಇದ್ದರು. ಆ ವಾರ ಶೋಭಾ ಶೆಟ್ಟಿ ತಾವೇ ಎಲಿಮಿನೇಟ್ ಆಗೋದಾಗಿ ಹೇಳಿಕೊಂಡರು. ಒಂದೊಮ್ಮೆ ಆ ವಾರ ಶೋಭಾ ಎಲಿಮಿನೇಟ್ ಆಗದೇ ಇದ್ದರೆ ಐಶ್ವರ್ಯಾ ಅವರು ಹೊರಹೋಗಬೇಕಿತ್ತು. ಆ ವಾರ ತಾವೇ ಎಲಿಮಿನೇಟ್ ಆಗುತ್ತೇನೆ ಎಂದು ಅವರಿಗೆ ಬಲವಾಗಿ ಅನಿಸಿತ್ತು. ಈ ಕಾರಣದಿಂದಲೇ ಕಣ್ಣೀರು ಹಾಕಿದ್ದರು. ಆದರೆ, ಅದೃಷ್ಟವಶಾತ್ ಅವರು ಬಚಾವ್ ಆದರು. ಈ ವಾರ ಯಾವುದೇ ಎಲಿಮಿನೇಷನ್ ನಡೆಯೋದಿಲ್ಲ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:47 am, Fri, 20 December 24

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್