ಬಿಗ್ ಬಾಸ್ನಲ್ಲಿ ಈ ವಾರವೂ ಇಲ್ಲ ಎಲಿಮಿನೇಷನ್; ಮತ್ತೊಂದು ಹೈಡ್ರಾಮಾಗೆ ರೆಡಿ ಆಗಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಲ್ಲಿ ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎಂಬ ಸುದ್ದಿ ಹಬ್ಬಿದೆ. ಗೋಲ್ಡ್ ಸುರೇಶ್ ಅವರ ನಿರ್ಗಮನದ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಮೋಕ್ಷಿತಾ, ಹನುಮಂತ, ರಜತ್ ಮತ್ತು ತ್ರಿವಿಕ್ರಂ ಈ ವಾರ ನಾಮಿನೇಟ್ ಆಗಿದ್ದಾರೆ. ಆದರೆ, ಈ ವಾರ ಯಾರೂ ಹೊರಗೆ ಹೋಗುವುದಿಲ್ಲ ಎನ್ನಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ನಡೆದ ಹೈಡ್ರಮಾಗಳು ಒಂದೆರಡಲ್ಲ. ಅದರಲ್ಲೂ ಎಲಿಮಿನೇಷನ್ ವಿಚಾರದಲ್ಲಿ ಸಾಕಷ್ಟು ನಾಟಕಗಳು ನಡೆದೇ ಹೋಗಿವೆ. ಈ ಸೀಸನ್ನಲ್ಲಿ ಮೂರು ಬಾರಿ ಎಲಿಮಿನೇಷನ್ ಮಾಡದೆ ವಾರ ಪೂರ್ಣಗೊಳಿಸಲಾಗಿದೆ. ಈಗ ಅದಕ್ಕೆ ಮತ್ತೊಂದು ಹೊಸ ಸೇರ್ಪಡೆ ಆಗುವ ಸೂಚನೆ ಸಿಕ್ಕಿದೆ. ಈ ವಾರ ಯಾವುದೇ ಎಲಿಮಿನೇಷನ್ ಇರೋದಿಲ್ಲ ಎನ್ನಲಾಗಿದೆ. ಅಲ್ಲದೆ, ಈ ವಾರ ಘಟಾನುಘಟಿಗಳೇ ನಾಮಿನೇಟ್ ಆಗಿದ್ದು, ಯಾರೂ ಹೊರ ಹೋಗುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಪ್ರತಿಬಾರಿ ಸೋಮವಾರ ಅಥವಾ ಮಂಗಳವಾರ ನಾಮಿನೇಷನ್ ಪ್ರಕ್ರಿಯೆಯ ಎಪಿಸೋಡ್ ಪ್ರಸಾರ ಕಾಣುತ್ತಿದ್ದವು. ಮಂಗಳವಾರದ ಬಳಿಕ ವೋಟಿಂಗ್ ಲೈನ್ ತೆರೆಯಲಾಗುತ್ತಿತ್ತು. ಶನಿವಾರದವರೆಗೆ ವೋಟ್ ಮಾಡಲು ಅವಕಾಶ ಇರುತ್ತಿತ್ತು. ಆದರೆ, ಈ ವಾರ ಗುರುವಾರ ನಾಮಿನೇಷ್ ಪ್ರಕ್ರಿಯೆ ಪೂರ್ಣಗೊಳಿಸಿರೋ ಎಪಿಸೋಡ್ ಪ್ರಸಾರ ಕಂಡಿದೆ. ಅಲ್ಲದೆ, ನಾಮಿನೇಟ್ ಆದವರಿಗೆ ವೋಟ್ ಮಾಡಿ ಎನ್ನುವ ಯಾವುದೇ ಪೋಸ್ಟ್ ಕೂಡ ತೋರಿಸಿಲ್ಲ.
ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪ್ರತಿ ವಾರ ನಾಮಿನೇಟ್ ಆದವರ ಫೋಟೋಗಳನ್ನು ಹಾಕಲಾಗುತ್ತದೆ. ಆದರೆ, ಈ ವಾರ ಯಾವುದೇ ಪೋಸ್ಟ್ ಹಾಕಿಲ್ಲ. ಅಲ್ಲದೆ, ವೋಟಿಂಗ್ ಲೈನ್ ಕೂಡ ತೆರೆದಿಲ್ಲ. ಹೀಗಾಗಿ, ಈ ವಾರ ‘ನೋ ಎಲಿಮಿನೇಷನ್ ವೀಕ್’ ಆಗಿರಲಿದೆ.
ಈ ವಾರ ಎಲಿಮಿನೇಷನ್ ಮಾಡದೆ ಇರಲು ಒಂದು ಕಾರಣವೂ ಇದೆ. ಕಳೆದ ವಾರಾಂತ್ಯದಲ್ಲಿ ಶಿಶಿರ್ ಅವರು ದೊಡ್ಮನೆಯಿಂದ ಹೊರ ಬಂದರು. ಇದಾದ ಬೆನ್ನಲ್ಲೇ ತುರ್ತುಪರಿಸ್ಥಿತಿಯ ಕಾರಣಕ್ಕೆ ಗೋಲ್ಡ್ ಸುರೇಶ್ ಬಿಗ್ ಬಾಸ್ನ ಅರ್ಧಕ್ಕೆ ಬಿಟ್ಟರು. ಇದು ಅನಿರೀಕ್ಷಿತವಾಗಿತ್ತು. ಈ ಕಾರಣಕ್ಕೆ ಈ ವಾರ ಯಾವುದೇ ಎಲಿಮಿನೇಷನ್ ಮಾಡದಿರಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ಗೆ ಈ ವಾರ ಸಿಕ್ಕ ಟಿಆರ್ಪಿ ಎಷ್ಟು? ಯಾವ ಧಾರಾವಾಹಿಗೆ ಟಾಪ್ ಸ್ಥಾನ?
ಈ ವಾರ ಮೋಕ್ಷಿತಾ, ಹನುಮಂತ, ರಜತ್ ಹಾಗೂ ತ್ರಿವಿಕ್ರಂ ನಾಮಿನೇಟ್ ಆಗಿದ್ದಾರೆ. ಸ್ಪರ್ಧಿಗಳ ಸಂಖ್ಯೆ ಕಡಿಮೆ ಇರುವುದರಿಂದ ನಾಮಿನೇಟ್ ಆದವರ ಸಂಖ್ಯೆಯೂ ಕಡಿಮೆ ಇದೆ. ಈ ವಾರ ಎಲಿಮಿನೇಷನ್ ವಿಚಾರದಲ್ಲಿ ಮತ್ತೊಂದು ಹೈಡ್ರಾಮಾ ನಡೆಯೋದು ಪಕ್ಕಾ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.