ಬಿಗ್ ಬಾಸ್​ಗೆ ಈ ವಾರ ಸಿಕ್ಕ ಟಿಆರ್​ಪಿ ಎಷ್ಟು? ಯಾವ ಧಾರಾವಾಹಿಗೆ ಟಾಪ್ ಸ್ಥಾನ?

2024ನೇ ಸಾಲಿನ 50ನೇ ವಾರದ ಕನ್ನಡ ಟಿವಿ ಟಿಆರ್ಪಿ ರೇಟಿಂಗ್ಸ್ ಬಿಡುಗಡೆಯಾಗಿದೆ. "ಲಕ್ಷ್ಮೀ ನಿವಾಸ" ಧಾರಾವಾಹಿ ಮೊದಲ ಸ್ಥಾನದಲ್ಲಿದ್ದರೆ, "ಲಕ್ಷ್ಮೀ ಬಾರಮ್ಮ" ಮತ್ತು "ಭಾಗ್ಯಲಕ್ಷ್ಮೀ" ಧಾರಾವಾಹಿಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಪಡೆದಿವೆ. "ಬಿಗ್ ಬಾಸ್ ಕನ್ನಡ ಸೀಸನ್ 11" ಸಹ ಗಮನಾರ್ಹ ಟಿಆರ್ಪಿಯನ್ನು ಗಳಿಸಿದೆ.

ಬಿಗ್ ಬಾಸ್​ಗೆ ಈ ವಾರ ಸಿಕ್ಕ ಟಿಆರ್​ಪಿ ಎಷ್ಟು? ಯಾವ ಧಾರಾವಾಹಿಗೆ ಟಾಪ್ ಸ್ಥಾನ?
Kichcha Sudeep
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Dec 19, 2024 | 6:54 PM

ಧಾರಾವಾಹಿಗಳ ಟಿಆರ್​ಪಿ ಬಗ್ಗೆ ವೀಕ್ಷಕರಿಗೆ ಹಾಗೂ ಆಯಾ ಧಾರಾವಾಹಿಗಳ ಅಭಿಮಾನಿಗಳಲ್ಲಿ ಒಂದಷ್ಟು ಕುತೂಹಲ ಅಂತೂ ಇದ್ದೇ ಇರುತ್ತದೆ. ಯಾವ ಧಾರಾವಾಹಿ ಯಾವ ಸ್ಥಾನದಲ್ಲಿ ಇದೆ ಎಂಬ ಪ್ರಶ್ನೆ ವೀಕ್ಷಕರಲ್ಲಿ ಇರುತ್ತದೆ. ಪ್ರತೀ ಗುರುವಾರ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಈಗ ‘ಬಿಗ್ ಬಾಸ್’ ಹಾಗೂ ಧಾರಾವಾಹಿಗಳ ಟಿಆರ್ಪಿ ಸಿಕ್ಕಿದೆ. 2024ನೇ ವರ್ಷದ 50ನೇ ವಾರದ ಡೇಟಾ ಇದಾಗಿದೆ. ಈ ವರ್ಷದಲ್ಲಿ ನಾಲ್ಕು ವಾರಗಳು ಕಳೆದರೆ 2024 ಪೂರ್ಣಗೊಳ್ಳಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ ಸಾಕಷ್ಟು ಗಮನ ಸೆಳೆದ ಶೋ. ಈ ಶೋನ ಟಿಆರ್ಪಿ ಹೊರ ಬಿದ್ದಿದೆ. ವಾರದ ದಿನಗಳಲ್ಲಿ ನಗರ ಭಾಗದಲ್ಲಿ 8.6 ಟಿವಿಆರ್, ಶನಿವಾರ 9.2 ಟಿವಿಆರ್ ಹಾಗೂ ಭಾನುವಾರ 9.7 ಟಿವಿಆರ್ ಸಿಕ್ಕಿದೆ. ವೀಕೆಂಡ್ನಲ್ಲಿ ಸುದೀಪ್ ಅವರ ಕಾರಣಕ್ಕಾಗಿ ಹೆಚ್ಚಿನ ಟಿಆರ್ಪಿ ಸಿಗುತ್ತಿದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

ಡಿಕೆಡಿ ಫಿನಾಲೆ ಇತ್ತೀಚೆಗೆ ನಡೆದಿದೆ. ಜೀ ಕನ್ನಡದಲ್ಲಿ ಪ್ರಸಾರ ಕಂಡ ಈ ಶೋ ಟಿಆರ್ಪಿ ಕೂಡ ಹೊರ ಬಿದ್ದಿದೆ. ಈ ರಿಯಾಲಿಟಿ ಶೋಗೆ ನಗರ ಭಾಗಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಟಿಆರ್ಪಿ ದೊರೆತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಟಿಆರ್ಪಿಯನ್ನು ಹಿಂದಿಕ್ಕಲು ಇದರ ಬಳಿ ಸಾಧ್ಯವಾಗಿಲ್ಲ.

ಇದನ್ನೂ ಓದಿ:ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು

ಧಾರಾವಾಹಿಗಳ ವಿಚಾರಕ್ಕೆ ಬರೋದಾದರೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಉತ್ತಮ ಟಿಆರ್ಪಿ ಪಡೆದಿದೆ. ಕಳೆದ ವಾರ ಈ ಧಾರಾವಾಹಿಗೆ ಎರಡನೇ ಸ್ಥಾನ ಸಿಕ್ಕಿತ್ತು. ಈ ಬಾರಿ ಅಚ್ಚರಿ ಎಂಬಂತೆ ಎರಡನೇ ಸ್ಥಾನ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಗೆ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಇದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಲಕ್ಷ್ಮೀ ಬಾರಮ್ಮ’ ಹಾಗೂ ‘ಭಾಗ್ಯಲಕ್ಮೀ’ ಧಾರಾವಾಹಿಗಳು ಈ ಮೊದಲು ಟಾಪ್ ಐದರಲ್ಲಿ ಸ್ಥಾನ ಪಡೆಯಲು ಕಷ್ಟಪಡುತ್ತಿದ್ದವು. ಆದರೆ, ಈ ಬಾರಿ ಈ ಧಾರಾವಾಹಿಗಳಿಗೆ ಎರಡು ಹಾಗೂ ಮೂರನೇ ಸ್ಥಾನ ಸಿಕ್ಕಿದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಹಾಗೂ ಐದನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು