ಕರ್ಮ ತಿರುಗಿ ಬಂತು: ಹೀನಾಯವಾಗಿ ಸೋತು ಬಾತ್​ರೂಮ್​ ಸೇರಿಕೊಂಡ ಚೈತ್ರಾ

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂದು ಅನೇಕರು ಹೇಳಿದ್ದಾರೆ. ಅದು ಮತ್ತೊಮ್ಮೆ ಸಾಬೀತಾಗಿದೆ. ಟಾಸ್ಕ್ ಆಡುವಾಗ ಅವರು ಹೀನಾಯ ಪ್ರದರ್ಶನ ನೀಡಿದ್ದಾರೆ. ಇದರಿಂದ ಅವರ ತಂಡಕ್ಕೆ ಹಿನ್ನಡೆ ಆಗಿದೆ. ಸೋತ ಬಳಿಕ ಚೈತ್ರಾ ಅವರು ಕಣ್ಣೀರು ಹಾಕಿದ್ದಾರೆ. ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ. ಇದು ಕರ್ಮದ ಫಲ ಎಂದು ದೊಡ್ಮನೆ ಮಂದಿ ಹೇಳಿದ್ದಾರೆ.

ಕರ್ಮ ತಿರುಗಿ ಬಂತು: ಹೀನಾಯವಾಗಿ ಸೋತು ಬಾತ್​ರೂಮ್​ ಸೇರಿಕೊಂಡ ಚೈತ್ರಾ
Bigg Boss Kannada 11
Follow us
ಮದನ್​ ಕುಮಾರ್​
|

Updated on: Dec 19, 2024 | 10:29 PM

ತಮ್ಮನ್ನು ಮಾನಸಿಕವಾಗಿ ಯಾರೂ ಕುಗ್ಗಿಸಲು ಸಾಧ್ಯವಿಲ್ಲ ಎಂಬ ಭ್ರಮೆ ಚೈತ್ರಾ ಕುಂದಾಪುರ ಅವರಿಗೆ ಇತ್ತು. ಆದರೆ ಆ ಭ್ರಮೆ ಈಗ ಕಳಚಿದೆ. ಬಿಗ್ ಬಾಸ್ ಮನೆಯು ಅವರಿಗೆ ಹಲವು ಪಾಠಗಳನ್ನು ಕಲಿಸಿದೆ. ಚೈತ್ರಾ ಎಷ್ಟು ದುರ್ಬಲ ವ್ಯಕ್ತಿ ಎಂಬುದು ಟಾಸ್ಕ್​ಗಳ ಮೂಲಕ ಗೊತ್ತಾಗಿದೆ. ಇತ್ತೀಚೆಗೆ ಬಿಗ್ ಬಾಸ್ ನೀಡಿದ ಟಾಸ್ಕ್​ನಲ್ಲಿ ಚೈತ್ರಾ ಕುಂದಾಪುರ ಅವರು ತುಂಬ ಕಳಪೆ ಪ್ರದರ್ಶನ ನೀಡಿದರು. ಅಲ್ಲದೇ ಉಸ್ತುವಾರಿ ನಿಭಾಯಿಸುವಾಗ ಪಕ್ಷಪಾತ ಕೂಡ ಮಾಡಿದರು. ಅದರ ಕರ್ಮ ತಿರುಗಿ ಬಂದಿದೆ. ತುಂಬ ಹೀನಾಯವಾಗಿ ಸೋತಿದ್ದರಿಂದ ಅವರು ಬಾತ್​ ರೂಮ್​ನಲ್ಲಿ ಕುಳಿತು ಅಳುವಂತಾಯಿತು.

ಎರಡು ಟೀಮ್​ನಲ್ಲಿ ಟಾಸ್ಕ್​ ನಡೆಯುತ್ತಿತ್ತು. ಒಂದು ಟೀಮ್​ಗೆ ಚೈತ್ರಾ ಕುಂದಾಪುರ ಅವರು ಉಸ್ತುವಾರಿ ಮಾಡುತ್ತಿದ್ದರು. ಆಗ ತಮ್ಮ ಟೀಮ್​ಗೆ ಅನುಕೂಲ ಆಗುವ ರೀತಿಯಲ್ಲಿ ಚೈತ್ರಾ ಅವರು ಪಕ್ಷಪಾತ ಮಾಡಿದರು. ಎದುರಾಳಿ ತಂಡಕ್ಕೆ ಬೇಕಂತಲೇ ಫೌಲ್ ನೀಡಿದ್ದರು. ಪದೇ ಪದೇ ಫೌಲ್​ ನೀಡಿ ಆಟವನ್ನು ಸೋಲಿಸಿದರು. ಇನ್ನೊಂದು ಟಾಸ್ಕ್​ ರದ್ದು ಕೂಡ ಆಯಿತು. ಇಂಥ ಬುದ್ಧಿ ತೋರಿಸಿದ್ದಕ್ಕೆ ಬಹುತೇಕರು ಗರಂ ಆದರು.

ನಂತರ ನೀಡಿದ ಟಾಸ್ಕ್​ನಲ್ಲಿ ಚೈತ್ರಾ ಅವರು ತುಂಬಾ ಹೀನಾಯ ಪ್ರದರ್ಶನ ನೀಡಿದರು. ಅವರ ಕಳಪೆ ಆಟದಿಂದಾಗಿ ಇಡೀ ತಂಡ ಸೋಲಬೇಕಾಯಿತು. ಒಂದು ಅಂಕ ಕೂಡ ಗಳಿಸಲು ಸಾಧ್ಯವಾಗದೇ ಕೈ ಚೆಲ್ಲಿದ ಚೈತ್ರಾಗೆ ಅವರದ್ದೇ ತಂಡದವರು ಕ್ಲಾಸ್ ತೆಗೆದುಕೊಂಡರು. ಇದರಿಂದ ಚೈತ್ರಾ ಮನಸ್ಸಿಗೆ ತುಂಬ ನೋವಾಯಿತು. ರಾತ್ರಿ ಅವರು ಬಾತ್​ ರೂಮ್​ಗೆ ಹೋಗಿ ಅಳುತ್ತಾ ಕುಳಿತು. ‘ಇದು ಕರ್ಮದ ಫಲ’ ಎಂದು ರಜತ್, ಐಶ್ವರ್ಯಾ ಮುಂತಾದವರು ಮಾತನಾಡಿಕೊಂಡರು.

ಇದನ್ನೂ ಓದಿ: ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್

ಈ ವಾರ ಪೈಪೋಟಿ ಜಾಸ್ತಿ ಆಗಿದೆ. ರಜತ್, ಮೋಕ್ಷಿತಾ ಪೈ, ಹನುಮಂತ ಮತ್ತು ತ್ರಿವಿಕ್ರಮ್ ಅವರು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರ ಜರ್ನಿ ಈ ವಾರ ಅಂತ್ಯ ಆಗಲಿದೆ. ಫಿನಾಲೆ ಹತ್ತಿರ ಆದಂತೆಲ್ಲ ಪೈಪೋಟಿ ಜಾಸ್ತಿ ಆಗುತ್ತಿದೆ. 81 ದಿನಗಳ ಪೂರ್ಣಗೊಂಡಿವೆ. ರಜತ್, ತ್ರಿವಿಕ್ರಮ್, ಮಂಜು, ಹನುಮಂತ ಟಫ್​ ಸ್ಪರ್ಧೆ ನೀಡುತ್ತಿದ್ದಾರೆ. ಈ ವಾರ ಚೈತ್ರಾ ಕುಂದಾಪುರ ನಾಮಿನೇಟ್ ಆಗಿಲ್ಲ. ಆದರೆ ಅವರು ಕಳಪೆ ಪಟ್ಟ ಪಡೆಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಅವರಿಗೆ 3 ಬಾರಿ ಕಳಪೆ ಪಟ್ಟ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ಸತತ 7 ಎಸೆತಗಳಲ್ಲಿ 7 ಬೌಂಡರಿ ಬಾರಿಸಿದ ಸ್ಮೃತಿ
ಸತತ 7 ಎಸೆತಗಳಲ್ಲಿ 7 ಬೌಂಡರಿ ಬಾರಿಸಿದ ಸ್ಮೃತಿ
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಬಿಜೆಪಿ ಮುಖಂಡ ಯಾರ ಒತ್ತಾಸೆ ಮೇರೆಗೆ ಸಂಪರ್ಕಿಸಿದರೋ ಗೊತ್ತಿಲ್ಲ: ಕೃಷ್ಣ
ಬಿಜೆಪಿ ಮುಖಂಡ ಯಾರ ಒತ್ತಾಸೆ ಮೇರೆಗೆ ಸಂಪರ್ಕಿಸಿದರೋ ಗೊತ್ತಿಲ್ಲ: ಕೃಷ್ಣ