‘ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತೀನಿ’; ಹನುಮಂತನ ನಿರ್ಧಾರಕ್ಕೆ ಎಲ್ಲರೂ ಶಾಕ್

‘ಬಿಗ್ ಬಾಸ್ ಕನ್ನಡ ಸೀಸನ್ 11’ ರಲ್ಲಿ ಹನುಮಂತ ಅವರು ಉತ್ತಮ ಆಟಗಾರರಾಗಿದ್ದಾರೆ. ಆದರೆ, ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭವ್ಯಾ ಜೊತೆಗಿನ ವಾದದ ನಂತರ, ಅವರು ದೊಡ್ಮನೆಯಿಂದ ಹೊರಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ನೆನಪಿನ ಶಕ್ತಿ ಕಡಿಮೆ ಇರುವುದು ಮತ್ತು ಉದ್ದವಾಗಿ ಮಾತನಾಡಲು ಅಸಮರ್ಥತೆ ಇರುವುದು ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

‘ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತೀನಿ’; ಹನುಮಂತನ ನಿರ್ಧಾರಕ್ಕೆ ಎಲ್ಲರೂ ಶಾಕ್
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on: Dec 20, 2024 | 7:25 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರ ಆಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಪ್ರತಿ ವಾರ ನಾಮಿನೇಟ್ ಆದರೂ ಅವರು ಮೊದಲು ಸೇವ್ ಆಗುತ್ತಿದ್ದಾರೆ. ಅವರು ಆಟವನ್ನು ಯಾವ ರೀತಿಯಲ್ಲಿ ಆಡುತ್ತಿದ್ದಾರೆ ಎಂಬುದಕ್ಕೆ ಹಿಡಿದ ಕೈಗನ್ನಡಿ ಆಗಿದೆ. ಈ ಮಧ್ಯೆ ಹನುಮಂತ ಅವರು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಹೇಳಿದ್ದು ಏನು? ಇದಕ್ಕೆ ಕಾರಣ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ 12ನೇ ವಾರದಲ್ಲಿ ಕ್ಯಾಪ್ಟನ್ಸಿ ರೇಸ್​ನಲ್ಲಿ ಆರು ಮಂದಿ ಇದ್ದರು. ಇದನ್ನು ಐದಕ್ಕೆ ಇಳಿಕೆ ಮಾಡಲು ಒಂದು ಟಾಸ್ಕ್ ನೀಡಲಾಗಿತ್ತು. ಪಕ್ಷಪಾತಿ, ಜನ ನಿರ್ವಹಣೆಯಲ್ಲಿ ಅಶಕ್ತ ಈ ರೀತಿಯ ನಾಲ್ಕು ಆಯ್ಕೆ ನೀಡಲಾಗಿತ್ತು. ಕ್ಯಾಪ್ಟನ್ಸಿ ರೇಸ್​ನಲ್ಲಿ ಇರುವ ಆರು ಮಂದಿಯ ಪೈಕಿ ಒಬ್ಬರ ಗುಣ ಯಾವುದಕ್ಕೆ ಹೊಂದಿಕೆ ಆಗುತ್ತದೆ ಎಂಬುದನ್ನು ಹೇಳಿ ಆ ಬಳಿಕ ಅವರನ್ನು ಸ್ವಿಮ್ಮಿಂಗ್​ಪೂಲ್​ಗೆ ತಳ್ಳಬೇಕು.

‘ಜನ ನಿರ್ವಹಣೆಯಲ್ಲಿ ಅಶಕ್ತ’ ಮತ್ತಿತ್ಯಾದಿ ಆಯ್ಕೆಯಲ್ಲಿ ಹನುಮಂತ ಅವರು ಭವ್ಯಾ ಹೆಸರನ್ನು ತೆಗೆದುಕೊಂಡರು. ಆದರೆ, ಇದನ್ನು ಭವ್ಯಾ ಅವರು ಒಪ್ಪಿಕೊಳ್ಳಲೇ ಇಲ್ಲ. ಬದಲಿಗೆ ಹನುಮಂತ ಬಳಿ ವಾದಕ್ಕೆ ಇಳಿದರು. ಈ ವಾದವನ್ನು ಮುಂದುವರಿಸಲು ಹನುಮಂತಗೆ ಯಾವುದೇ ಆಸಕ್ತಿ ಇರಲಿಲ್ಲ. ಹೀಗಾಗಿ, ಅವರು ಸುಮ್ಮನಾದರು. ಆದರೆ, ಭವ್ಯಾ ಮಾತ್ರ ಏನೇನೋ ಮಾತನಾಡುತ್ತಲೇ ಇದ್ದರು. ಈ ವಿಚಾರ ಭವ್ಯಾಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಈ ವಾರವೂ ಇಲ್ಲ ಎಲಿಮಿನೇಷನ್; ಮತ್ತೊಂದು ಹೈಡ್ರಾಮಾಗೆ ರೆಡಿ ಆಗಿ 

‘ದೋಸ್ತಾ ಬಸ್ ಬುಕ್ ಮಾಡು, ಊರಿಗೆ ಹೋಗ್ತೀನಿ’ ಎಂದು ಹನುಮಂತ ಹೇಳಿದರು. ಇದನ್ನು ಕೇಳಿ ಧನರಾಜ್​ಗೆ ಶಾಕ್ ಆಯಿತು. ಅವರು ಹನುಮಂತನ ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೆ, ಹನುಮಂತ ಅವರು ಇದಕ್ಕೆ ಒಪ್ಪಿಲ್ಲ. ‘ಇಲ್ಲಿ ನೆನಪು ಇಟ್ಟುಕೊಂಡು ಮಾತನಾಡುವವರು ಬೇಕು. ಆದರೆ, ನನಗೆ ಯಾವುದೂ ನೆನಪಿನಲ್ಲಿ ಇರಲ್ಲ. ಅಷ್ಟುದ್ದ ಮಾತನಾಡೋಕೆ ಬರಲ್ಲ. ನನಗೆ ನೆನಪಿನ ಶಕ್ತಿ ಕಡಿಮೆ ಇದೆ’ ಎಂದಿದ್ದಾರೆ ಹನುಮಂತ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಕ್ಕಳ ಕೈಗೆ ಕಪ್ಪು ಮಣಿ, ತಾಮ್ರದ ಕಡಗ ಹಾಕುವುದೇಕೆ? ಇಲ್ಲಿದೆ ಕಾರಣ
ಮಕ್ಕಳ ಕೈಗೆ ಕಪ್ಪು ಮಣಿ, ತಾಮ್ರದ ಕಡಗ ಹಾಕುವುದೇಕೆ? ಇಲ್ಲಿದೆ ಕಾರಣ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ಸತತ 7 ಎಸೆತಗಳಲ್ಲಿ 7 ಬೌಂಡರಿ ಬಾರಿಸಿದ ಸ್ಮೃತಿ
ಸತತ 7 ಎಸೆತಗಳಲ್ಲಿ 7 ಬೌಂಡರಿ ಬಾರಿಸಿದ ಸ್ಮೃತಿ
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ಈ ಬಾರಿ ಬಿಗ್​ಬಾಸ್​ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್
ಈ ಬಾರಿ ಬಿಗ್​ಬಾಸ್​ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ