ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಮೋಸ ಮಾಡುತ್ತಿದ್ದಾರೆ ಎಂಬುದು ರಜತ್ ಆರೋಪ. ಆ ಬಗ್ಗೆ ಅವರು ನೇರವಾಗಿಯೇ ಹೇಳಿದ್ದಾರೆ. ಚೈತ್ರಾ ಆಡುವ ಮೋಸದ ಆಟವನ್ನು ತಪ್ಪಿಸಲು ರಜತ್ ಅವರು ಒಂದು ಉಪಾಯ ಕಂಡು ಹಿಡಿದಿದ್ದಾರೆ. ಈ ಬಗ್ಗೆ ಅವರು ಧನರಾಜ್, ಐಶ್ವರ್ಯಾ ಮುಂತಾದವರ ಬಳಿ ಚರ್ಚೆ ಮಾಡಿದ್ದಾರೆ. ಅದರ ಪ್ರೋಮೋ ಇಲ್ಲಿದೆ.
ಉಸ್ತುವಾರಿ ಮಾಡುವಾಗ ಚೈತ್ರಾ ಕುಂದಾಪುರ ಪ್ರತಿ ಬಾರಿ ಮೋಸ ಮಾಡುತ್ತಾರೆ ಎಂದು ರಜತ್ ಆರೋಪ ಮಾಡಿದ್ದಾರೆ. ಹಾಗಾಗಿ ಟಾಸ್ಕ್ ಆರಂಭ ಆಗುವಾಗ ಅವರ ಮನ ಒಲಿಸಲು ಮಂತ್ರ ಹೇಳೋಣ ಎಂದು ರಜತ್ ಹೇಳಿದ್ದಾರೆ. ‘ಎಲ್ಲರೂ ಅವಳ ಕಾಲಿಗೆ ಬೀಳೋಣ. ಹೇಗಿದ್ರೂ ಅವಳು ಮೋಸ ಮಾಡುತ್ತಾಳೆ. ಆದರೂ ನಮ್ಮ ಪ್ರಯತ್ನ ಮಾಡೋಣ. ಸ್ವಲ್ಪ ಕಡಿಮೆ ಮೋಸ ಮಾಡು ಎನ್ನೋಣ. ಆಕೆಗೆ ಪೂಜೆ ಮಾಡಿ, ಗಂಟೆ ಹೊಡೆದು ಮಂತ್ರ ಹೇಳೋಣ’ ಎಂದಿದ್ದಾರೆ ರಜತ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos