Karnataka Assembly Session: ಕಾಂಗ್ರೆಸ್ ತಂದ ವಕ್ಫ್ ಕಾಯ್ದೆಯಿಂದಾಗಿ ನಾವು ರೈತರಿಗೆ ನೋಟೀಸ್ ಜಾರಿಮಾಡಬೇಕಾಯಿತು: ಆರ್ ಅಶೋಕ
Karnataka Assembly Session: ಸಚಿವ ಜಮೀರ್ ಅಹ್ಮದ್ ಉತ್ತರ ನೀಡಲು ಅಣಿಯಾಗುತ್ತಿದ್ದಂತೆಯೇ ಅವರ ನೆರವಿಗೆ ಹೋಗುವ ಸಿಎಂ ಸಿದ್ದರಾಮಯ್ಯ, ಸಚಿವ ಸರ್ಕಾರದ ಪರವಾಗಿ ನೀವು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾರೆ, ಅವರನ್ನು ಮಾತಾಡಲು ಬಿಡಿ, ನಿಮಗೆ ಸಂದೇಹ ಗೊಂದಲಗಳಿದ್ದರೆ ಅವರು ಉತ್ತರ ನೀಡಿದ ಮೇಲೆ ಕೇಳಿ, ಅವರು ಸ್ಪಷ್ಟನೆ ನೀಡುತ್ತಾರೆ ಎಂದು ಹೇಳುತ್ತಾರೆ.
ಬೆಳಗಾವಿ: ವಕ್ಫ್ ಮಂಡಳಿ ಜಾರಿ ಮಾಡಿದ ನೋಟೀಸ್ ಗಳಿಗೆ ಸಂಬಂಧಿಸಿದಂತೆ ಸಚಿವ ಬಿಜೆಡ್ ಜಮೀರ್ ಆಹ್ಮದ್ ಖಾನ್ ಉತ್ತರ ಕೊಡುವಾಗ ವಿರೋಧ ಪಕ್ಷದ ನಾಯಕ ಅರ್ ಅಶೋಕ ಮತ್ತು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ತಕರಾರು ಎತ್ತಿದರು. ನೀವು ಜಾರಿಗೆ ತಂದ ನಿಯಮದಿಂದಾಗಿ ನಮ್ಮ ಸರ್ಕಾರ ರೈತರಿಗೆ ನೋಟೀಸ್ ನೀಡುವ ಪ್ರಸಂಗ ಎದುರಾಯಿತು ಎಂದು ಅಶೋಕ ಹೇಳಿದರೆ ಅವರ ನಂತರ ಮಾತಾಡಿದ ಬೆಲ್ಲದ್, ನಮ್ಮ ಸರ್ಕಾರ ನೋಟೀಸ್ಗಳನ್ನು ಕೊಟ್ಟಿದ್ದು ಅಂತ ಹೇಳಬೇಡಿ, ಅದನ್ನು ಕೊಟ್ಟಿದ್ದು ಶಾಸಕಾಂಗ ಸಮಿತಿ, ಈಗ ನಿಮ್ಮ ಉತ್ತರ ಹೇಳಿ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos