Daily Devotional: ಮನೆಯಲ್ಲಿನ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು, ಯಾಕೆ? ಅಧ್ಯಾತ್ಮ ಕಾರಣ ಇಲ್ಲಿದೆ

Daily Devotional: ಮನೆಯಲ್ಲಿನ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು, ಯಾಕೆ? ಅಧ್ಯಾತ್ಮ ಕಾರಣ ಇಲ್ಲಿದೆ

TV9 Web
| Updated By: Ganapathi Sharma

Updated on:Dec 19, 2024 | 6:44 AM

ಜ್ಯೋತಿಷಿ ಬಸವರಾಜ ಗುರೂಜಿಯವರು, ಹಿಂದೂ ಧರ್ಮದ ಪ್ರಕಾರ ಕೆಲವು ಪವಿತ್ರ ವಸ್ತುಗಳನ್ನು ನೆಲದ ಮೇಲೆ ಇಡಬಾರದು ಎಂದು ಹೇಳುತ್ತಾರೆ. ಭೂಮಿಯ ಗುರುತ್ವಾಕರ್ಷಣೆಯಿಂದಾಗಿ ಅವುಗಳ ಪವಿತ್ರತೆ ಮತ್ತು ಶಕ್ತಿ ಕಡಿಮೆಯಾಗುತ್ತದೆ ಎಂಬುದು ಅವರ ಅಭಿಪ್ರಾಯ. ಯಾವ ವಸ್ತುಗಳನ್ನು ನೆಲದ ಮೇಲೆ ಇಡಬಾರದು ಮತ್ತು ಏಕೆ ಎಂಬುದನ್ನು ತಿಳಿಸಿದ್ದಾರೆ. ಮನೆಯ ಪರಿಶುದ್ಧತೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಈ ಮಾಹಿತಿ ಸಹಾಯಕವಾಗಿದೆ.

ನಮ್ಮ ಮನೆಯಲ್ಲಿ ಹಲವು ವಸ್ತುಗಳನ್ನು ಬಹಳ ಪಾವಿತ್ರ್ಯದಿಂದ ಉಪಯೋಗಿಸುತ್ತೇವೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಕೆಲವೊಂದು ಪವಿತ್ರವಾದ ವಸ್ತುಗಳನ್ನು ಭೂಮಿಯ ಮೇಲೆ ಇಡಬಾರದು ಎನ್ನಲಾಗುತ್ತದೆ. ಭೂಮಿಗೆ ಗುರುತ್ವಾಕರ್ಷಣೆ ಬಲ ಇರುವುದರಿಂದ ಅದು ಎಲ್ಲವನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಾಗಾಗಿ, ಮನೆಯಲ್ಲಿ ಉಪಯೋಗಿಸುವ ಕೆಲವು ವಸ್ತುಗಳನ್ನು ನೆಲದ ಮೇಲೆ ಇಟ್ಟರೆ, ಆ ವಸ್ತುವಿನ ಶಕ್ತಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ವಸ್ತುವಿನ ಪಾವಿತ್ರ್ಯತೆಯೂ ಕಡಿಮೆಯಾಗುತ್ತದೆ. ಯಾವ ಯಾವ ವಸ್ತುಗಳನ್ನು ನೆಲದ ಮೇಲೆ ಇಡಬಾರದು? ಯಾಕೆ ಇಡಬಾರದು ಎಂಬ ಪ್ರಶ್ನೆಗೆ ಹಾಗೂ ಈ ಕುರಿತ ನಂಬಿಗೆಳ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ಉತ್ತರಿಸಿದ್ದಾರೆ.

Published on: Dec 19, 2024 06:42 AM