Karnataka Assembly Session: ಸರ್ಕಾರದ ಧೋರಣೆ ವಿರೋಧಿಸಿ ಬಿಜೆಪಿ ಸಭಾತ್ಯಾಗ, ತಡೆಯುವ ವ್ಯರ್ಥ ಪ್ರಯತ್ನ ಮಾಡಿದ ಸ್ಪೀಕರ್
Karnataka Assembly Session: ಮುಖ್ಯಮಂತ್ರಿಯವರಲ್ಲದೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸಹ ಸರ್ಕಾರದ ಪರವಾಗಿ ಮಾತಾಡುತ್ತಾರೆ. ಆದರೆ, ವಿರೋಧ ಪಕ್ಷದ ನಾಯಕರು ಅವರ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ಪ್ರದರ್ಶಿಸುವುದಿಲ್ಲ. ಸಭಾತ್ಯಾಗ ಮಾಡುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ತಡೆಯುವ ಪ್ರಯತ್ನವನ್ನು ಸ್ಪೀಕರ್ ಯುಟಿ ಖಾದರ್ ಮಾಡುತ್ತಾರೆ. ಅದರೆ ಅವರ ಪ್ರಯತ್ನವೂ ವ್ಯರ್ಥವಾಗುತ್ತದೆ.
ಬೆಳಗಾವಿ: ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಬೆಳಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಉತ್ತರ ಕರ್ನಾಟಕದ ಮೇಲೆ ಚರ್ಚೆ ನಡೆಯುತ್ತಿದ್ದಾಗ ಸುಗಮವಾಗಿ ನಡೆಯುತಿತ್ತು. ಅದರೆ ವಕ್ಫ್ ನೋಟೀಸ್ ಗಳ ಚರ್ಚೆ ಮೇಲೆ ಚರ್ಚೆ ಶುರುವಾಯುದಾಗ ಗಲಾಟೆ ಶುರುವಾಯಿತು. ಮುಖ್ಯಮಂತ್ರಿ ಉತ್ತರ ನೀಡುವಾಗಲೂ ವಿಪಕ್ಷ ನಾಯಕ ಆರ್ ಅಶೋಕ, ಅಶ್ವಥ್ ನಾರಾಯಣ, ಸುನೀಲ್ ಕಮಾರ್ ಮತ್ತು ಇತರ ಹಲವಾರು ನಾಯಕರು ಒಟ್ಟೊಟ್ಟಿಗೆ ಮಾತಾಡುತ್ತಾರೆ. ಸಿಎಂ ಏನು ಹೇಳುತ್ತಿದ್ದಾರೆ ಅನ್ನೋದು ಕೇಳಿಸಲ್ಲ. ಕೂಗಾಡುತ್ತಲೇ ಬಿಜೆಪಿ ಶಾಸಕರು ಸಭಾತ್ಯಾಗ ಮಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Assembly Session: ಕಾಂಗ್ರೆಸ್ ತಂದ ವಕ್ಫ್ ಕಾಯ್ದೆಯಿಂದಾಗಿ ನಾವು ರೈತರಿಗೆ ನೋಟೀಸ್ ಜಾರಿಮಾಡಬೇಕಾಯಿತು: ಆರ್ ಅಶೋಕ
Latest Videos