ಈ ಬಾರಿ ಬಿಗ್ಬಾಸ್ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ರಿಂದ ಗೋಲ್ಡ್ ಸುರೇಶ್ ಹೊರಗೆ ಬಂದಿದ್ದಾರೆ. ಅವರು ಎಲಿಮಿನೇಟ್ ಆಗಿ ಬಂದಿಲ್ಲ ಬದಲಿಗೆ ವೈಯಕ್ತಿಕ ಕಾರಣಕ್ಕೆ ಹೊರಗೆ ಬಂದಿದ್ದಾರೆ. ಹೊರಗೆ ಬಂದ ಬಳಿಕ ಮಾಧ್ಯಮಗಳ ಬಳಿ ಮಾತನಾಡಿ, ಈ ಸೀಸನ್ ಗೆಲ್ಲುವವರು ಯಾರೆಂದು ಹೇಳಿದ್ದಾರೆ.
ಗೋಲ್ಡ್ ಸುರೇಶ್ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಷನ್ ಇಲ್ಲದೆ, ವೈಯಕ್ತಿಕ ಕಾರಣಗಳಿಂದಾಗಿ ಸುರೇಶ್ ಬಿಗ್ಬಾಸ್ ತೊರೆದು ಬಂದಿದ್ದಾರೆ. ತಾವು ಬಿಗ್ಬಾಸ್ ಬಿಟ್ಟು ಹೊರಗೆ ಬಂದಿದ್ದು ಏಕೆ ಎಂಬುದನ್ನು ಸಹ ವಿವರಿಸಿದ್ದಾರೆ. ಉದ್ಯಮದ ಕಾರಣದಿಂದಾಗಿ ಸುರೇಶ್ ಅವರು ಬಿಗ್ಬಾಸ್ ತೊರೆದು ಬಂದರಂತೆ. 50 ದಿನಕ್ಕೂ ಹೆಚ್ಚು ಸಮಯದಿಂದ ಬಿಗ್ಬಾಸ್ ಮನೆಯಲ್ಲಿದ್ದ ಸುರೇಶ್ ಒಳಗಿರುವವರ ಆಟವನ್ನು ಹತ್ತಿರದಿಂದ ನೋಡಿದ್ದಾರೆ. ಇದೀಗ ಹೊರಗೆ ಬಂದ ಬಳಿಕ ಟಿವಿ9ಗೆ ನೀಡಿರುವ ಸಂದರ್ಶನದಲ್ಲಿ ಈ ಬಾರಿ ಬಿಗ್ಬಾಸ್ ಯಾರು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos